ತುಮಕೂರು: ಕುಡಿದ ಅಮಲಿನಲ್ಲಿ ತೂರಾಡುತ್ತಲೇ ಶಾಲೆಗೆ ಬಂದ ಶಿಕ್ಷಕ ಅಮಾನತು

ತುಮಕೂರು: ಮಕ್ಕಳಿಗೆ ಪಾಠ ಹೇಳಿಕೊಡಬೇಕಾದ ಸರ್ಕಾರಿ ಶಾಲೆ ಶಿಕ್ಷಕನೊಬ್ಬ ಮದ್ಯ ಸೇವಿಸಿ ತೂರಾಡುತ್ತಲೇ ಶಾಲೆಗೆ ಬಂದ ಹಿನ್ನೆಲೆಯಲ್ಲಿ ಅಮಾನತ್ತುಗೊಂಡಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ನಡೆದಿದೆ.ಕಾಂತರಾಜ್ ಅಮಾನತುಗೊಂಡಿರುವ ಶಿಕ್ಷಕ. ಈತ ಜಿಲ್ಲೆಯ ಕುಣಿಗಲ್ ತಾಲೂಕಿನ ಹೊಸಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಮದ್ಯಸೇವಿಸಿ ಶಾಲೆಗೆ ಬಂದಿರುವ ವಿಚಾರ ಗ್ರಾಮಸ್ಥರ ಗಮನಕ್ಕೆ ಬರುತ್ತಿದ್ದಂತೆ ಶಾಲೆಯ ಬಳಿ ಜಮಾಯಿಸಿದ ಪೋಷಕರು, ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಕುಣಿಗಲ್ ಬಿಇಒ ತಿಮ್ಮರಾಜು ಅವರ ಗಮನಕ್ಕೆ ತಂದಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಬಿಇಒ, ಶಿಕ್ಷಕ ಕಾಂತರಾಜು ಅವರನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಮದ್ಯ ಸೇವಿಸಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಈ ಸಂಬಂಧ ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

2 ನೇ ವರ್ಚುವಲ್ ವಾರ್ಷಿಕ ನಾಯಕರ ಸಭೆಯಲ್ಲಿ ವ್ಯಾಪಾರ ಸಂಬಂಧಗಳನ್ನು ಚರ್ಚಿಸಲು ಭಾರತ-ಆಸ್ಟ್ರೇಲಿಯಾ!

Sat Mar 19 , 2022
ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮಾರ್ಚ್ 21 ರಂದು ಎರಡನೇ ವರ್ಚುವಲ್ ವಾರ್ಷಿಕ ನಾಯಕರ ಸಭೆಯನ್ನು ನಡೆಸಲಿದ್ದಾರೆ. “ಆಸ್ಟ್ರೇಲಿಯಾ ಮತ್ತು ಭಾರತದ ಬಲವಾದ ದ್ವಿಪಕ್ಷೀಯ ಸಂಬಂಧವು ಪರಸ್ಪರ ತಿಳುವಳಿಕೆ ಮತ್ತು ನಂಬಿಕೆ, ಪ್ರಜಾಪ್ರಭುತ್ವಕ್ಕೆ ಬದ್ಧತೆ ಮತ್ತು ಮುಕ್ತ, ಅಂತರ್ಗತ, ಚೇತರಿಸಿಕೊಳ್ಳುವ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್‌ನ ಹಂಚಿಕೆಯ ದೃಷ್ಟಿಯನ್ನು ಆಧರಿಸಿದೆ” ಎಂದು ಮಾರ್ಚ್ 18 ರ ಶುಕ್ರವಾರದಂದು ಘೋಷಿಸಿದ ಪಿಎಂ ಸ್ಕಾಟ್ ಮಾರಿಸನ್ ಹೇಳಿದರು. ವರ್ಚುವಲ್ […]

Advertisement

Wordpress Social Share Plugin powered by Ultimatelysocial