ದೇವನಹಳ್ಳಿಯಲ್ಲಿ ರೈತನ ಹೊಲಗಳಿಗೆ ನುಗ್ಗಿದ ಕೆರೆಯ ನೀರು

ದೇವನಹಳ್ಳಿಯಲ್ಲಿ ರೈತನ ಹೊಲಗಳಿಗೆ ನುಗ್ಗಿದ ಕೆರೆಯ ನೀರು ರೈತ ಸಮಸ್ಯೆ ಹೇಳಲು ಹೋದಾಗ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ತಮಗಾಗಿರುವ ಸಮಸ್ಯೆ ಹೇಳಲು ರೈತ ಕರೆ ಮಾಡಿದರೆ ಉತ್ತರ ನೀಡದೆ ನಿರ್ಲಕ್ಷ್ಯ ಮಾಡುತ್ತಿರುವ ದೇವನಹಳ್ಳಿ ತಹಶೀಲ್ದಾರ್ ಅಜಿತ್ ರಾಯ್ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ರೈತನ ಗೋಳು ಕೇಳದ ದೇವನಹಳ್ಳಿ ಜಿಲ್ಲಾಡಳಿತಿಂದ ಪ್ರತಿ ಬಾರಿ ಈ ಸಮಸ್ಯೆಗೆ ಉತ್ತರ ಕಾಣದ ರೈತ. ಎಚ್ 1 ಎನ್ 1 ವ್ಯಾಲಿ ಯಿಂದ ದೇವನಹಳ್ಳಿಯ ಆವತಿ ಕೆರೆಗೆ ನೀರು ಬರುತ್ತಿದೆ. ಕಾಲುವೆ ನಿರ್ಮಾಣ ಮಾಡದ ಕಾರಣ ಹರಿವು ಹೆಚ್ಚಾಗಿ ನೀರಿನ ಬ್ಲಾಕೇಜ್ ನಿಂದ ಹಾರೋ ಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಲಗಳಿಗೆ ನೀರು ಹರಿಯುತ್ತಿದೆ. ಇದರಿಂದ ಹೊಲ ಗದ್ದೆಯೆಲ್ಲ ಚಿಕ್ಕ ಕೆರೆಯಂತೆ ಆಗಿದೆ. ಹೀಗಾಗಿ ತರಕಾರಿ ಬೆಳೆದಂತ ರೈತನ ಬೆಳೆ ಕೆರೆಯ ನೀರು ನಿಂತು ಸಂಪೂರ್ಣ ನಾಶವಾಗಿದೆ. ಇನ್ನೂ ಇದರ ಬಗ್ಗೆ ಸಾಕಷ್ಟು ಬಾರಿ ರೈತ ಜಿಲ್ಲಾಡಳಿತಕ್ಕೆ, ನೀರಾವರಿ ಇಲಾಖೆಗೆ ಮನವಿ ಮಾಡಿದ್ದೇವೆ. ಮನವಿ ಮಾಡಿದ್ದರೂ ಈ ಇಲಾಖೆಗಳಿಂದ ಯಾವುದೇ ಪ್ರತಿಕ್ರಿಯೆ ಇಲ್ಲ ಮತ್ತು ಸೂಕ್ತ ಕ್ರಮ ಕೈಗೊಂಡಿರುವುದಿಲ್ಲ.

Please follow and like us:

Leave a Reply

Your email address will not be published. Required fields are marked *

Next Post

ಅಸ್ಸಾಂನಲ್ಲಿ ಪ್ರವಾಹ  

Thu Jul 23 , 2020
ಅಸ್ಸಾಂನಲ್ಲಿನ ಪ್ರವಾಹವು ೨೬ ಜಿಲ್ಲೆಗಳ ಮೇಲೆ ಪರಿಣಾಮ ಬೀರಿದ್ದು, ಜುಲೈ ೨೨ ರವರೆಗೆ ೮೯ ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಎಎಸ್ ಡಿಎಂಎ ಬುಧವಾರ ನೀಡಿದ ವರದಿಯ ಪ್ರಕಾರ, ಬಾರ್ಪೆಟಾ, ದಿಬ್ರುಘರ್, ಕೊಕ್ರಜಾರ್, ಬೊಂಗೈಗಾAವ್, ಟಿನ್ಸುಕಿಯಾ, ಇತರ ಜಿಲ್ಲೆಗಳಲ್ಲಿ ಪ್ರವಾಹ ತೀವ್ರವಾಗಿ ಪರಿಣಾಮ ಬೀರಿದ್ದು ಅಪಾರ ನಷ್ಟ ಸಂಭವಿಸಿದೆ. ಮಾತ್ರವಲ್ಲದೆ ೨೬,೩೧,೩೪೩ ಜನರನ್ನು ಪ್ರವಾಹ ಬಾಧಿಸಿದೆ. ಬ್ರಹ್ಮಪುತ್ರ ಮತ್ತು ಅದರ ಉಪನದಿಗಳಲ್ಲಿ […]

Advertisement

Wordpress Social Share Plugin powered by Ultimatelysocial