ಪಾದರಾಯನಪುರದಲ್ಲಿ ನಿನ್ನೆ ರಾತ್ರಿ ರ್ತವ್ಯ ನಿರತ ಪೊಲೀಸ್ ಮೇಲೆ ಪುಂಡರು ಗುಂಪು ಗುಂಪಾಗಿ ಹಲ್ಲೆ ನಡೆಸಿದ್ದಾರೆ. ಕೊರೊನಾ ಸೋಂಕು ಹೆಚ್ಚಾದ ಹಿನ್ನಲೆಯಲ್ಲಿ ಪಾದರಾಯನಪುರವನ್ನು ಸಂಪರ್ಣ ಸೀಲ್ ಡೌನ್ ಮಾಡಲಾಗಿದ್ದು, ರಸ್ತೆ, ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ. ಆ ವೇಳೆ ಕೊರೊನಾ ಸೋಂಕಿತ ೫೯ ಮಂದಿಯನ್ನು ಬೇರೆಡೆ ಸ್ಥಳಾಂತರಿಸಲು ಪೊಲೀಸರು ಹಾಗೂ ಆರೋಗ್ಯ ಸಿಬ್ಬಂದಿಗಳು ಮುಂದಾದಾಗ ಆ ವೇಳೆ ಪುಂಡರು ಪೊಲೀಸರು ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರು ಹಾಕಿದ ಚೆಕ್ ಪೋಸ್ಟ್, ಬ್ಯಾರಿಕೇಡ್ ಗಳನ್ನು ಧ್ವಂಸಗೊಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೫೯ ಪುಂಡರನ್ನು ಪೊಲೀಸರು ಬಂಧಿಸಿದ್ದಾರೆ. ಮುಂಜಾಗ್ರತ ಕ್ರಮವಾಗಿ ಇದೀಗ ಪಾದರಾಯನಪುರದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಬಂಧಿತರಾಗಿರೋ ಆರೋಪಿಗಳ ಮೇಲೆ ಐಪಿಸಿ ಸೆಕ್ಸನ್ ೩೦೭,೧೮೮,೩೫೩ ಹಾಗೂ ಎನ್ಡಿಎಮ್ ಕಾಯ್ದೆ ಅಡಿ ೫೧, ೫೨, ೫೪ ಸೆಕ್ಷನ್ಗಳು ಸೇರಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸುವುದು, ಕೊಲೆ ಯತ್ನ ಇಂತಹ ಐದು ಕೇಸ್ಗಳನ್ನು ಹಾಕಲಾಗಿದೆ. ಸದ್ಯ ಕೆಎಸ್ ಆರ್ ಪಿ ತುಕಡಿ ಸೇರಿದಂತೆ ಹೆಚ್ಚಿನ ಭದ್ರತೆ ನಿಯೋಜನೆ ಮಾಡಲಾಗಿದೆ..ಸದ್ಯ ಪಾದರಾಯನಪುರ ಬೂದಿ ಮುಚ್ಚಿದ ಕೆಂಡಂತಾಗಿದೆ..ಜೆ.ಜೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ:ಕ್ರೈಂ ಬ್ಯೂರೊ ಸ್ಪೀಡ್ ನ್ಯೂಸ್ ಕನ್ನಡ