ಪ್ಲಾಸ್ಮಾ ಥೆರಪಿ ಕ್ಲಿನಿಕಲ್ ಟ್ರಯಲ್ ಗೆ ಚಾಲನೆ

ಬೆಂಗಳೂರು: ಕೊರೊನಾ ಸೋಂಕಿತ ರೋಗಿಗಳಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಸರ್ಕಾರ ಮುಂದಾಗಿದೆ. ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ಚಾಲನೆ ನೀಡಿದರು. ಇಂದು ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿ ಪ್ರಯೋಗ ಆರಂಭವಾಗಿದ್ದು, ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಮೊದಲ ಪ್ಲಾಸ್ಮಾ ಥೆರಪಿ ಕ್ಲಿನಿಕಲ್ ಟ್ರಯಲ್​​ಗೆ ಚಾಲನೆ ನೀಡಲಾಗಿದೆ. ಕೊರೊನಾದಿಂದ ಗುಣಮುಖರಾದ ಇಬ್ಬರು ಪ್ಲಾಸ್ಮಾ ದಾನ ಮಾಡಲು ಮುಂದೆ ಬಂದಿದ್ದಾರೆ. ಪ್ಲಾಸ್ಮಾ ವಿಂಗಡಣೆ ಒಂದು ಗಂಟೆಗಳ ಪ್ರಕ್ರಿಯೆಯಾಗಿದ್ದು, ಮೂರು ಗಂಟೆಗಳ ಸಮಯದಲ್ಲಿ ಪ್ಲಾಸ್ಮಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಡೋನರ್​ಗಳ ರಕ್ತ ತೆಗೆದು ಅದರಲ್ಲಿರುವ ಪ್ಲಾಸ್ಮಾ ವಿಂಗಡಿಸಿ ನಂತರದ ರಕ್ತ ವಾಪಸ್ ಡೋನರ್ ದೇಹಕ್ಕೆ ರವಾನೆ ಮಾಡಲಾಗುತ್ತದೆ. ವಾರದಲ್ಲಿ ಎರಡು ಸಲ ಪ್ಲಾಸ್ಮಾ ದಾನ ಮಾಡಬಹುದು.

 

 

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ನಿವಾರಣೆಗೆ ಹಿನಾ ಖಾನ್ ಪ್ರಾರ್ಥನೆ

Sat Apr 25 , 2020
ದೆಹಲಿ: ಇಡೀ ದೇಶವೇ ಕೊರೊನಾದಿಂದ ತತ್ತರಿಸಿದೆ.ಕೊರೊನಾ ವೈರಸ್ ಜಗತ್ತಿನಾದ್ಯಂತ ತೀವ್ರವಾಗಿ ಹರಡುತ್ತಿದೆ. ಹೀಗಾಗಿ ಹಲವು ಮಂದಿ ದೇವರ ಮೊರೆಹೋಗುತ್ತಿದ್ದಾರೆ. ಅದೇ ರೀತಿಯಾಗಿ ಬಾಲಿವುಡ್ ನಟಿ ಹಿನಾ ಖಾನ್ ಕೂಡಾ ಕೊರೊನಾ ನಿವಾರಣೆಗಾಗಿ ಅಲ್ಲಾನ ಮೊರೆ ಹೋಗಿದ್ದಾರೆ. ಕೊರೊನಾ ಪೀಡಿತರು ಆದಷ್ಟೂ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಎಲ್ಲರ ಯೋಗಕ್ಷೇಮಕ್ಕಾಗಿ ನಟಿ ಪ್ರಾರ್ಥನೆ ಮಾಡಿ, ಎಲ್ಲರಿಗೂ ರಂಜಾನ್ ಹಬ್ಬ ಶುಭ ತರಲಿ ಎಂದು ಪ್ರಾರ್ಥಿಸಿದ್ದಾರೆ. Please follow and like […]

Advertisement

Wordpress Social Share Plugin powered by Ultimatelysocial