ಕನ್ನಡದ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಈಗಲೂ ತುಂಬ ಎರ‍್ಜಿಟಿಕ್. ವಯಸ್ಸು ೪೫ ಆದರೂ, ಇಂದಿಗೂ ಚರ‍್ಮಿಂಗ್ ಮತ್ತು ಸದಾ ಆ್ಯಕ್ಟೀವ್. ಅದಕ್ಕೆ ಕಾರಣ ಅವರ ನಿತ್ಯದ ಜೀವನ ಶೈಲಿ. ಪುನೀತ್ ಅತ್ಯುತ್ತಮ ಡಾನ್ಸರ್ ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತು. ಆ ಡಾನ್ಸ್ನಿಂದಲೇ ಪುನೀತ್ ಈಗಲೂ ಯಂಗ್ ಆಗಿದ್ದಾರೆ. ಈ ಹಿಂದೆ ಸಂರ‍್ಶನವೊಂದರಲ್ಲಿ ಅವರೇ ಈ ಸತ್ಯವನ್ನು ಬಾಯ್ಬಿಟ್ಟಿದ್ದರು. ನನ್ನ ಫಿಟ್ನೆಸ್ಗೆ ಡಾನ್ಸ್ ಬಹುಮುಖ್ಯ ಪಾತ್ರ ವಹಿಸುತ್ತದೆ. ಇದೀಗ ಡಾನ್ಸ್ ಬದಲು ಅವರ ರ‍್ಕೌಟ್ ಸ್ಟೈಲ್ ಹೇಗಿರುತ್ತದೆ. ಪುನೀತ್ ಹೇಗೆಲ್ಲ ರ‍್ಕೌಟ್ ಮಾಡ್ತಾರೆ? ಜಿಮ್ನಲ್ಲಿ ಅವರ ಇಷ್ಟದ ವ್ಯಾಯಾಮ ಯಾವುದು? ಅಭಿಮಾನಿ ವಲಯದಲ್ಲಿ ಹೀಗೆ ಬಗೆಬಗೆ ಪ್ರಶ್ನೆಗಳಿರುತ್ತವೆ. ಆ ಪ್ರಶ್ನೆಗಳಿಗೆ ಈ ವಿಡಿಯೋದಲ್ಲಿ ಉತ್ತರವಿದೆ. ಮನೆಯಲ್ಲಿಯೇ ಇರುವ ಜಿಮ್ನಲ್ಲಿ ಪುನೀತ್ ಬೆವರಿಳಿಸುತ್ತಿದ್ದಾರೆ.
ಈ ಹಿಂದೆ ಕಿಕ್ ಬಾಕ್ಸಿಂಗ್, ಲೆಗ್ ಪಂಚಿಂಗ್, ಸ್ಕಿಪ್ಪಿಂಗ್ ಮಾಡುವ ವಿಡಿಯೋ ಹಂಚಿಕೊಂಡಿದ್ದರು. ಈಗ ಸಿಕ್ಸ್ ಪ್ಯಾಕ್ ರ‍್ಕೌಟ್ ಮತ್ತು ಬೆಲ್ಲಿ ಫ್ಯಾಟ್ ರ‍್ನಿಂಗ್ ಹೇಗೆ ಮಾಡುವುದು ಎಂಬುದನ್ನು ಹೇಳಿಕೊಟ್ಟಿದ್ದಾರೆ. ‘ಕಿಲ್ಲಿಂಗ್ ಮಂಡೇ ಮರ‍್ನಿಂಗ್ ಬ್ಲೂಸ್’ ಎಂದು ಬರೆದುಕೊಂಡಿದ್ದಾರೆ. ಈ ರೀತಿಯ ವಿಡಿಯೋ ಶೇರ್ ಮಾಡಿದ್ದಕ್ಕೆ, ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ನಿಮ್ಮ ಈ ವಿಡಿಯೋ ನಮಗೂ ಸ್ಫರ‍್ತಿಯಾಗಲಿದೆ ಎಂದು ಕೆಲವರು ಹೇಳಿದರೆ, ಪವರ್ ಆಫ್ ಫಿಟ್ನೆಸ್ ಎಂದು ಮತ್ತೊಂದಿಷ್ಟು ಮಂದಿ ಕಮೆಂಟಿಸಿದ್ದಾರೆ. ಸದ್ಯ ಲಾಕ್ಡೌನ್ ಹಿನ್ನೆಲೆಯಲ್ಲಿ ಪುನೀತ್ ಫಿಟ್ನೆಸ್ ಕುರಿತ ಇದ್ದ ಅಭಿಮಾನಿಗಳ ಕುತೂಹಲವನ್ನು ಪವರ್ಸ್ಟಾರ್ ತಣಿಸುತ್ತಿದ್ದಾರೆ. ಲಾಕ್ಡೌನ್ ತೆರವಾಗಿ ಶೂಟಿಂಗ್ಗೆ ಅನುಮತಿ ಸಿಗುತ್ತಿದ್ದಂತೆ ‘ಯುವರತ್ನ’ ಮತ್ತು ‘ಜೇಮ್ಸ್’ ಸಿನಿಮಾಗಳ ಕೆಲಸಗಳಲ್ಲಿಯೂ ಅವರು ಬಿಜಿಯಾಗಲಿದ್ದಾರೆ.