ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್ ಕಿತ್ತು ಭರ್ಜರಿ ದಾಖಲೆ ಬರೆದ ಜೇಸನ್ ಹೋಲ್ಡರ್

 

 

ಬಾರ್ಬಡೋಸ್: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಜಯ ಸಾಧಿಸಿದೆ. ವೇಗಿ ಜೇಸನ್ ಹೋಲ್ಡರ್ ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್ ಕಿತ್ತು ದಾಖಲೆ ಬರೆದರುಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್ 4 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿದರೆ, ಇಂಗ್ಲೆಂಡ್ ತಂಡವು 162 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.ಈ ಮೂಲಕ 17 ರನ್ ಗಳ ಅಂತರದ ಜಯ ಸಾಧಿಸಿತು.ವಿಂಡೀಸ್ ಪರ ಕೈರನ್ ಪೊಲಾರ್ಡ್ 41 ರನ್, ರೋಮನ್ ಪೊವೆಲ್ 35 ರನ್, ಬ್ರಾಂಡನ್ ಕಿಂಗ್ 34 ರನ್ ಮತ್ತು ಮೇಯರ್ಸ್ 31 ರನ್ ಗಳಿಸಿದರು. ಆದಿಲ್ ರಶೀದ್ ಮತ್ತು ಲಿವಿಂಗ್ಟಸನ್ ತಲಾ ಎರಡು ವಿಕೆಟ್ ಪಡೆದರು.ಗುರಿ ಬೆನ್ನತ್ತಿದ ಇಂಗ್ಲೆಂಡ್ ಗೆ ಜೇಮ್ಸ್ ವಿನ್ಸ್ 55 ರನ್ ಮತ್ತು ಸ್ಯಾಮ್ ಬಿಲ್ಲಿಂಗ್ಸ್ 41 ರನ್ ಗಳಿಸಿ ಆಧರಿಸಿದರು. ಟಾಮ್ ಬ್ಯಾಂಟನ್ 16 ರನ್ ಗಳಿಸಿದರು. ಕೊನೆಯ ಓವರ್ ನಲ್ಲಿ ಇಂಗ್ಲೆಂಡ್ ಗೆ 20 ರನ್ ಅಗತ್ಯವಿತ್ತು. ಜೇಸನ್ ಹೋಲ್ಡರ್ ಕೇವಲ ಒಂದು ರನ್ ನೀಡಿ ಸತತ ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್ ಪಡೆದರು.

ಜನರ ಮೇಲೆ ಹರಿದ ಎಲೆಕ್ಟ್ರಿಕ್ ಬಸ್: 6 ಮಂದಿ ದುರ್ಮರಣ, ಹಲವರಿಗೆ ಗಾಯಐದು ಪಂದ್ಯಗಳ ಸರಣಿಯನ್ನು ವೆಸ್ಟ್ ಇಂಡೀಸ್ ತಂಡ 3-2 ಅಂತರದಿಂದ ವಶಪಡಿಸಿಕೊಂಡಿತು. ಜೇಸನ್ ಹೋಲ್ಡರ್ ಅವರು ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

́ಕಾಸ್ಟಿಂಗ್‌ ಕೌಚ್‌ ʼ ನಿಂದ ಎದುರಿಸಿದ ಸಮಸ್ಯೆಗಳನ್ನು ಹೇಳಿದ ದಿವ್ಯಾಂಕ ತಿವಾರಿ.

Mon Jan 31 , 2022
ಮುಂಬೈ : ಹಿಂದಿ ಕಿರುತೆರೆ ನಟಿ ದಿವ್ಯಾಂಕ  ತಿಪಾಠಿ ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಕಾಸ್ಟಿಂಗ್ ಕೌಚ್‍ನಿಂದ ತಾವು ಎದುರಿಸಿದ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಖತ್ರೋನ್ ಕೆ ಕಿಲಾಡಿಯಲ್ಲಿ ಕಾಣಿಸಿಕೊಳ್ಳುತ್ತಿರುವ ದಿವ್ಯಾಂಕಾ ಹಿಂದಿ ಕಿರುತೆರೆಯ ಜನಪ್ರಿಯ ನಟಿಯರಲ್ಲಿ ಒಬ್ಬರು.ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಮ್ಮ ವೃತ್ತಿ ಜೀವನ ಆರಂಭಿಸಿದಾಗ ಕೆಲವು ನಿರ್ದೇಶಕರು ತಮ್ಮ ಜೊತೆ ಸಮಯ ಕಳೆಯುವಂತೆ ಕೇಳಿರುವುದಾಗಿ ಬಹಿರಂಗಪಡಿಸಿದ್ದಾರೆ.ಇಂತಹವರು ಕಾಸ್ಟಿಂಗ್ ಕೌಚ್ ಸರ್ವೇಸಾಮಾನ್ಯ ಹಾಗೂ ಇಂಡಸ್ಟ್ರಿಯಲ್ಲಿ ಎಲ್ಲರೂ ಅದನ್ನು ಮಾಡುತ್ತಾರೆ ಎಂದು […]

Advertisement

Wordpress Social Share Plugin powered by Ultimatelysocial