ಚಿನ್ನದ ಹುಡುಗಿ ಹಿಮಾ ದಾಸ್ಗಾಗಿಯೇ ಆಡಿಡಾಸ್ ಕಂಪನಿ ವಿಶೇಷವಾಗಿ ಅವರ ಹೆಸರಿರುವ ಬೂಟುಗಳನ್ನ ತಯಾರಿಸುತ್ತಿದೆ. ಹಿಮಾ, ತಮ್ಮ ಮೊದಲ ನ್ಯಾಷನಲ್ಸ್ನಲ್ಲಿ ಬೂಟುಗಳ ಮೇಲೆ ತಾವೇ ಕೈಯಿಂದ ಆಡಿಡಾಸ್ ಅಂತ ಬರೆದುಕೊಂಡಿದ್ದರಂತೆ. ಈಗ ಕಂಪನಿಯೇ ಸ್ವತಃ ತನಗಾಗಿ ತನ್ನ ಹೆಸರಿನಲ್ಲಿ ಶೂ ತಯಾರಿಸುತ್ತಿದೆ ಅಂತ ಹೇಳಿದ್ದಾರೆ.
ನಮ್ಮ ಅದೃಷ್ಟ ಯಾವಾಗ ಬದಲಾಗುತ್ತೆ ಅಂತ ಯಾರಿಂದಲೂ ಊಹಿಸಲು ಸಾಧ್ಯವಿಲ್ಲ ಅಂತ ಕ್ರಿಕೆಟರ್ ಸುರೇಶ್ ರೈನಾ ಜೊತೆಗಿನ ಲೈವ್ ಚಾಟ್ನಲ್ಲಿ ಮಾತಾಡುವಾಗ ಹಿಮಾ ಹೇಳಿದ್ದಾರೆ. ಇದನ್ನ ಶೇರ್ ಮಾಡಿರೋ ರೈನಾ, ನಾನಷ್ಟೇ ಅಲ್ಲ, ಇಂದಿನ ಲೈವ್ ಚಾಟ್ನಲ್ಲಿ ಭಾಗಿಯಾದ ಹಲವರಿಗೆ ಇದು ಪ್ರೇರಣೆ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.