ನಷ್ಟ ತಗ್ಗಿಸಲು ಹೋಟಲ್ ಉದ್ಯಮಿಗಳ ಸರ್ಕಸ್

ಚೆನ್ನೈ: ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಉಂಟಾದ ಪರಿಣಾಮದಿಂದ ಹೊರಬರಲು ಹೋಟೆಲ್ ಉದ್ಯಮವು ವಿವಿಧ ಕ್ರಮಗಳನ್ನು ಕೈಗೊಂಡಿದೆ. ವೇತನ ಕಡಿತ ಮಾಡಿ ಕಡಿಮೆ ಸಿಬ್ಬಂದಿಯನ್ನು ಕರ್ತವ್ಯದಲ್ಲಿರಿಸಲಾಗಿದೆ. ಚೆನ್ನೈನಲ್ಲಿ ಭಾಗಶಃ ಆತಿಥ್ಯ ಉದ್ಯಮವು ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ಕ್ರಮಗಳನ್ನು ಅನುಸರಿಸುವ ಮೂಲಕ ಉದ್ಯಮವನ್ನು ಜೀವಂತವಾಗಿರಿಸುವ ಪ್ರಯತ್ನ ನಡೆಸಲಾಗುತ್ತಿದೆ. ಕೆಲ ಹೋಟೆಲ್‌ಗಳು ಹೊಸ ಅತಿಥಿಗಳನ್ನು ಸ್ವಾಗತಿಸದಿರಲು ನಿರ್ಧರಿಸಿದ್ದರೆ, ಇನ್ನೂ ಕೆಲ ಉದ್ಯಮಿಗಳು ನೈರ್ಮಲ್ಯ ಕ್ರಮಗಳನ್ನು ಹೆಚ್ಚಿಸಿದ್ದಾರೆ. ಹ್ಯಾಂಡ್‌ಶೇಕ್ ಬದಲಿಗೆ ಹೊಸ ರೀತಿಯ ಶುಭಾಶಯ ಸೇರಿದಂತೆ ಹೊಸ ಸಾಮಾಜಿಕ ಅಂತರ ಕ್ರಮಗಳನ್ನು ಪಾಲಿಸಲಾಗುತ್ತಿದೆ.
ರೆಸಿಡೆನ್ಸಿ ಗ್ರೂಪ್ ಆಫ್ ಹೋಟೆಲ್ ಸಿಒಒ ಗೋಪಿನಾಥ್ ಅವರ ಪ್ರಕಾರ, ಸಾಮಾನ್ಯ ಶೇಕ್ ಹ್ಯಾಂಡ್ ಬದಲಿಗೆ, ಶುಭಾಶಯದ ಸಂಕೇತವಾಗಿ ಬಲಗೈಯನ್ನು ಎಡಎದೆಯ ಮೇಲೆ ಇರಿಸುವ ಮೂಲಕ ಹೃದಯಸ್ಪರ್ಶಿ ಶುಭಾಶಯ ವಿನಿಮಯ ಮಾಡಲು ನಿರ್ಧರಿಸಿದ್ದಾರೆ. ಅತಿಥಿಗಳನ್ನು ಸ್ವಾಗತಿಸುವಾಗ ನಾವು ಈ ರೀತಿಯ ಶುಭಾಶಯಗಳನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿದ್ದೇವೆ. ಇದು ಹೊಸ ಪರಿಕಲ್ಪನೆಯಾಗಿರಬಹುದು. ಆದರೆ, ಇದರ ಮೂಲಕ ನಾವು ಶೇಕ್ ಹ್ಯಾಂಡ್ ಮಾಡಿ ಬೇರೆ ವ್ಯಕ್ತಿಗಳನ್ನು ಸ್ಪರ್ಶಿಸುವುದನ್ನು ತಪ್ಪಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.ಲಾಕ್‌ಡೌನ್ ನಡುವೆಯೂ ಹೇಗಾದರೂ ಲಾಭ ಗಳಿಸಿ ಉದ್ಯಮ ಜೀವಂತವಾಗಿರಿಸುವ ನಿಟ್ಟಿನಲ್ಲಿ ಉದ್ಯಮಿಗಳು ವಿವಿಧ ಕ್ರಮಗಳಿಗೆ ಜೋತು ಬಿದ್ದಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಚೀನಾದಿಂದ ನಿರ್ಗಮಿತ ಬಹುರಾಷ್ಟ್ರೀಯ ಕಂಪನಿಗಳು ಭಾರತದತ್ತ

Fri May 1 , 2020
ನವದೆಹಲಿ:ದೇಶವನ್ನು ಕಾಡುತ್ತಿರುವ ಕೊರೊನಾ ಸಂಕಷ್ಟದಲ್ಲಿ ದೇಶವನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಲು ಪ್ರಧಾನಿ ನರೇಂದ್ರ ಮೋದಿ ಅನೇಕ ಮಾರ್ಗೋಪಾಯಗಳನ್ನು ಅನುಷ್ಠಾನಗೊಳಿಸುವಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಭಾರತದಲ್ಲಿ ಬಂಡವಾಳ ಹೂಡುವ ವಿದೇಶಿ ಸಂಸ್ಥೆಗಳಿಗೆ ರತ್ನಗಂಬಳಿ ಸ್ವಾಗತ ನೀಡಲು ಪೂರಕವಾದ ವಾತಾವರಣ ನಿರ್ಮಿಸುವಂತೆ ಈಗಾಗಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯ,ಹಣಕಾಸು ಮತ್ತು ವಾಣಿಜ್ಯ ಇಲಾಖೆ ಸಚಿವರು ಮತ್ತು ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಡೀ ವಿಶ್ವಕ್ಕೆ ಕೊರೊನಾ ವೈರಸ್ ಕೊಡುಗೆ ನೀಡಿ ಅಪಾರ ಸಾವುನೋವಿಗೆ ಕಾರಣವಾಗಿರುವ ಚೀನಾ […]

Advertisement

Wordpress Social Share Plugin powered by Ultimatelysocial