ಡ್ರೋನ್​ ಮೂಲಕ ವೈದ್ಯಕೀಯ ಸಾಮಗ್ರಿ ಪೂರೈಕೆ..!

ಓಬನ್: ವೆಚ್ಚ ಮತ್ತು ವಿತರಣಾ ಸಮಯವನ್ನು ಕಡಿತಗೊಳಿಸುವ ಉದ್ದೇಶದಿಂದ ಸ್ಕಾಟ್​ಲ್ಯಾಂಡ್​ನಲ್ಲಿ ವೈದ್ಯಕೀಯ ಸಾಮಗ್ರಿಗಳನ್ನು ತಲುಪಿಸಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಸ್ಕಾಟ್‌ಲ್ಯಾಂಡ್‌ನ ಪಶ್ಚಿಮ ಕರಾವಳಿಯ ದ್ವೀಪವೊಂದಕ್ಕೆ ಹೆಚ್ಚು ಅಗತ್ಯವಿರುವ ವೈದ್ಯಕೀಯ ಸಾಮಗ್ರಿಗಳನ್ನು ತಲುಪಿಸಲು  ಬಳಸಲಾಗುತ್ತಿದೆ. ವಿಶೇಷವಾಗಿ ಕೊರೊನಾ ವೈರಸ್​ನಂತ ವೈದ್ಯಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಡ್ರೋನ್​ಗಳು ಹೆಚ್ಚು ನೆರವಾಗಲಿವೆ. ಹಲವಾರು ಕಿಲೋ ಗ್ರಾಂ ವೈದ್ಯಕೀಯ ಸಾಮಗ್ರಿಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿರುವ ಡ್ರೋನ್ ಬುಧವಾರ ತನ್ನ ಮೊದಲ ಹಾರಾಟವನ್ನು ಸ್ಕಾಟ್ಲೆಂಡ್‌ನ ಓಬನ್‌ನಿಂದ 16 ಕಿಲೋ ಮೀಟರ್ ದೂರದಲ್ಲಿರುವ ಐಸ್ಲೆ ಆಫ್ ಮುಲ್‌ಗೆ ತಲುಪಿತು. ಸ್ಥಳೀಯ ಕೌನ್ಸಿಲ್ ಪ್ರಕಾರ, 23 ಜನವಸತಿ ದ್ವೀಪಗಳನ್ನು ಒಳಗೊಂಡಿರುವ ಆರ್ಜಿಲ್ ಮತ್ತು ಬ್ಯುಟೆ ಪ್ರದೇಶದ ದ್ವೀಪಗಳಿಗೆ ವೈದ್ಯಕೀಯ ಅಗತ್ಯಗಳನ್ನು ವೇಗವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ಪೂರೈಸುವ ಗುರಿ ಹೊಂದಿದೆ.ಕೋವಿಡ್-19 ಟೆಸ್ಟ್ ಕಿಟ್‌ಗಳು, ಪಿಪಿಇ ಕಿಟ್​ಗ​ಳಂತ ತುರ್ತು ವೈದ್ಯಕೀಯ ಸರಕುಗಳನ್ನು ಡ್ರೋನ್ ಮೂಲಕ ತಲುಪಿಸುವುದು ಎಷ್ಟರ ಮಟ್ಟಿಗೆ ಸಾಧ್ಯ ಎಂದು ಪರೀಕ್ಷಿಸುವ ಗುರಿ ಇದೆ. 5 ಕೆ.ಜಿ ಗಳಷ್ಟು ತೂಕದ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಬಲ್ಲದು. ಇದು ಗಂಟೆಗೆ 100 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ ಹಾರಬಲ್ಲದು, ಆದ್ದರಿಂದ ನಮಗೆ ಹೆಚ್ಚು ನೆರವಾಗಲಿದೆ ಎಂದು ಡ್ರೋಣ್ ತಯಾರಿಕಾ ಸಂಸ್ಥೆ ಸ್ಕೈಪೋರ್ಟ್ಸ್ ಸಿಇಒ ಡಂಕನ್ ವಾಕರ್ ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಎಲೆಕ್ಟ್ರಿಕ್‌ ವಿಮಾನ ಹಾರಾಟ ಯಶಸ್ವಿ….

Sat May 30 , 2020
ವಾಷಿಂಗ್ಟನ್‌: ವಿಶ್ವದ ಅತ್ಯಂತ ದೊಡ್ಡ ಬ್ಯಾಟರಿಚಾಲಿತ ಎಲೆಕ್ಟ್ರಿಕ್‌ ವಾಣಿಜ್ಯ ವಿಮಾನ ಗುರುವಾರ ಯಶಸ್ವಿ ಪರೀಕ್ಷಾರ್ಥ ಹಾರಾಟ ನಡೆಸಿತು. ಇದು ವಿದ್ಯುತ್‌ ಚಾಲಿತ ವಿಮಾನಯಾನ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದೆ ಎಂದು ತಯಾರಕರು ಅಭಿಪ್ರಾಯಪಟ್ಟಿದ್ದಾರೆ. ಸೆಸ್ನಾ ಗ್ರಾಂಡ್‌ ಕ್ಯಾರವಾನ್‌ 208ಬಿ ಹೆಸರಿನ ಈ ಆಲ್‌ ಎಲೆಕ್ಟ್ರಿಕ್‌ ವಿಮಾನವನ್ನು ಎಲೆಕ್ಟ್ರಿಕ್‌ ಏವಿಯೇಷನ್‌ ಕಂಪನಿ ‘ಮ್ಯಾಗ್ನಿಎಕ್ಸ್‌’ ಹಾಗೂ ಏರೋಸ್ಪೇಸ್‌ ಟೆಸ್ಟಿಂಗ್‌ ಸಂಸ್ಥೆ ‘ಏರೋಟೆಕ್‌’ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿದೆ.ವಾಷಿಂಗ್ಟನ್‌ನ ಮೊಸೆಸ್‌ ಲೇಕ್‌ ಬಳಿಯ ಗ್ರಾಂಟ್‌ ಕಂಟ್ರಿ ಇಂಟರ್‌ನ್ಯಾಷನಲ್‌ […]

Advertisement

Wordpress Social Share Plugin powered by Ultimatelysocial