ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ನವದೆಹಲಿ : ದೆಹಲಿ ಸರ್ಕಾರವು ವಾಹನ ಸವಾರರಿಗೆ ಬಿಗ್ ಶಾಕ್ ನೀಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಮೌಲ್ಯ ವರ್ಧಿತ ತೆರಿಗೆ ಹೆಚ್ಚಿಸಿದ್ದು, ದೆಹಲಿಯಲ್ಲಿ ಡೀಸೆಲ್ ಬೆಲೆ ಲೀಟರ್ ಗೆ ೭.೧ ರೂ. ಪೆಟ್ರೋಲ್ ಬೆಲೆ ೧.೬೭ ರೂ. ಹೆಚ್ಚಳವಾಗಿದೆ. ದೆಹಲಿ ಸರ್ಕಾರ ವ್ಯಾಟ್ ಹೇರಿಕೆಯಿಂದಾಗಿ ಇಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ೭೧.೨೬ ರೂ. ತಲುಪಿದ್ದು, ಡೀಸೆಲ್ ಬೆಲೆ ೬೯.೩೯ ರೂ.ಗೆ ಏರಿಕೆಯಾಗಿದೆ. ಇದು ದೆಹಲಿಯಲ್ಲಿ ಮಾತ್ರ ವ್ಯಾಟ್ ಹೆಚ್ಚಳದಿಂದ ಆಗಿರುವ ಬದಲಾವಣೆ ದೇಶದ ಬೇರೆಡೆ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಅಗಿಲ್ಲ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೆ ವ್ಯತ್ಯಾಸ ಕಂಡುಬಂದಿಲ್ಲ. ಪೆಟ್ರೋಲ್ ಬೆಲೆ ೭೩.೫೫ ರೂ. ಡೀಸೆಲ್ ಬೆಲೆ ೬೫.೯೬ ರೂ.ಇದೆ.

Please follow and like us:

Leave a Reply

Your email address will not be published. Required fields are marked *

Next Post

ಎಣ್ಣೆ ಅಮಲಿನಲ್ಲಿ ಜೀವಂತ ಹಾವನ್ನೇ ಕಚ್ಚಿ ತಿಂದ ಭೂಪ..!

Tue May 5 , 2020
ಹಾವಿನ ದ್ವೇಷ ಹನ್ನೆರಡು ವರುಷ ನನ್ನ ರೋಷ ನೂರು ವರುಷ ಅಂತ ಕೋಲಾರದಲ್ಲೊಬ್ಬ ವ್ಯಕ್ತಿ ಮದ್ಯದ ಅಮಲಿನಲ್ಲಿ ಜೀವಂತ ಹಾವನ್ನು ಕಚ್ಚಿ ತಿಂದಿದ್ದಾನೆ. ಹಾವನ್ನು ತಿನ್ನುವ ವಿಡಿಯೋ ಈಗ ವೈರಲ್‌ ಆಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ವನ್ಯಜೀವಿಗಳನ್ನು ಹಸಿಯಾಗಿ ತಿನ್ನುವ ಡಿಸ್ಕವರಿ ಚಾನಲ್‌ನ ಬೇರ್ ಗ್ರಿಲ್‌ನ ಮಾದರಿಯಲ್ಲಿ ಯುವಕ ಹಾವನ್ನು ತಿಂದಿದ್ದಾನೆ.ಗ್ರಾಮದ ನಡುವೆಯೇ ಬೈಕ್‌ ಮೇಲೆ ಕುಳಿತು ಮದ್ಯದ ನಶೆಯಲ್ಲಿ ಹಾವಿನ ಚರ್ಮ […]

Advertisement

Wordpress Social Share Plugin powered by Ultimatelysocial