ದಾಖಲೆಯ ಮಟ್ಟದಲ್ಲಿ ವಾಯು ಮಾಲಿನ್ಯ ನಿಯಂತ್ರಣ..!

ವಾಷಿಂಗ್ಟನ್: ಕೊರೊನಾ ವೈರಸ್‌ನಿಂದಾಗಿ ಲಾಕ್‌ಡೌನ್ ಹಿನ್ನಲೆಯಲ್ಲಿ ಉತ್ತರ ಭಾರತದಲ್ಲಿ ಏರೋಸಾಲ್ ಪ್ರಮಾಣ ೨೦ ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿದೆ ಎಂದು ನಾಸಾ ಹೇಳಿದೆ. ನಾಸಾದ ಸ್ಯಾಟಲೈಟ್ ಸೆನ್ಸಾರ್‌ನಲ್ಲಿ ಇದು ಪತ್ತೆಯಾಗಿದ್ದು, ಕಳೆದ ೨೦ ವರ್ಷಗಳಲ್ಲಿ ಭಾರತದಲ್ಲಿ ಏರೋಸಾಲ್ ಪ್ರಮಾಣ ಇಷ್ಟು ಕಡಿಮೆ ಆಗಿರಲಿಲ್ಲ. ಈಗ ಲಾಕ್‌ಡೌನ್ ಇರುವುದರಿಂದಾಗಿ ಫ್ಯಾಕ್ಟರಿಗಳು ಬಂದಾಗಿವೆ, ಬಸ್, ಕಾರು, ಟ್ರಕ್, ವಿಮಾನಗಳ ಸಂಚಾರ ಕೂಡ ಕಡಿಮೆಗೊಂಡಿರುವುದರಿಂದ ಇಷ್ಟು ಪ್ರಮಾಣದಲ್ಲಿ ವಾಯುಮಾಲಿನ್ಯ ಕಡಿಮೆಯಾಗಲು ಸಾಧ್ಯವಾಗಿದೆ ಎಂದು ನಾಸಾ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಸಾದ ಮಾರ್ಷಲ್ ಸ್ಪೇಸ್ ಫ್ಲೈಟ್ ಸೆಂಟರ್‌ನ ವಿಜ್ಞಾನಿ ಪವನ್ ಗುಪ್ತಾ, ಲಾಕ್‌ಡೌನ್‌ನಿಂದ ಹಲವೆಡೆ ಬದಲಾವಣೆ ಆಗುತ್ತೆ ಅನ್ನೋದು ನಮಗೆ ಗೊತ್ತಿತ್ತು. ಆದರೆ ವರ್ಷದಲ್ಲಿ ಇಷ್ಟು ಕಡಿಮೆ ಏರೋಸಾಲ್ ಪ್ರಮಾಣವನ್ನು ಎಂದೂ ನಾನು ಕಂಡಿರಲಿಲ್ಲ ಅಂತ ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ವಾರಿಯರ್ಸ್ ಗೆ ಇನ್ಮುಂದೆ ಮತ್ತಷ್ಟು ಹೆಚ್ಚಿನ ಭದ್ರತೆ

Thu Apr 23 , 2020
ರಾಜ್ಯದಲ್ಲಿ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ, ದಾಳಿಯನ್ನು ನಡೆಸಿದರೆ ಅಂತಹವರ ವಿರುದ್ಧ ಮುಲಾಜಿಲ್ಲದೇ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವಾರಿಯರ್ಸ್ ಗೆ ಇನ್ಮುಂದೆ ಮತ್ತಷ್ಟು ಹೆಚ್ಚಿನ ಭದ್ರತೆ ಒದಗಿಸಲಾಗುತ್ತದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ.  ದಾಳಿಗೆ ಮುಂದಾದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ರಾಜ್ಯದಲ್ಲಿ 11 ಜಿಲ್ಲೆಗಳಲ್ಲಿ ಗ್ರೀನ್ ಜೋನ್ ವಾತಾವರಣವಿದೆ. […]

Advertisement

Wordpress Social Share Plugin powered by Ultimatelysocial