ಟ್ರಂಪ್ ಪತ್ನಿ ಪ್ರತಿಮೆಗೆ ಬೆಂಕಿ

ಅಮೆರಿಕ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್ ಮರದ ಪ್ರತಿಮೆಗೆ ಬೆಂಕಿ ಹಚ್ಚಿ ವಿರೂಪಗೊಳಿಸಿರುವ ಘಟನೆ ಸ್ಲೋವೆನಿಯಾದ ಸೆವೆನ್ಸಿಯಾದಲ್ಲಿ ನಡೆದಿರುವುದಾಗಿ ತಿಳಿಸಿದೆ. ಮೆಲನಿಯಾ ಟ್ರಂಪ್ ಅವರ ಹುಟ್ಟೂರಾದ ಸ್ಲೋವೆನಿಯಾದ ಸೆವೆನ್ಸಿಯಾದಲ್ಲಿ ಮರದ ಪ್ರತಿಮೆ ನಿರ್ಮಾಣ ಮಾಡಲಾಗಿತ್ತು. ಮರದ ಪ್ರತಿಮೆಗೆ ಬೆಂಕಿ ಹಚ್ಚಿರುವ ಘಟನೆ ನಡೆದಿರುವುದಾಗಿ ಪ್ರತಿಮೆ ನಿರ್ಮಿಸಿದ್ದ ಬರ್ಲಿನ್ ಮೂಲದ ಅಮೆರಿಕ ಕಲಾವಿದ ಬ್ರ‍್ಯಾಡ್ ಡೌನಿ ಮಾಹಿತಿ ನೀಡಿದ್ದಾರೆ. ಪ್ರತಿಮೆಯನ್ನು ಯಾಕೆ ವಿರೂಪಗೊಳಿಸಿದರು ನನಗೆ ತಿಳಿಯಬೇಕಾಗಿದೆ. ಅಮೆರಿಕದಲ್ಲಿ ಈಗಾಗಲೇ ಜನಾಂಗೀಯ ದ್ವೇಷ ಹೊತ್ತಿ ಉರಿಯುತ್ತಿದೆ. ಇಂತಹ ಸಂದರ್ಭದಲ್ಲಿ ಈ ದ್ವೇಷ ಶಮನಗೊಳಿಸಲು ಇದು ಸಕಾಲವಾಗಿದೆ. ಅಷ್ಟೇ ಅಲ್ಲ ಮೆಲನಿಯಾ ಟ್ರಂಪ್ ವಲಸಿಗನನ್ನು ವಿವಾಹವಾಗುವ ಮೂಲಕ ತಮ್ಮ ಸ್ಥಾನ ಏನೆಂಬುದನ್ನು ತೋರ್ಪಡಿಸಿದ್ದಾರೆ ಎಂದು ಡೌನಿ ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಡಾ.ಬಿ.ಆರ್.ಅಂಬೇಡ್ಕರ್ ಅವರ ಮನೆ ಮೇಲೆ ದಾಳಿ

Thu Jul 9 , 2020
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮುಂಬೈಯಲ್ಲಿನ ಮನೆ ರಾಜ್‍ಗೃಹ ಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದಾರೆ. ಈ ಹಿನ್ನೆಲೆ ತೀವ್ರವಾಗಿ ಖಂಡಿಸಿರುವ ದಲಿತ ಸಂಘರ್ಷ ಸಮಿತಿ, ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ, ಅವರನ್ನು ದೇಶದಿಂದಲೇ ಗಡಿಪಾರು ಮಾಡಬೇಕೆಂದು ಸಮಿತಿಯ ಬೆಂಗಳೂರು ವಿಭಾಗೀಯ ಸಂಚಾಲಯ ಮಂಜುನಾಥ ಅಣ್ಣಯ್ಯ ಆಗ್ರಹಿಸಿದ್ದಾರೆ. ದಾಳಿ ವೇಳೆ ದುಷ್ಕರ್ಮಿಗಳು ಮನೆಯಲ್ಲಿನ ಸಿಸಿಟಿವಿ ಕ್ಯಾಮರ, ಕಿಟಕಿ ಗಾಜುಗಳನ್ನು ಪುಡಿಮಾಡಿದ್ದು, ಹೂವಿನ ಗಿಡಗಳನ್ನು ಧ್ವಂಸ ಮಾಡಿದ್ದಾರೆ. ಈ ಪ್ರಕರಣವನ್ನು ಪೊಲೀಸರು ಕೂಡಲೇ ತನಿಖೆ […]

Advertisement

Wordpress Social Share Plugin powered by Ultimatelysocial