ಡೆಲ್ಲಿ ಐಪಿಎಲ್ ತಂಡಕ್ಕೆ ಸೆಹವಾಗ್ ನಾಯಕ

ಆಕಾಶ್ ಚೋಪ್ರಾ ಪ್ರಕಟಿಸಿದ ಸಾರ್ವಕಾಲಿಕ ಶ್ರೇಷ್ಠ ಡೆಲ್ಲಿ ಐಪಿಎಲ್ ತಂಡಕ್ಕೆ ವೀರೇಂದ್ರ ಸೆಹವಾಗ್ ನಾಯಕರಾಗಿದ್ದಾರೆ. ಡೆಲ್ಲಿ ಪರ ಆಡಿದ ವೇಳೆ ಸೆಹವಾಗ್ ೧೬೦.೩ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇವರ ಜತೆಗಾರನಾಗಿ ಕಾಣಿಸಿಕೊಂಡವರು ಗೌತಮ್ ಗಂಭೀರ್. ಚೋಪ್ರಾ ಪ್ರಕಟಿಸಿದ ಡೆಲ್ಲಿ ತಂಡದಲ್ಲಿ ಕೆವಿನ್ ಪೀಟರ್‌ಸನ್ ಸ್ಥಾನ ಸಂಪಾದಿಸಿಲ್ಲ. ವನ್‌ಡೌನ್‌ನಲ್ಲಿ ಎಬಿ ಡಿ ವಿಲಿಯರ್ ಕಾಣಿಸಿಕೊಂಡಿದ್ದಾರೆ. ಹಾಲಿ ನಾಯಕ ಅಯ್ಯರ್, ಕೀಪರ್ ಪಂತ್ ಈ ತಂಡದಲ್ಲಿದ್ದಾರೆ. ವೀರೇಂದ್ರ ಸೆಹವಾಗ್, ಗೌತಮ್ ಗಂಭೀರ್, ಎಬಿ ಡಿ ವಿಲಿಯರ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಜೆಪಿ ಡ್ಯುಮಿನಿ, ಕ್ರಿಸ್ ಮಾರಿಸ್, ಶಾಬಾಜ್ ನದೀಂ, ಅಮಿತ್ ಮಿಶ್ರಾ, ಡರ್ಕ್ ನ್ಯಾನ್ಸ್ ಮತ್ತು ಆಶಿಷ್ ನೆಹ್ರಾ ತಂಡದಲ್ಲಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಹಲೋ ಪೊಲೀಸ್ ಕಂಟ್ರೋಲ್ ರೂಂ

Mon Jul 6 , 2020
ತಮಿಳು ಸಿನಿಮಾ ಪ್ರೇಮಿಗಳ ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್ ಮನೆಗೆ ಬಾಂಬ್ ಇಡಲಾಗಿದೆ ಎಂದು ಭಾನುವಾರ ಮಧ್ಯರಾತ್ರಿ ಚೆನ್ನೈ ಪೊಲೀಸ್ ಕಂಟ್ರೋಲ್ ರೂಂಗೆ ಕರೆಯೊಂದು ಬಂದಿರುವುದಾಗಿ ವರದಿ ತಿಳಿಸಿದೆ.ಚೆನ್ನೈನ ಸಾಲಿಗ್ರಾಮಂನಲ್ಲಿರುವ ನಟ ವಿಜಯ್ ಅವರ ಮನೆಗೆ ಬಾಂಬ್ ಇಡಲಾಗಿದೆ ಎಂದು ಪೊಲೀಸ್ ಕಂಟ್ರೋಲ್ ರೂಂಗೆ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿದ್ದ. ಕೊನೆಗೂ ಆ ಕರೆಯನ್ನು ಪತ್ತೆಹಚ್ಚಿದ್ದು, ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ಈ ಕರೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಾನಸಿಕ […]

Advertisement

Wordpress Social Share Plugin powered by Ultimatelysocial