ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆಗೆ ಪ್ರಕ್ರಿಯೆ ಆರಂಭ

ಬೀದರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಶುಸಂಗೊಪನಾ ಸಚಿವರು, ಸರ್ವೋಚ್ಛನ್ಯಾಯಾಲಯದ ಆದೇಶದಂತೆ ರಾಜ್ಯದಲ್ಲಿ ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ ಮಾಡಲಾಗುತ್ತದೆ. ಪ್ರಾಣಿಗಳ ಹಿಂಸೆ ತಡೆಯುವ ಕಾನೂನುಗಳನ್ನ ಬಿಗಿಗೊಳಿಸಲು ಕ್ರಮವಹಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಾಣಿ‌ ಕಲ್ಯಾಣ ಮಂಡಳಿ ಸ್ಥಾಪಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಒಟ್ಟು 4214 ಪಶುವೈದ್ಯಕೀಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 85.22 ಲಕ್ಷ ದನಗಳು,29.98 ಲಕ್ಷ ಎಮ್ಮಗಳು ಹಾಗು 110.91 ಲಕ್ಷ ಕುರಿಗಳು ಮತ್ತು 61.96 ಲಕ್ಷ ಮೇಕೆಗಳಿವೆ. ಪ್ರಾಣಿಗಳ ರಕ್ಷಣೆಗೆ ಚಿಂತನೆ ಮಾಡಿದ್ದು, ಪ್ರಾಣಿಗಳ ರಕ್ಷಣೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಈ ಪ್ರಾಣಿ ಕಲ್ಯಾಣ ಮಂಡಳಿ ನೆರವಾಗಲಿದೆ ಎಂದು ಪಶುಸಂಗೋಪನಾ ಸಚಿವರು ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಮಾತು

Sun Jul 26 , 2020
ಕಾರ್ಗಿಲ್ ಯುದ್ದ ಗೆದ್ದ ಸಂಭ್ರಮವನ್ನ ದೇಶ ಎಂದು ಮರೆಯುವುದಿಲ್ಲ….ನಿಮ್ಮ ತ್ಯಾಗ ಬಲಿದಾನಗಳು ಎಂದೆAದಿಗು ಚಿರಾಯು , ಕಾರ್ಗಿಲ್ ವಿಜಯ್ ದಿವಸ್‌ನ ಶುಭಾಷಯಗಳು ಎಂದು ಮೋದಿ ಯೋಧರು ಹಗು ಜನತೆಯನ್ನುದ್ದೇಶಿಸಿ ಮನ್ ಕಿ ಬಾತ್ ನಲ್ಲಿ ಹೇಳಿದ್ದಾರೆ ಜೊತೆಗೆ ದೇಶ ಕೊರೊನಾ ಸಂಕಷ್ಟದಲ್ಲಿದೆ ಕೊರನಾ ವಿರುದ್ಧ ಹೋರಾಡದೆ ಬೇರೆ ದಾರಿ ಇಲ್ಲ. ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ನಿಮ್ಮ ಜೀವದ ಜೊತೆ ಇನ್ನೊಬ್ಬರ ಜೀವ ಉಳಿಸಿ ಎಂದು ಪ್ರಧಾನಿ ನರೇಂದ್ರ ಮೋದಿ […]

Advertisement

Wordpress Social Share Plugin powered by Ultimatelysocial