ದಕ್ಷಿಣ ಕನ್ನಡಕ್ಕೆ ಕಂಟಕವಾದ ಹಾಟ್ ಸ್ಪಾಟ್ ಏರಿಯಾ..! ಒಂದೇ ದಿನ 7 ಜನರಿಗೆ ಸೋಂಕು

ದಕ್ಷಿಣ ಕನ್ನಡಜಿಲ್ಲೆಯಲ್ಲಿ ಒಂದೇ ಕುಟುಂಬದ ಮೂವರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಈ ಮೂಲಕ ಕೊರೊನಾ ಹಾಟ್ ಸ್ಪಾಟ್ ಆಯ್ತಾ ಫಸ್ಟ್ ನ್ಯೂರೋ ಆಸ್ಪತ್ರೆ…? ಅನ್ನೋ ಪ್ರಶ್ನೆಗಳು ಕಾಡತೊಡಗಿದೆ. ಕೊರೊನಾ ಸೋಂಕಿತ ಪಿ – 390 ರ ಮಹಿಳೆಯಿಂದ ವೃದ್ದನಿಗೆ ಸೋಂಕು ತಗುಲಿದೆ. ಅಲ್ಲದೇ ಪಿ – 578 ನಂಬರ್ ಸೋಂಕಿತನಿಂದ ಮತ್ತೆ ಮೂವರಿಗೆ ಕೊರೊನಾ ಸೋಂಕು ಹರಡಿದೆ.  ಸದ್ಯ ಜಿಲ್ಲೆಯಲ್ಲಿ 2 ಹಾಟ್ ಸ್ಪಾಟ್ ಗುರ್ತಿಸಲಾಗಿದೆ. ಈ ಹಾಟ್ ಸ್ಪಾಟ್ ಏರಿಯಾಗಳಿಂದ ಒಟ್ಟು 36 ಜನರಿಗೆ ಕೊರೊನಾ ಸೋಂಕು ಹರಡಿದೆ ಎನ್ನಲಾಗ್ತಿದೆ. ಅಲ್ಲದೇ ಇಂದು ಹೊಸದಾಗಿ 7 ಜನರಿಗೆ ಸೋಂಕು ತಗುಲಿದೆ.  2 ವರ್ಷದ ಹೆಣ್ಣು ಮಗು, 1 ವರ್ಷದ ಗಂಡು ಮಗು ಸೇರಿದಂತೆ 65 ವರ್ಷದ ವೃದ್ದನಿಗೆ ಕೂಡ ಕೊರೊನಾ ಸೋಂಕು ಧೃಡಪಟ್ಟಿದೆ.

Please follow and like us:

Leave a Reply

Your email address will not be published. Required fields are marked *

Next Post

ಕಾರ್ಮಿಕರಿಗೆ ೧೦ ಸಾವಿರ ಪರಿಹಾರ ನೀಡುವಂತೆ ಹೈಕೋರ್ಟ್ಗೆ ಅರ್ಜಿ

Sat May 9 , 2020
ಬೆಂಗಳೂರು : ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ರಾಜ್ಯದ ಕಾರ್ಮಿಕರಿಗೆ ತಲಾ ೧೦ ಸಾವಿರ ರೂ. ಪರಿಹಾರ ನೀಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾ. ಎ.ಎಸ್.ಓಕ ಮತ್ತು ನ್ಯಾ. ಶಿವಶಂಕರ್ ಅಮರಣ್ಣನವರ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿದ್ದು, ಅರ್ಜಿದಾರರ ಪರ ವಕೀಲರ ವಾದ ಆಲಿಸಿ […]

Advertisement

Wordpress Social Share Plugin powered by Ultimatelysocial