ಕತ್ತಲಲ್ಲಿ ಹೊಂಚು ಹಾಕಿ ಒಂಟಿ ದಾರಿಹೋಕರ ಮೇಲೆ ಹಲ್ಲೆ ನಡೆಸಿ ನಗದು ಚಿನ್ನಾಭರಣ ದೋಚಲು ಸಜ್ಜಾಗಿದ್ದ ನಾಲ್ವರು ದರೋಡೆಕೋರರು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ರಾಜಗೋಪಾಲನಗರದ ಅಮರನಾಥ್ (31), ಶಿವರಾಜ್ (32), ಕೆಪಿ ಅಗ್ರಹಾರದ ಶಾಂತರಾಜು (27 ಹಾಗೂ ಶ್ರೀನಿವಾಸ ಬಂಧಿತ ಆರೋಪಿಗಳು ನಿನ್ನೆ ರಾತ್ರಿ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಇಎಲ್ 2ನೆ ಹಂತದ ಭರತ್‍ನಗರ ಪಾರ್ಕ್ ಸಮೀಪ ಕತ್ತಲಲ್ಲಿ ನಿಂತು ದಾರಿಯಲ್ಲಿ ಒಂಟಿಯಾಗಿ ಹೋಗುವ ಸಾರ್ವಜನಿಕರ ಮೇಲೆ ಹಲ್ಲೆ ಮಾಡಿ ನಗದು ಮತ್ತು ಚಿನ್ನಾಭರಣ ಕೊಳ್ಳೆಹೊಡೆಯಲು ಆರೋಪಿಗಳು ಸಜ್ಜಾಗಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ಮಾಡಿದ ಸಿಸಿಬಿ ಸಂಘಟಿತ ಅಪರಾಧ ದಳದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ದರೋಡೆಕೋರರ ಬಳಿ ಇದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, ಅವರ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.