ಧೂಳು ಸಂಗ್ರಹಿಸುವ 25 ಯಂತ್ರ ಖರೀದಿಗೆ ಬಿಬಿಎಂಪಿ ಸಜ್ಜು

 

ಬೆಂಗಳೂರು, ಫೆಬ್ರವರಿ 20: ಸಿಲಿಕಾನ್ ಸಿಟಿಯಲ್ಲಿ ಕಸ ಗುಡಿಸುವುದು, ತ್ಯಾಜ್ಯ ವಿಲೇವಾರಿಯೇ ದೊಡ್ಡ ಸಮಸ್ಯೆಯಾಗಿ ಮಾರ್ಪಡುತ್ತಿದೆ. ಸ್ವೀಪಿಂಗ್ ಯಂತ್ರಗಳ ತೀವ್ರ ಕೊರತೆ ಎದುರಿಸುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದ ರಸ್ತೆಗಳಲ್ಲಿ ಧೂಳು ಮತ್ತು ಉದುರಿದ ಎಲೆಗಳನ್ನು ಸಂಗ್ರಹಿಸಲು ಹೆಚ್ಚುವರಿ ಯಂತ್ರಗಳ ಖರೀದಿಗೆ ಚಿಂತನೆ ನಡೆಸಿದೆ.

ಇದರಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆತಂಕ ವ್ಯಕ್ತಪಡಿಸಿದೆ.

ಬೆಂಗಳೂರು ತೀವ್ರಗತಿಯಲ್ಲಿ ಬೆಳೆಯುತ್ತಿದೆ. ನಗರೀಕರಣದಿಂದ ತೀವ್ರವಾಗಿ ಕುಸಿಯುತ್ತಿರುವ ನಗರದ ವಾಯು ಗುಣಮಟ್ಟವನ್ನು ಸುಧಾರಿಸುವತ್ತ ಗಮನಹರಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪಾಲಿಕೆಗೆ ಸೂಚಿಸಿದೆ. ಇದಕ್ಕಾಗಿಯೇ ಬಿಬಿಎಂಪಿ 25 ಯಂತ್ರಗಳನ್ನು ಖರೀದಿಸಲು ಟೆಂಡರ್ ಪ್ರಕ್ರಿಯೆ ಆರಂಭಿಸಲು ಸಜ್ಜಾಗಿದೆ.

ಬಿಬಿಎಂಪಿ ಸ್ವಿಪಿಂಗ್ ಯಂತ್ರಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿಸುವ ಕೆಲಸ ಮಾಡುತ್ತಿದೆ. ಆದರೆ ನಗರದಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟದ ಮೇಲೆ ಕಡಿಮೆ ಪರಿಣಾಮ ಬೀರುತ್ತಿದೆ. ಕೆಆರ್ ಪುರಂನ ವ್ಯಾಪ್ತಿಯಲ್ಲಿ ಕೆರೆಯ ಪ್ರಕರಣ ನೋಡುವುದಾದರೆ, ಕಸ ಗುಡಿಸುವ ಯಂತ್ರಗಳು ಈ ಭಾಗದ ಕೆರೆ ದಡದಲ್ಲಿ ತ್ಯಾಜ್ಯ ಸುರಿಯುತ್ತಿವೆ. ಇದರಿಂದ ಮಾಲಿನ್ಯ ಹೆಚ್ಚಾಗುತ್ತಿದೆ. ಹೊಸ ಯಂತ್ರಗಳ ಖರೀದಿಗೂ ಮೊದಲು ಬಿಬಿಎಂಪಿ ತ್ಯಾಜ್ಯವನ್ನು ಎಲ್ಲಿ ಸುರಿಯಬೇಕು ಎಂಬ ಸ್ಪಷ್ಟ ನೀತಿ ರೂಪಿಸಬೇಕಾದ ಅಗತ್ಯತೆ ಇದೆ ಎಂದು ಮಂಡಳಿ ತಿಳಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಹಾಲಿ 27 ಕಸಗುಡಿಸವ ಯಂತ್ರ ಕಾರ್ಯನಿರ್ವಹಿಸುತ್ತಿದೆ. ನಗರದ 1,900 ಕಿ.ಮೀ.ಗೂ ಉದ್ದದ ರಸ್ತೆ, ಉಪ ರಸ್ಥೆಗಳನ್ನು ನಿರ್ವಹಿಸುತ್ತಿದ್ದು, ಈ ಯಂತ್ರಗಳು ಸಾಕಾಗುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ಅಗತ್ಯಕ್ಕೆ ತಕ್ಕಂತೆ 200 ಯಂತ್ರಗಳ ಖರೀದಿಸಲು ಬಿಬಿಎಂಪಿ ಯೋಜಿಸಿದೆ.

ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯ ವಿಶೇಷ ಆಯುಕ್ತ ಡಾ.ಕೆ.ಹರೀಶ್ ಕುಮಾರ್ ಅವರು, ಬಿಬಿಎಂಪಿಯು 25 ಯಂತ್ರಗಳನ್ನು ಖರೀದಿಸಲು ಟೆಂಡರ್ ಕರೆಯಲಿದ್ದೇವೆ. ಒಂದು ಯಂತ್ರವು 6-8 ಗಂಟೆಗಳಲ್ಲಿ 40ಕಿಮೀ ಕ್ರಮಿಸಿ ಕಸ ಗುಡಿಸುತ್ತದೆ. ಒಂದು ಸ್ವೀಪಿಂಗ್ ಮಷಿನ್‌ಗೆ 2 ಕೋಟಿ ರೂಪಾಯಿ ತಗುಲಲಿದೆ. 70 ಕೋಟಿ ರೂಪಾಯಿ ಮೌಲ್ಯದಲ್ಲಿ ಟೆಂಡರ್ ಕರೆಯಲಾಗಿದೆ. ಪ್ರತಿ ಟ್ರಕ್ 5-6 ಘನ ಮೀಟರ್ ಧೂಳು ಮತ್ತು ಎಲೆಗಳನ್ನು ಸಂಗ್ರಹಿಸುತ್ತದೆ ಎಂದು ಅವರು ವಿವರಿಸಿದರು.

ನಗರ ಸ್ವಚ್ಛತೆಗೆ 200 ಯಂತ್ರಗಳ ಅಗತ್ಯ

ಬಿಬಿಎಂಪಿ ವ್ಯಾಪ್ತಿಯಲ್ಲಿ ಸದ್ಯ ಸ್ವೀಪಿಂಗ್ ಯಂತ್ರಗಳ ಅಭಾವದಿಂದಾಗಿ ಪ್ರಮುಖ ರಸ್ತೆಗಳಲ್ಲಿ ಮಾತ್ರ ಕಸ ಸಂಗ್ರಹಣೆ ಕಾರ್ಯ ನಿರ್ವಹಣೆ ಆಗುತ್ತಿದೆ. ಇತರ ರಸ್ತೆಗಳನ್ನು ಗುಡಿಸಲು, ಪೌರಕಾರ್ಮಿಕರು ತೊಡಗಿಸಿಕೊಂಡಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರಸ್ತೆಗಳನ್ನು ನಿರ್ವಹಿಸಲು ನಗರಕ್ಕೆ 200 ಯಂತ್ರಗಳ ಅಗತ್ಯವಿದೆ. ಪೌರಕಾರ್ಮಿಕ ಸಂಘಗಳು ಉದ್ಯೋಗ ಕಳೆದುಕೊಳ್ಳುವ ಸಾಧ್ಯತಾ ಭೀತಿಯಿಂದ ಯಂತ್ರಗಳ ಖರೀದಿ ವಿರುದ್ಧ ಲಾಬಿ ನಡೆಸುತ್ತವೆ ಎಂದು ಅಧಿಕಾರಿಯೊಬ್ಬರು ಹೇಳಿದರು. ಸರ್ಕಾರ ಪೌಕಾರ್ಮಿಕರಿಗೆ ಕಾಯಂ ಉದ್ಯೋಗ ಸ್ಥಾನ ನೀಡಿದ್ದು ಭಯ ಪಡಬೇಕಾಗಿಲ್ಲ ಎಂದರು.

ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ತಜ್ಞ ರಾಮಪ್ರಸಾದ್ ವಿ. ಅವರು, ನೈಜ ಸಮಯದಲ್ಲಿ ಸ್ವೀಪಿಂಗ್ ಯಂತ್ರದ ಕಾರ್ಯಾಚರಣೆಯ ಮೇಲ್ವಿಚಾರಣೆಗೆ ವ್ಯವಸ್ಥೆ ಮಾಡಬೇಕು. ಮುಖ್ಯವಾಗಿ ಈ ಯಂತ್ರಗಳಿಂದ ಸಂಗ್ರಹಿಸಿದ ಧೂಳನ್ನು ಭೂಕುಸಿತದಂತಹ ಪ್ರದೇಶಗಳಲ್ಲಿ ವಿಲೇವಾರಿಗೆ ಕ್ರಮ ವಹಿಸಬೇಕು. ಆದರೆ ಟ್ರಕ್ ಮೂಲಕ ಕರೆ, ಜನವಸತಿ ಪ್ರದೇಶ/ಭೂಮಿಗಳಲ್ಲಿ ಸುರಿಯುತ್ತಿದ್ದು, ಈ ಸಮಸ್ಯೆ ಬಗೆಹರಿಸಬೇಕು ಎಂದು ಅವರು ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಡ್ಡಾ ಬಳಿ ಹಲವು ಬೇಡಿಕೆ ಮುಂದಿಟ್ಟಿದ್ದೇವೆ!

Mon Feb 20 , 2023
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕರ್ನಾಟಕ ಪ್ರವಾಸದಲ್ಲಿದ್ದು, ಅತ್ತ ಕಾಂಗ್ರೆಸ್ ನಾಯಕರ ಪ್ರಜಾಧ್ವನಿ ಸಮಾವೇಶವೂ ಮುಂದುವರಿದಿದೆ. ಜೆಡಿಎಸ್​ ಕೂಡ ಚುನಾವಣೆ ಸಿದ್ಧತೆ ಭರ್ಜರಿಯಾಗಿಯೇ ನಡೆಸುತ್ತಿದೆ. ರಾಜ್ಯದ ಇಂದಿನ (ಫೆಬ್ರವರಿ 20) ರಾಜಕೀಯ ವಿದ್ಯಮಾನಗಳ ಲೈವ್ ಅಪ್​​ಡೇಟ್ಸ್ ಇಲ್ಲಿವೆ.ಕರ್ನಾಟಕ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕರ್ನಾಟಕ ಪ್ರವಾಸದಲ್ಲಿದ್ದು, ಅತ್ತ […]

Advertisement

Wordpress Social Share Plugin powered by Ultimatelysocial