ನೀಟ್ ಪರೀಕ್ಷೆಗೆ ಡೆಟ್ ಫಿಕ್ಸ್…

ನವದೆಹಲಿ:ಕೊರೊನಾ ಹಿನ್ನಲೆ ಮುಂದೂಡಲಾಗಿದ್ದ ಪರೀಕ್ಷೆಗಳ ದಿನಾಂಕವನ್ನು ನಿಗದಿಪಡಿಸಲಾಗಿದೆ. ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕಾಗಿ ನಡೆಯುವ ಜಂಟಿ ಪ್ರವೇಶ ಪರೀಕ್ಷೆ ಜುಲೈ ೧೮ರಿಂದ ೨೩ರವೆಗೆ ಹಾಗೂ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಇರುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಜುಲೈ ೨೬ರಂದು ಜರುಗಲಿದೆ ಎಂದು ಕೇಂದ್ರದ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿವಾಲ್ ನಿಶಾಂಕ್ ತಿಳಿಸಿದ್ದಾರೆ.
ಜೆಇಇ ಮೆನ್ಸ್ ಪರೀಕ್ಷೆ ಜುಲೈ ೧೮ರಿಂದ ೨೩ರವರೆಗೆ ಹಾಗೂ ಜೆಇಇ ಅಡ್ವಾನ್ಸ್ ಪರೀಕ್ಷೆ ಆಗಸ್ಟ್ನಲ್ಲಿ ನಡೆಸಲಾಗುವುದು ಎಂದು ನಿಶಾಂಕ್ ಮಾಹಿತಿ ನೀಡಿದ್ದಾರೆ. ಇದೇ ಸಮಯದಲ್ಲಿ ಮಾತನಾಡಿದ ಅವರು ಲಾಕ್‌ಡೌನ್ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತೆರಳಿರುವುದರಿಂದ ಜೆಇಇ ಹಾಗೂ ನೀಟ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಪರೀಕ್ಷಾ ಕೇಂದ್ರದ ಬದಲಾವಣೆ ಮಾಡಿಕೊಳ್ಳುವ ಅವಕಾಶವು ಇದೇ ಎಂದು ತಿಳಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಸಿದ್ದರಾಮಯ್ಯ ಬಳಗದಿಂದ ಸೀಲ್ಡ್ ಡೌನ್ ಏರಿಯಾದಲ್ಲಿ ದಿನಸಿ ವಿತರಣೆ..!

Wed May 6 , 2020
ಕೋವಿಡ್-19 ವೈರಸ್ ಪತ್ತೆಯಾದ ಹಿನ್ನೆಲೆ ಬಾದಾಮಿ ತಾಲೂಕಿನ ಡಾಣಕ್ ಶಿರೂರು ಗ್ರಾಮ ಸೀಲ್ ಡೌನ್ ಆಗಿದೆ. ಈ ಹಿನ್ನೆಲೆ ಶಾಸಕ ಸಿದ್ದರಾಮಯ್ಯ ಪಕ್ಷದ ಆಪ್ತರಿಗೆ  ದೂರವಾಣಿ ಮೂಲಕ ದಿನನಿತ್ಯದ ವಸ್ತುಗಳನ್ನು ವಿತರಿಸುವಂತೆ ಆದೇಶಿಸಿದ್ದಾರೆ. ಕ್ಷೇತ್ರದಲ್ಲಿ ಅತಿಹೆಚ್ಚು ಸೋಂಕಿತರನ್ನು ಒಳಗೊಂಡ ಡಾಣಕಶಿರೂರ ಗ್ರಾಮದ ಜನರಿಗೆ ತೊಂದರೆ ಆಗಬಾರದು. ಹೀಗಾಗಿ ಸಾರ್ವಜನಿಕರಿಗೆ ಧವಸ ಧಾನ್ಯಗಳ ಕಿಟ್ ಹಂಚಲು ತಿಳಿಸಿದ್ದಾರೆ. ಈ ಬಗ್ಗೆ ಮಾತಾನಡಿದ ಕಾಂಗ್ರೆಸ್ ಕಾರ್ಯಕರ್ತ ಹೊಳೆಬಸು ಶೆಟ್ಟರ್ ಕ್ಷೇತ್ರದ ಶಾಸಕರಾದ ಸಿದ್ದರಾಮಯ್ಯ […]

Advertisement

Wordpress Social Share Plugin powered by Ultimatelysocial