ನೀರಾವರಿ ಕಾಮಗಾರಿಯಿಂದ ಕಂಗಾಲಾದ ರೈತರು

ಕಾಲುವೆ ಕಾಮಗಾರಿಯನ್ನ ಪೂರ್ಣ ಮಾಡುವಂತೆ ರೈತರು ನೀರಾವರಿ ನೀಗಮದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೆ ಪ್ರಯೋಜನವಾಗಿಲ್ಲ ಎಂದು ರೈತರು ತಮ್ಮ ಆಕ್ರೋಶ ಹೋರಹಾಕ್ಕಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಥಣಿ-ತಂಗಡಿ ರಸ್ತೆಯ ಬಲ ಬದಿಯಲ್ಲಿ ನಿರ್ಮಾಣವಾಗಬೆಕಿದ್ದ, ಡ್ರಿಸ್ಟರಿ ಬ್ಯೂಟರ್ ನಂ ೫ ರ ಕಾಲುವೆ ಕಾಮಗಾರಿ ಕಳೆದ ೭ ವರ್ಷಗಳಿಂದ ಸ್ಥಗಿತಗೊಂಡಿದೆ. ನೀರಾವರೀ ನಿಗಮದಿಂದ ಕಾಲುವೆಗೆ ನೀರು ಹರಿ ಬಿಟ್ಟದ್ದರಿಂದ ಒಂದೆಡೆ ರೈತರು ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದರೆ. ಇನ್ನೊಂದೆಡೆ ಅದೆ ನೀರು ರಭಸವಾಗಿ ರೈತರ ಜಮೀನಿಗೆ ನುಗ್ಗಿ ಕೆಲ ರೈತರ ಕಣ್ಣಲಿ ನೀರು ತರಿಸುತಿದ್ದಾರೆ.ಪ್ರತಿ ವರ್ಷ ಕಾಲುವೆಗೆ ನೀರು ಹರಿ ಬಿಟ್ಟಾಗ ಅಕ್ಕ ಪಕ್ಕದ ರೈತರ ಜಮೀನಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದರು ಅಧಿಕಾರಿಗಳು ಮಾತ್ರ ಕಣ್ಣಿದ್ದು ಕುರುಡರಂತಾಗಿದ್ದಾರೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ರೈತರು ನೀರಾವರಿ ನೀಗಮದ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ರೈತರಾದ ಅನೀಲ ಮೋರೆ, ಪ್ರಕಾಶ್ ಕದಮ್,ವಿಜಯ ಪಾಟೀಲ,ಅಣ್ಣಪ್ಪಾ ಪೂಜಾರಿ ಅರ್ಜುನ್ ಪಾಟೀಲ್ ಮಹೇಶ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ಹೆಚ್.ಡಿ ರೇವಣ್ಣಗೆ ಕೊರೊನಾ ಭೀತಿ

Tue Jun 30 , 2020
ಹಾಸನದಲ್ಲಿ ಕಳೆದ ಒಂದು ವಾರದಿಂದ ಕೊರೋನಾ ಸೋಂಕಿನ ಪ್ರಮಾಣ ಏರುತ್ತಲೇ ಇದೆ. ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಬೆಂಗಾವಲು ವಾಹನದಲ್ಲಿ ಇರುವ ನಾಲ್ವರು ಪೊಲೀಸರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ರೇವಣ್ಣ ಅವರ ಇಬ್ಬರು ಆಪ್ತ ಸಹಾಯಕರು ಸೇರಿ ಒಟ್ಟು ಒಂಬತ್ತು ಜನರ ಸ್ಯಾಂಪಲ್ ಪಡೆದು ಪರೀಕ್ಷೆ ನಡೆಸಲಾಗಿತ್ತು. ಎಸ್ಕಾರ್ಟ್ ವಾಹನದಲ್ಲಿ ಕಾರ್ಯನಿರ್ವಹಿಸುವ ನಾಲ್ವರು ಸಿಬ್ಬಂದಿಗಳ ಪೈಕಿ ಬೆಂಗಳೂರಿನ ಮೂವರು ಹಾಗೂ ಹಾಸನದ ಒಬ್ಬ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಸದ್ಯ […]

Advertisement

Wordpress Social Share Plugin powered by Ultimatelysocial