ನಾಲ್ವರು ಕೊರೋನಾ ಸೋಂಕಿತರು ಎಸ್ಕೇಪ್

ಪುಣೆ : ಪುಣೆಯ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯುವಾಗ ಕೋವಿಡ್ -೧೯ ಶಂಕಿತ ನಾಲ್ವರು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಓರ್ವ ಮಹಿಳೆ ಸೇರಿದಂತೆ ನಾಲ್ಕು ಜನರೂ ಕೊರೊನಾ ವೈರಸ್ ಸೋಂಕಿತನ ದ್ವಿತೀಯ ಸಂಪರ್ಕಿಗಳಾಗಿದ್ದರು. ಅವರನ್ನು ಆಂಬ್ಯುಲೆನ್ಸ್ನಲ್ಲಿ ಸಿಂಹಗಢ ರಸ್ತೆ ಪ್ರದೇಶದಲ್ಲಿನ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯಲಾಗುತ್ತಿತ್ತು’ ಎಂದು ಸಿಂಹಗಢ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕ್ವಾರೆಂಟೈನ್ ಕೇಂದ್ರದ ಬಳಿ ಆಂಬ್ಯುಲೆನ್ಸ್ ನಿಲ್ಲಿಸಿದ್ದಾಗ, ನಾಲ್ವರು ತಪ್ಪಿಸಿಕೊಂಡು ಓಡಿಹೋದರು’ ಎಂದು ಪೊಲಿಸರು ತಿಳಿಸಿದ್ದಾರೆ.ತಪ್ಪಿಸಿಕೊಂಡವರನ್ನು ಪತ್ತೆ ಹಚ್ಚಲು ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ನಾನೇ ನನ್ನ ಕೈಯಾರ ಆಡಿಡಾಸ್ ಎಂದು ಬರೆಯುತ್ತಿದ್ದೆ

Mon Apr 27 , 2020
ಚಿನ್ನದ ಹುಡುಗಿ ಹಿಮಾ ದಾಸ್‌ಗಾಗಿಯೇ ಆಡಿಡಾಸ್ ಕಂಪನಿ ವಿಶೇಷವಾಗಿ ಅವರ ಹೆಸರಿರುವ ಬೂಟುಗಳನ್ನ ತಯಾರಿಸುತ್ತಿದೆ. ಹಿಮಾ, ತಮ್ಮ ಮೊದಲ ನ್ಯಾಷನಲ್ಸ್ನಲ್ಲಿ ಬೂಟುಗಳ ಮೇಲೆ ತಾವೇ ಕೈಯಿಂದ ಆಡಿಡಾಸ್ ಅಂತ ಬರೆದುಕೊಂಡಿದ್ದರಂತೆ. ಈಗ ಕಂಪನಿಯೇ ಸ್ವತಃ ತನಗಾಗಿ ತನ್ನ ಹೆಸರಿನಲ್ಲಿ ಶೂ ತಯಾರಿಸುತ್ತಿದೆ ಅಂತ ಹೇಳಿದ್ದಾರೆ. ನಮ್ಮ ಅದೃಷ್ಟ ಯಾವಾಗ ಬದಲಾಗುತ್ತೆ ಅಂತ ಯಾರಿಂದಲೂ ಊಹಿಸಲು ಸಾಧ್ಯವಿಲ್ಲ ಅಂತ ಕ್ರಿಕೆಟರ್ ಸುರೇಶ್ ರೈನಾ ಜೊತೆಗಿನ ಲೈವ್ ಚಾಟ್‌ನಲ್ಲಿ ಮಾತಾಡುವಾಗ ಹಿಮಾ  ಹೇಳಿದ್ದಾರೆ. […]

Advertisement

Wordpress Social Share Plugin powered by Ultimatelysocial