ನೆನಪಿರಲಿ ಪ್ರೇಮ್ ತಾಯಿಗೆ ಕೊರೊನಾ ಪಾಸಿಟಿವ್

ನೆನಪಿರಲಿ ಪ್ರೇಮ್‌ ಅವರ ತಾಯಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆಸ್ಪತ್ರೆಗೆ ದಾಖಲಾಗಿದ್ರು. ಸದ್ಯ ಅವರು ಗುಣಮುಖರಾಗಿ ಮನೆಗೆ ಮರಳಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಡುವುದರ ಮೂಲಕ ಈ ಖುಷಿಯನ್ನ ಪ್ರೇಮ್‌ ಹಂಚಿಕೊಂಡಿದ್ದಾರೆ.ಇನ್‍ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಶೇರ್ ಮಾಡಿದ ಪ್ರೇಮ್‌, ” ನನ್ನ ತಾಯಿಗೆ 66 ವರ್ಷ, ಅವರಿಗೂ ಬಿಪಿ, ಶುಗರ್ ಇದೆ. ಆದರೂ ಧೈರ್ಯವಾಗಿ ಕೊರೊನಾ ಎದುರಿಸಿ ,ನನ್ನ ತಾಯಿ ಮೊದಲಿಗಿಂತಲೂ ಹೆಚ್ಚು ಆರೋಗ್ಯವಂತರಾಗಿ ಮತ್ತೆ ಮನೆಗೆ ಮರಳಿದ್ದಾರೆ. ಇದಕ್ಕೆ ಕಾರಣರಾದ ಆರೈಕೆ ಮಾಡಿ, ಔಷಧ ನೀಡಿ ಗುಣಪಡಿಸಿದ ವೈದ್ಯರಿಗೆ ಧನ್ಯವಾದಗಳು. ಜೊತೆಗೆ ನಮ್ಮ ತಾಯಿ ಆರೋಗ್ಯವಂತರಾಗಿ ಬರುವಂತೆ ಹಾರೈಕೆ ಮಾಡಿದ ಎಲ್ಲ ಮನಸುಗಳಿಗೂ ಧನ್ಯವಾದ” ಎಂದಿದ್ದಾರೆ. ಸೋಂಕಿನ ಬಗ್ಗೆ  ಯಾರೂ ಕೂಡ ಆತಂಕ ಪಡುವುದು ಬೇಡ. ಧೈರ್ಯವಾಗಿರಿ” ಎಂದು ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಐಎಂಡಿಬಿ ರೇಟಿಂಗ್‌ನಲ್ಲಿ ದಿಲ್ ಬೇಚಾರ ದಾಖಲೆ

Sun Jul 26 , 2020
ಸುಶಾಂತ್  ಸಿಂಗ್ ನಟನೆಯ ದಿಲ್ ಬೇಚಾರ ಸಿನಿಮಾ ಐಎಂಡಿಬಿ ರೇಟಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಟಾಪ್ 10 ಸಿನಿಮಾಗಳ ಪಟ್ಟಿಯಲ್ಲಿ  ದಿಲ್ ಬೇಚಾರ ಚಿತ್ರಕ್ಕೆ 8.9 ಅಂಕಗಳನ್ನು ನೀಡಲಾಗಿದೆ. ಸುಶಾಂತ್ ಸಿಂಗ್ ರಜಪೂತ್ ನಟನೆಯ ಕೊನೆಯ ಸಿನಿಮಾ ಇದಾಗಿದ್ದು, ಜುಲೈ 24ರಂದು ಡಿಸ್ನಿ ಹಾಟ್ ಸ್ಟಾರ್ ನಲ್ಲಿ ಬಿಡುಗಡೆಯಾಗಿತ್ತು. ಅಷ್ಟೆ ಅಲ್ಲದೆ ಸಿನಿಮಾ ಆಸಕ್ತರಿಂದ ಹೆಚ್ಚಿನ ಮೆಚ್ಚುಗೆಗೆ  ಪಾತ್ರವಾಗಿತ್ತು. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಕಮಲ್ ಹಾಸನ್ ಅಭಿನಯದ 2003ರಲ್ಲಿ […]

Advertisement

Wordpress Social Share Plugin powered by Ultimatelysocial