ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿಳಂಬ; ಅ.3ಕ್ಕೆ ಪ್ರತಿಭಟನೆ

ಬೆಂಗಳೂರು, ಅಕ್ಟೋಬರ್ 02 : ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹದಿಂದ ಜನ ತತ್ತರಿಸಿದ್ದಾರೆ. ಮನೆ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಬದುಕು ಬರ್ಬರವಾಗಿದೆ. ಆದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡಿಗಾಸಿನ ಪರಿಹಾರ ನೀಡಿಲ್ಲ, ಸಂತ್ರಸ್ತರ ಕಣ್ಣೀರು ಒರೆಸುವ ಪ್ರಯತ್ನ ಮಾಡಿಲ್ಲ. ಉತ್ತರ ಭಾರತದ ಬಿಹಾರದಲ್ಲಿ ಉಂಟಾದ ಪ್ರವಾಹಕ್ಕೆ ಕೇಂದ್ರ ಸರ್ಕಾರ ತಕ್ಷಣ ಸ್ಪಂದಿಸಿದೆ. ನೆರವು ನೀಡುವ ಭರವಸೆಯನ್ನು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ನೈತಿಕ ಬೆಂಬಲ ನೀಡಿದ್ದಾರೆ. ಆದರೆ, ಕರ್ನಾಟಕವನ್ನು ಸಂಪೂರ್ಣವಾಗಿ ಮರೆತು ಹೋಗಿದ್ದಾರೆ. ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆ ಕೇಂದ್ರ ಸರ್ಕಾರದ ಈ ಮಲತಾಯಿ ಧೋರಣೆಯನ್ನು ಖಂಡಿಸಿದೆ. ಅಕ್ಟೋಬರ್ 3ರಂದು ಇದನ್ನು ಖಂಡಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತದೆ.

Please follow and like us:

tmadmin

Leave a Reply

Your email address will not be published. Required fields are marked *

Next Post

ಹುಡುಗಿಯರ ಚುಡಾಯಿಸುವ ಪೋಕರಿಗಳ ಹೆಡೆ-ಮುರಿ ಕಟ್ಟಲಿರುವ ದುರ್ಗೆಯರು

Wed Oct 2 , 2019
ದಾವಣಗೆರೆ, ಅಕ್ಟೋಬರ್ 02: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಹುಡುಗರು ಇನ್ನು ಮುಂದೆ ಯುವತಿಯರನ್ನು ಚುಡಾಯಿಸುವ ಮುನ್ನ ಹುಷಾರಾಗಿರಬೇಕು. ಹುಡುಗಿಯರ ತಂಟೆಗೆ ಹೋದರೆ ತಂಟೆಕೋರ ಹುಡುಗರಿಗೆ ಕಾದಿದೆ ಮಾರಿ ಹಬ್ಬ. ಹುಡುಗಿಯರನ್ನು ಚುಡಾಯಿಸುವ ಪುಂಡಪೋಕರಿಗಳನ್ನು ಮಟ್ಟ ಹಾಕಲೆಂದೇ ಹೊಸ ಪಡೆಯೊಂದು ಇದೀಗ ರಸ್ತೆಗಿಳಿದಿದೆ. ಹುಡುಗರ ಪುಂಡಾಟಿಕೆಗಳಿಗೆ ಬ್ರೇಕ್ ಹಾಕುವ ಮೂಲಕ, ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡಲು ಈ ಪಡೆ ಸಜ್ಜುಗೊಂಡಿದೆ. ಅದೇ ದುರ್ಗಾ ಪಡೆ. ಕೆಲ ಯುವಕರು ಗುಂಪು ಕಟ್ಟಿಕೊಂಡು […]

Advertisement

Wordpress Social Share Plugin powered by Ultimatelysocial