ಪರಿಷತ್‌ ಸದಸ್ಯರಾಗಿ ಸೂರಜ್‌ ರೇವಣ್ಣ ಪ್ರಮಾಣವಚನ

ಬೆಂಗಳೂರು: ಹಾಸನ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿದ್ದ ಸೂರಜ್‌ ರೇವಣ್ಣ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕರಿಸಿದರು.ಸೂರಜ್‌ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಪ್ರಮಾಣವಚನ ಬೋಧಿಸಿದರು. ಶಾಸಕರೂ ಆಗಿರುವ ಸೂರಜ್‌ ಅವರ ತಂದೆ ಎಚ್‌.ಡಿ. ರೇವಣ್ಣ, ತಾಯಿ ಭವಾನಿ ಮತ್ತು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ ಉಪಸ್ಥಿತರಿದ್ದರು.ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದ ಸದಸ್ಯರ ಪ್ರಮಾಣವಚನ ಸಮಾರಂಭ ಜನವರಿ 6ರಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದಿತ್ತು. ಆದರೆ, ಆ ದಿನ ಒಳ್ಳೆಯ ಮುಹೂರ್ತವಿಲ್ಲ ಎಂಬ ಕಾರಣದಿಂದ ಸೂರಜ್‌ ಪ್ರಮಾಣವಚನ ಸ್ವೀಕಾರಕ್ಕೆ ಗೈರಾಗಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತ್ರಿದೋಷ ಕಿಚ್ಚರಿ: ಎಲ್ಲಾ ಮೂರು ದೋಷಗಳನ್ನು ಸಮತೋಲನಗೊಳಿಸಲು ಒಂದು ಊಟ

Fri Jan 28 , 2022
ಮಾನವ ದೇಹದ ಆಯುರ್ವೇದದ ತಿಳುವಳಿಕೆಯ ಹೃದಯಭಾಗದಲ್ಲಿ ಮೂರು ದೋಷಗಳ ತತ್ವವಾಗಿದೆ – ವಾತ (ಚಲನೆ), ಪಿತ್ತ (ರೂಪಾಂತರ) ಮತ್ತು ಕಫ (ರಚನೆ). ಎಲ್ಲಾ ಮೂರು ದೋಶಗಳು ನಮ್ಮ ದೇಹದ ಪ್ರತಿಯೊಂದು ಭಾಗದಲ್ಲೂ ಇವೆ ಮತ್ತು ಮೂಲಭೂತವಾಗಿ ಇದ್ದರೂ, ಒಟ್ಟಾರೆಯಾಗಿ ಈ ದೋಷಗಳ ಸಮತೋಲನವು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಬದಲಾಗುತ್ತದೆ. ಇದು ಒಂದು ಅಥವಾ ಕೆಲವೊಮ್ಮೆ ಎರಡು ದೋಷಗಳ ಪ್ರಾಬಲ್ಯಕ್ಕೆ ಸಂಬಂಧಿಸಿದ ವಿವಿಧ ದೇಹ-ಪ್ರಕಾರಗಳ ತಿಳುವಳಿಕೆಗೆ ಕಾರಣವಾಗುತ್ತದೆ. ನಿಮ್ಮ ವೈಯಕ್ತಿಕ ದೋಶಿಕ್ […]

Advertisement

Wordpress Social Share Plugin powered by Ultimatelysocial