ಪಾಲ್ಘರ್ ಹತ್ಯೆ ಪ್ರಕರಣದ ಆರೋಪಿಗೆ ಕೊರೋನ ಸೋಂಕು

ಮುಂಬೈ: ದೇಶಾದ್ಯಂತ ಆಕ್ರೋಶ ಸೃಷ್ಟಿಸಿರುವ ಪಾಲ್ಘರ್ ಗುಂಪು ಥಳಿತ ಪ್ರಕರಣದ ಆರೋಪಿಗಳಲ್ಲೊಬ್ಬನಿಗೆ ಕೊರೋನ ಸೋಂಕು ದೃಢಪಟ್ಟಿದೆ. ಆತನನ್ನು ಆರಂಭದಲ್ಲಿ ಪಾಲ್ಘರ್ ಗ್ರಾಮೀಣ ಆಸ್ಪತ್ರೆಯ ಐಸೊಲೇಶನ್ ವಾಡ್ರಲ್ಲಿರಿಸಲಾಗಿತ್ತಾದರೂ ನಂತರ ಜೆ ಜೆ ಆಸ್ಪತ್ರೆಯ ಕೈದಿಗಳ ವಾರ್ಡ್ಗೆ ಸ್ಥಳಾಂತರಿಸಲಾಗಿದೆ. ಮಕ್ಕಳ ಅಪಹರಣಕಾರರೆಂಬ ಶಂಕೆಯಿಂದ ಇಬ್ಬರು ಸಾಧುಗಳು ಮತ್ತವರ ಕಾರು ಚಾಲಕನ ಹತ್ಯೆಗೆ ಕಾರಣವಾದ ಪಾಲ್ಘರ್ ಘಟನೆ ಸಂಬಂಧ ಪೊಲೀಸರು ಬಂಧಿಸಿದ್ದ ಒಂಬತ್ತು ಅಪ್ರಾಪ್ತರು ಸೇರಿದಂತೆ ೧೧೫ ಮಂದಿಯಲ್ಲಿ ಈ ಆರೋಪಿಯೂ ಸೇರಿದ್ದಾನೆ. ಅಪ್ರಾಪ್ತರನ್ನು ಭಿವಂಡಿಯ ರಿಮಾಂಡ್ ಹೋಂನಲ್ಲಿರಿಸಲಾಗಿದೆ. ಆರೋಪಿಗಳೆಲ್ಲರನ್ನೂ ಶುಕ್ರವಾರ ದಹಾನು ನ್ಯಾಯಾಲಯದೆದುರು ಹಾಜರುಪಡಿಸಲಾಗಿದ್ದು ಅವರನ್ನು ಮೇ ೧೩ರ ತನಕ ಸಿಬಿಐ ಕಸ್ಟಡಿಗೆ ವಹಿಸಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಸೋಂಕಿತ ಕ್ಯಾನ್ಸರ್ ರೋಗಿಗಳ ಮರಣ ಪ್ರಮಾಣ ಹೆಚ್ಚುವ ಸಾಧ್ಯತೆ

Sat May 2 , 2020
ನ್ಯೂಯಾರ್ಕ್ : ಸಾಮಾನ್ಯ ಕೊರೊನಾ ಸೋಂಕಿತರಿಗಿAತ ಕ್ಯಾನ್ಸರ್ ಇರುವ ಕೊರೊನಾ ಸೋಂಕಿತರ ಮರಣ ಪ್ರಮಾಣ ಹೆಚ್ಚಿರುವ ಸಾಧ್ಯತೆ ಇದೆ ಎಂದು ಅಮೆರಿಕದಲ್ಲಿರುವ ಭಾರತೀಯ ಮೂಲದ ಸಂಶೋಧಕರ ತಂಡ ಹೇಳಿದೆ. ಅಮೆರಿಕದ ಆಲ್ಬರ್ಟ್ ಐನ್‌ಸ್ಟಿನ್ ಕಾಲೇಜ್ ಆಫ್ ಮೆಡಿಸಿನ್‌ನ ಸಂಶೋಧಕ ವಿಕಾಸ್ ಮೆಹ್ತಾ ”ನಾವು ಕ್ಯಾನ್ಸರ್ ರೋಗಿಗಳಿಗೆ ಸೋಂಕು ಬರದಂತೆ ತಡೆಗಟ್ಟುವುದು ಹೇಗೆ ಎಂಬ ಬಗ್ಗೆ ಸಂಶೋಧನೆ ನಡೆಸುತ್ತಿದ್ದೇವೆ. ಜೊತೆಗೆ ಕೊರೊನಾ ಸೋಂಕು ಕ್ಯಾನ್ಸರ್ ಇರುವವರ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆಯೂ […]

Advertisement

Wordpress Social Share Plugin powered by Ultimatelysocial