ದೇವಸ್ಥಾನಗಳಲ್ಲಿ ಆನ್ ಲೈನ್ ಪೂಜೆ ವ್ಯವಸ್ಥೆ

ಬೆಂಗಳೂರು : ಕೊರೊನಾ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಆನ್‌ಲೈನ್‌ ಪೂಜೆ ವ್ಯವಸ್ಥೆ ಮಾಡಲಾಗುವುದು. ಪೂಜೆಯ ಲೈವ್‌ ಪ್ರಸಾರವೂ ಇರಲಿದೆ. ಭಕ್ತರಿಗೆ ಅಂಚೆ ಮೂಲಕ ಪ್ರಸಾದ ಕಳುಹಿಸಿ ಕೊಡಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, “ಪದ್ಧತಿಯಂತೆ ಧಾರ್ಮಿಕ ದತ್ತಿ ದೇಗುಲಗಳಲ್ಲಿ ಪೂಜೆ ನಡೆಯುತ್ತಿದೆ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವ ಕಾರಣ ಭಕ್ತರಿಗೆ ಪ್ರವೇಶವಿಲ್ಲ. ಹಾಗಾಗಿ ಲಭ್ಯವಿರುವ ಆನ್‌ಲೈನ್‌ ಪೂಜೆಗಳ ವಿವರ ತಿಳಿಸಲಾಗುವುದು. ಅದರಂತೆ ಭಕ್ತರು ಹಣ ಪಾವತಿಸಿ ಪೂಜೆ ಮಾಡಿಸಬಹುದು ಎಂದು ಹೇಳಿದರು. ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾ ಪರಮೇಶ್ವರಿ, ಬೆಂಗಳೂರಿನ ಬನಶಂಕರಿ, ಮೈಸೂರಿನ ಚಾಮುಂಡೇಶ್ವರಿ, ಸವದತ್ತಿ ಯಲ್ಲಮ್ಮ, ನಂಜನಗೂಡಿನ ನಂಜುಂಡೇಶ್ವರ ಸೇರಿದಂತೆ 50 ದೇವಸ್ಥಾನಗಳಲ್ಲಿ ಪ್ರಾರಂಭಿಕವಾಗಿ ಆನ್‌ಲೈನ್‌ ಪೂಜೆ ವ್ಯವಸ್ಥೆ ಮಾಡಲಾಗುವುದು.26,700 ದೇವಸ್ಥಾನಗಳಿಗೆ ಸಂಬಂಧಿಸಿ 3 ತಿಂಗಳ ತಸ್ತಿಕ್‌ನ ಒಟ್ಟು ಮೊತ್ತ 33.65 ಕೋಟಿ ರೂ. ಅನ್ನು ಹಣಕಾಸು ಇಲಾಖೆ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

Please follow and like us:

Leave a Reply

Your email address will not be published. Required fields are marked *

Next Post

  ಪಶ್ಚಿಮ ಬಂಗಾಳಕ್ಕೆ ನೆರವಾದ ಪ್ರಧಾನಿ ಮೋದಿ

Fri May 22 , 2020
ನವದೆಹಲಿ:  ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದಿಂದ ಭಾರಿ ಹಾನಿಯಾಗಿರುವ ಮಾಹಿತಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್​ ಧನಕರ್​ ಮತ್ತು ಸಿಎಂ ಮಮತಾ ಬ್ಯಾರ‍್ಜಿ ಜತೆ ಹಾನಿಗೀಡಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು.  ಹೆಲಿಕಾಪ್ಟರ್​ನಲ್ಲಿ ತೆರಳಿದ ಮೂವರು ಹಾನಿಗೀಡಾದ ಪ್ರದೇಶಗಳನ್ನು ಅವಲೋಕಿಸಿದರು. ಎರಡು ದಿನಗಳ ಹಿಂದೆ ಅಪ್ಪಳಿಸಿದ ಅಂಫಾನ್​ ಚಂಡಮಾರುತದಿಂದ ತೀವ್ರ ಹಾನಿಗೊಳಗಾಗಿರುವ ಕೋಲ್ಕತಾ ಸೇರಿ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಕ್ಕೆ ಚಂಡಮಾರುತ ಅಪ್ಪಳಿಸಿತ್ತು. ಇದರಿಂದಾಗಿ ೮೦ […]

Advertisement

Wordpress Social Share Plugin powered by Ultimatelysocial