ದೇಶದ ರಾಜಧಾನಿ ನವದೆಹಲಿಗೆ ಬರುವುದು ನನಗೆ ಹಿತ ಎನಿಸುವುದಿಲ್ಲ ಎಂದ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ .

ವದೆಹಲಿ: ದೇಶದ ರಾಜಧಾನಿ ನವದೆಹಲಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಅತ್ಯಧಿಕವಾಗಿದೆ. ಹೀಗಾಗಿ ನವದೆಹಲಿಗೆ ಬರುವುದು ನನಗೆ ಹಿತ ಎನಿಸುವುದಿಲ್ಲ ಎಂದು ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಬೇಸರ ವ್ಯಕ್ತಪಡಿಸಿದರು.

ಅಖಿಲ ಭಾರತ ನಿರ್ವಹಣಾ ಸಂಘದ(ಎಐಎಂಎ) ಸಂಸ್ಥಾಪನ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, “ನಾನು ದೆಹಲಿ ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ಇರುವ ಸ್ಥಳಕ್ಕೆ ಸಂಚರಿಸುತ್ತಿದೆ.

ಈ ವೇಳೆ ಟ್ರಾಫಿಕ್‌ ಸಿಗ್ನಲ್‌ನಲ್ಲಿ ಕೆಂಪು ದೀಪ ಇದ್ದರೂ ಬೈಕ್‌ಗಳು, ಕಾರುಗಳು ಇತರೆ ವಾಹನಗಳು ಸಂಚರಿಸುತ್ತಿದ್ದವು. ಜನರಿಗೆ ತಾಳ್ಮೆ ಕಡಿಮೆಯಾಗಿದೆ. 1-2 ನಿಮಿಷ ಸಿಗ್ನಲ್‌ನಲ್ಲಿ ನಿಲ್ಲುವ ಸಾಮಾಜಿಕ ಹೊಣೆಗಾರಿಯನ್ನು ಅವರು ಮರೆಯುತ್ತಿದ್ದಾರೆ,’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ನಮ್ಮ ವಸ್ತುಗಳಿಗಿಂತಲೂ ಹೆಚ್ಚಿನ ಕಾಳಜಿಯಿಂದ ಸಾರ್ವಜನಿಕ ಆಸ್ತಿಯನ್ನು ನಾವು ಬಳಸಬೇಕಿದೆ. ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಮನೆಯಲ್ಲಿ ಈ ಸಂಸ್ಕಾರವನ್ನು ನಾವು ಕಲಿಸಬೇಕಿದೆ,’ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮತದಾನ ಸಮಯ ಕಾಯ್ದಿರಿಸಿ!- ಮೊಬೈಲ್‌ ಆಯಪ್‌ ಅಭಿವೃದ್ಧಿಪಡಿಸಿದ ಚು. ಆಯೋಗ

Wed Feb 22 , 2023
  ಬೆಂಗಳೂರು: ಸಿನೆಮಾ, ರೈಲ್ವೇ ಟಿಕೆಟ್‌ಗಳನ್ನು ಮುಂಚಿತವಾಗಿಯೇ ಕಾಯ್ದಿರಿಸುವಂತೆ ಈಗ ನೀವು ಮತದಾನ ಮಾಡುವ ಸಮಯವನ್ನೂ ಮೊದಲೇ ನಿಗದಿ ಮಾಡಿಕೊಳ್ಳಬಹುದು! ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣ ವಿಭಾಗ ನೂತನ ಮೊಬೈಲ್‌ ಅಪ್ಲಿಕೇಷನ್‌ ಸಿದ್ಧಪಡಿಸುತ್ತಿದೆ. ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿಯಿದ್ದು, ಆಯೋಗ ಈಗಿನಿಂದಲೇ ಸಿದ್ಧತೆ ನಡೆಸಿದೆ. ಇದು ಯಶಸ್ವಿಯಾದರೆ ಮುಂದಿನ ಹಂತಗಳಲ್ಲಿ ರಾಜ್ಯದೆಲ್ಲೆಡೆ ವಿಸ್ತರಿಸುವ ಆಲೋಚನೆ ಆಯೋಗಕ್ಕಿದೆ. ಮತದಾನ ಮಾಡಲು ಮತಗಟ್ಟೆಗಳಲ್ಲಿ ಸರತಿ […]

Advertisement

Wordpress Social Share Plugin powered by Ultimatelysocial