ಪೋಲಿಸರ ಬಲೆಗೆ ಬಿದ್ದ ಲಂಕಾ ಕ್ರಿಕೆಟಿಗ

ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಸಾಧನೆಯೊಂದಿಗೆ ಮಿಂಚಿದ್ದ ಶ್ರೀಲಂಕಾದ ವೇಗ ಬೌಲರ್ ಶೆಹಾನ್‌ ಮಧುಶಂಕ ಈಗ ಬೇರೊಂದು ಕಾರಣಕ್ಕಾಗಿ ಹೆಚ್ಚಿನ ಸುದ್ದಿಯಾಗಿದ್ದಾರೆ. ಹೆರಾಯಿನ್‌ ಪ್ರಕರಣವೊಂದರಲ್ಲಿ ಅವರು ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಭಾನುವಾರ ಶ್ರೀಲಂಕಾದ ಪನ್ನಾಲ ಪಟ್ಟಣದಲ್ಲಿ ಕರ್ಫ್ಯೂ ಜಾರಿಯಲ್ಲಿದ್ದಾಗರೂ ಇನ್ನೊಬ್ಬ ವ್ಯಕ್ತಿಯೊಂದಿಗೆ ಖಾಸಗಿ ವಾಹನದಲ್ಲಿ ಹೋಗುತ್ತಿದ್ದ ಮಧುಶಂಕ ಅವರನ್ನು ಪೊಲೀಸರು ತಡೆದಾಗ ಇದು ಬೆಳಕಿಗೆ ಬಂದಿದೆ. ಅವರ ಬಳಿ ಸುಮಾರು 2.5 ಗ್ರಾಮ್‌ಗಳಷ್ಟು ಹೆರಾಯಿನ್‌ ಇತ್ತು ಎಂಬುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ, ಹಾಗೆಯೇ ಮಧುಶಂಕ ಅವರನ್ನು 2 ವಾರಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ.

 

Please follow and like us:

Leave a Reply

Your email address will not be published. Required fields are marked *

Next Post

ಮಾಲೀಕನೊಂದಿಗೆ ಕುದುರೆಗೂ ಕ್ವಾರಂಟೈನ್​..!

Wed May 27 , 2020
ಶೋಪಿಯಾನ್ : ರೆಡ್​ ಝೋನ್​ನಿಂದ ಆಗಮಿಸಿದ್ದಕ್ಕಾಗಿ ಕುದುರೆ ಮತ್ತು ಅದರ ಮಾಲೀಕನನ್ನು ಅಧಿಕಾರಿಗಳು ಕ್ವಾರಂಟೈನ್​ನಲ್ಲಿ ಇರಿಸಿದ್ದಾರೆ.ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಕೊರೊನಾ ಪ್ರಕರಣಗಳು ಅಧಿಕವಾಗಿರುವುದರಿಂದ ರೆಡ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ರಜೌರಿಯಿಂದ ಶೋಪಿಯಾನ್​ಗೆ ಆಗಮಿಸಿಸಿದ ಕುದುರೆ ಮತ್ತು ಅದರ ಮಾಲೀಕನನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ.ಈ ಬಗ್ಗೆ ಮಾತನಾಡಿರುವ ತಹಶೀಲ್ದಾರ್ ​’ರಜೌರಿ ರೆಡ್​ ಝೋನ್ ಆಗಿದೆ. ಹೀಗಾಗಿ ಕುದುರೆ ಮತ್ತು ಅದರ ಮಾಲೀಕನನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಮಾಲೀಕನನ್ನು ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇರಿಸಿದ್ರೆ, […]

Advertisement

Wordpress Social Share Plugin powered by Ultimatelysocial