ನಟ ಸುದೀಪ್ ನಟನೆಯ ಕೋಟಿಗೊಬ್ಬ-೩ ಸಿನಿಮಾ ಹಾಡು ನಿನ್ನೆ ಬಿಡುಗಡೆಯಾಗಿದ್ದು, ದಾಖಲೆಯ ಮೊತ್ತಕ್ಕೆ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಈ ಬಗ್ಗೆ ಪೋಸ್ಟ್ ಹಾಕಿದ ಆನಂದ್ ಆಡಿಯೋ ವಿರುದ್ಧ ದರ್ಶನ್ ಅಭಿಮಾನಿಗಳು ಸಾಮಾಜಿಕ ತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕಾಶನೆ ಅದರಿಸುವ ಹಾಡು ಅತೀ ವೇಗವಾಗಿ ೧೦ಲಕ್ಷ ವೀಕ್ಷಣೆಗಳನ್ನು ಪಡೆದಿದೆ ಎಂದು ಪೋಸ್ಟ್ ಪ್ರಕಟಿಸಿತ್ತು ಇದರಿಂದ ಸಿಟ್ಟಿಗೆದ್ದ ದರ್ಶನ್ ಅಭಿಮಾನಿಗಳು ಅತಿವೇಗವಾಗಿ ೧೦ಲಕ್ಷ ವಿಕ್ಷಣೆ ಪಡೆದ ಹಾಡು ಇದಲ್ಲ. ಯಜಮಾನ ಚಿತ್ರದ ಶಿವನಂದಿ ಸಾಹಿತ್ಯದ ಹಾಡು. ಇದು ಸಾರ್ವಕಾಲಿಕ ದಾಖಲೆ ಎಂದು ಕಮೆಂಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದರ್ಶನ ಅಭಿಮಾನಿಗಳ ಆಕ್ರೋಶ
Please follow and like us: