ತಂಬಾಕು ಉತ್ಪನ್ನಗಳ ಮಾಲೀಕರಿಗೆ ಆರೋಗ್ಯ ಇಲಾಖೆಯಿಂದ ಎಚ್ಚರಿಕೆ

ನವದೆಹಲಿ: ತಜ್ಞರ ಪ್ರಕಾರ, ತಂಬಾಕು ಸೇವನೆಯಿಂದಾಗಿ ಭಾರತದಲ್ಲಿ ಪ್ರತಿವರ್ಷ ಸುಮಾರು ೧೨ ಲಕ್ಷ ಸಾವುಗಳು ಸಂಭವಿಸುತ್ತವೆ. ಅಲ್ಲದೆ, ೫೦ ಪ್ರತಿಶತ ಕ್ಯಾನ್ಸರ್‌ಗೆ ಹಾಗೂ ೯೦ ಪ್ರತಿಶತದಷ್ಟು ಬಾಯಿ ಕ್ಯಾನ್ಸರ್‌ಗೆ ಈ ತಂಬಾಕು ಕಾರಣವಾಗಿದೆ. ಆದ ಕಾರಣ ಎಲ್ಲಾ ತಂಬಾಕು ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲೆ ಆರೋಗ್ಯ ಸಂಬಂಧ ಎಚ್ಚರಿಕೆಯ ಹೊಸ ಚಿತ್ರವನ್ನು ಮುದ್ರಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.
ಈ ವರ್ಷ ಸೆಪ್ಟೆಂಬರ್ ೧ ರ ನಂತರ ಮೊದಲು ಸೂಚಿಸಿದ ಚಿತ್ರವನ್ನು ಮುದ್ರಿಸಬೇಕು. ಹಾಗೆಯೇ, ಮುಂದಿನ ವರ್ಷದ ಸೆಪ್ಟೆಂಬರ್ ೧ ರ ನಂತರ ಸೂಚಿಸಿದ ಎರಡನೇ ಚಿತ್ರವನ್ನು ಮುದ್ರಿಸಬೇಕು ಎಂದು ತಿಳಿಸಿದೆ.ಸಿಗರೇಟ್ ಅಥವಾ ಯಾವುದೇ ತಂಬಾಕು ಉತ್ಪನ್ನಗಳ ಮೇಲೆ ಹಾಗೂ ಇಂಥಹ ಎಲ್ಲಾ ವಿಧದ ಪ್ಯಾಕೆಟ್‌ಗಳ ಮೇಲೆ ಆರೋಗ್ಯ ಇಲಾಖೆ ಸೂಚಿಸಿದಂತೆ ಆರೋಗ್ಯ ಎಚ್ಚರಿಕೆಯ ಸಂದೇಶ ನೀಡುವ ಚಿತ್ರವನ್ನು ಮುದ್ರಿಸಬೇಕು. ಇದನ್ನು ಉಲ್ಲಂಘನೆ ಮಾಡಿದರೆ ಸೆಕ್ಷನ್ ೨೦ ರ ಪ್ರಕಾರ ಜೈಲು ಶಿಕ್ಷೆ ಅಥವಾದಂಡದೊಂದಿಗೆ ಶಿಕ್ಷಿಸಬಹುದಾದ ಅಪರಾಧವಾಗಿದೆ ಎಂದು ಸಚಿವಾಲಯ ಎಚ್ಚರಿಕೆ ನೀಡಿದೆ.

Please follow and like us:

Leave a Reply

Your email address will not be published. Required fields are marked *

Next Post

ಜೆಇಇ, ನೀಟ್ ಪರೀಕ್ಷೆಯ ದಿನಾಂಕ ಪ್ರಕಟ

Tue May 5 , 2020
ನವೆದಹಲಿ : ಲಾಕ್ ಡೌನ್ ಸಡಿಲಿಕೆಯ ನಡುವೆ, ಜೆಇಇ ಮತ್ತು ನೀಟ್ ಪರೀಕ್ಷೆಯ ದಿನಾಂಕವನ್ನು ಪ್ರಕಟ ಮಾಡಿದೆ. ಜುಲೈ ೧೮ರಿಂದ ಜೆಇಇ ಪರೀಕ್ಷೆ ಆರಂಭವಾಗಲಿದ್ದು, ಜುಲೈ ೨೩ರವರೆಗೆ ನಡೆಯಲಿದೆ. ಜುಲೈ ೨೬ರಂದು ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಯಲಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಕೇಂದ್ರ ಹೆಚ್ ಆರ್ ಡಿ ಸಚಿವ ರಮೇಶ್ ಪೊಕ್ರಿಯಾಳ್, ಜಾಯಿಂಟ್ ಎಟೆರೆನ್ ಎಕ್ಸಾಂ(ಜೆಇಇ)ಯ ಮುಖ್ಯ ಪರೀಕ್ಷೆಯನ್ನು ಜುಲೈ ೧೮ರಿಂದ ೨೩ರ ವರೆಗೆ ನಡೆಸಲಾಗುತ್ತದೆ. ನ್ಯಾಷನಲ್ […]

Advertisement

Wordpress Social Share Plugin powered by Ultimatelysocial