ಪೊಲೀಸರ ಜೊತೆ ಕೆಲಸ ಮಾಡಲು ಅದ್ಭುತ ರೆಸ್ಪಾನ್ಸ್

ಬೆಂಗಳೂರು ನಗರದ ಪೊಲೀಸ ಜೊತೆ ವಾಲಂಟಿಯರ್ಸ ಆಗಿ ಕೆಲಸ ಮಾಡಲು ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರು ನಾಗರೀಕರು ಮುಂದೆ ಬಂದಿದ್ದಾರೆ. ಪೂಲೀಸರಿಗೆ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬಿದ್ದು ಸಿಬ್ಬಂದಿ ಕೊರತೆ ಉಂಟಾಗಿದೆ. ಈ ಹಿನ್ನಲೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಿಲಿಕಾನ್ ಸಿಟಿ ನಾಗರಿಕರಿಗೆ ಲಾಕ್‌ಡೌನ್ ವೇಳೆ ಪೊಲೀಸರ ಜೊತೆ ಕೆಲಸ ಮಾಡಲು ಅವಕಾಶ ನೀಡಿದ್ರು. ಆಸಕ್ತಿ ಉಳ್ಳ ೧೮ ರಿಂದ ೪೫ ವರ್ಷ ವಯಸ್ಸಿವರು ನೋಂದಣಿ ಮಾಡಿಕೊಳ್ಳುವಂತೆ ಕರೆ ನೀಡಿದ್ದರು. ಈ ಕಾರ್ಯಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು ಸಾವಿರಾರು ಸಂಖ್ಯೆಯಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡಲು ಆಸಕ್ತಿ ತೋರಿದ್ದಾರೆ. ಈ ಕರಿತು ಟ್ವೀಟ್ ಮಾಡಿರೋ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್, ಬೆಂಗಳೂರುರಿನ ಪ್ರತಿಯೊಬ್ಬ ನಾಗರೀಕರ ¨ಗ್ಗೆ ಹೆಮ್ಮೆ ಆಗ್ತಿದೆ ಎಂದು ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಏಕರೂಪದ ಶಿಕ್ಷಣ ಪದ್ಧತಿಯನ್ನು ಕೋರಿ ಸಲ್ಲಿಸಿದ್ದ ಅರ್ಜಿ

Fri Jul 17 , 2020
ದೇಶದಾದ್ಯಂತ  6 ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಸಾಮಾನ್ಯ ಪಠ್ಯಕ್ರಮವನ್ನು ಹೊಂದಿರುವ ಏಕರೂಪದ ಶಿಕ್ಷಣ ಪದ್ಧತಿಯನ್ನು ಜಾರಿಗೊಳಿಸಲು ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು  ಸುಪ್ರೀಂಕೋರ್ಟ್‌ ವಜಾಗೊಳಿಸಿದೆ. ‘ಶಿಕ್ಷಣ ಪದ್ಧತಿ ಬಗ್ಗೆ ನ್ಯಾಯಾಲಯ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಒಂದು ಶಿಕ್ಷಣ ಮಂಡಳಿಯನ್ನು ಇನ್ನೊಂದಕ್ಕೆ ವಿಲೀನಗೊಳಿಸುವ ಕಾರ್ಯ ನ್ಯಾಯಾಲಯದಲ್ಲ. ಬೇಕಾದರೆ ನೀವು ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಬಹುದು’ ಎಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ […]

Advertisement

Wordpress Social Share Plugin powered by Ultimatelysocial