ಫ್ಯೂಚರ್​ ರಿಟೇಲ್​ ಸಿಬ್ಬಂದಿಗೆ ಬಿಗ್​ ರಿಲೀಫ್​​..! 30 ಸಾವಿರ ಮಂದಿಗೆ ಉದ್ಯೋಗ ನೀಡಲಿದೆ ರಿಲಯನ್ಸ್​

 

ಫ್ಯೂಚರ್​​ ಗ್ರೂಪ್​ ಜೊತೆಯಲ್ಲಿ ರಿಲಯನ್ಸ್​ ವಿಲೀನ ಪ್ರಕ್ರಿಯೆ ಆರಂಭಿಸಿದ್ದು ಇದರಿಂದ ದೇಶದ ಪ್ರಮುಖ ರಿಟೇಲ್​ ವಹಿವಾಟು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವೆಂಡರ್​ಗಳು, ಪೂರೈಕೆದಾರರು ಹಾಗೂ ಉದ್ಯೋಗಿಗಳಿಗೆ ಭಾರೀ ನಿರಾಳವಾಗಿದೆ. ಫ್ಯೂಚರ್​​ ಗ್ರೂಪ್​ನಲ್ಲಿರುವ ಉದ್ಯೋಗಿಗಳಿಗೆ ರಿಲಯನ್ಸ್​​ ಕೆಲಸ ನೀಡಲಿದೆ.

ಈ ಮೂಲಕ ಕೆಲಸ ಕಳೆದು ಕೊಳ್ಳುವ ಭೀತಿಯಲ್ಲಿದ್ದ 30 ಸಾವಿರ ಉದ್ಯೋಗಳಿಗೆ ಇದರಿಂದ ಬಿಗ್​ ರಿಲೀಫ್​ ಸಿಕ್ಕಂತಾಗಿದೆ.

ಕೇವಲ ಉದ್ಯೋಗಿಗಳು ಮಾತ್ರವಲ್ಲದೇ ಫ್ಯೂಚರ್​ ಗ್ರೂಪ್​ನಲ್ಲಿದ್ದ ವೆಂಡರ್​ಗಳು ಹಾಗೂ ಪೂರೈಕೆದಾರರಿಗೂ ದೊಡ್ಡ ಕಾರ್ಪೋರೇಟ್​ ಸಂಸ್ಥೆಯೊಂದು ನೆರವಿಗೆ ಬಂದಿರುವುದು ತಮಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ವ್ಯಾಪಾರದ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯನ್ನು ಹುಟ್ಟು ಹಾಕಿದೆ.

ಇನ್ನು ಫ್ಯೂಚರ್​ ಗ್ರೂಪ್​ ಕಳೆದ ವರ್ಷದಿಂದ ಸ್ಟೋರ್​ನ ಮಾಲೀಕರಿಗೆ ಬಾಡಿಗೆಯನ್ನು ನೀಡಿರಲಿಲ್ಲ. ಮುಂದಿನ ದಿನಗಳಲ್ಲಿ ಫ್ಯೂಚರ್​ ಗ್ರೂಪ್​ ಈ ಬಾಕಿ ಮೊತ್ತ ಪಾವತಿಸಬಹುದು ಎಂಬ ನಂಬಿಕೆ ಕೂಡ ಮಾಲೀಕರಿಗೆ ಇರಲಿಲ್ಲ. ಆದರೆ ರಿಲಯನ್ಸ್​ ಜೊತೆ ಒಪ್ಪಂದದ ಬಳಿಕ ಇವರಿಗೂ ಬಾಕಿ ಮೊತ್ತ ಪಾವತಿಯಾಗಿದ್ದು ಸ್ಟೋರ್​ ಮಾಲೀಕರು ಸಹ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಐಪಿಎಲ್ 2022 ಕ್ಕೂ ಮುನ್ನ ಸುರೇಶ್ ರೈನಾ ಟ್ವಿಟರ್ನಲ್ಲಿ ಏಕೆ ಟ್ರೆಂಡಿಂಗ್ ಆಗಿದ್ದಾರೆ?

Wed Mar 2 , 2022
ಸುರೇಶ್ ರೈನಾ ನಿಸ್ಸಂದೇಹವಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ದೊಡ್ಡ ಹೆಸರುಗಳಲ್ಲಿ ಒಬ್ಬರು. ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗಿನ ದೀರ್ಘಾವಧಿಯ ಒಡನಾಟಕ್ಕಾಗಿ ಚಿನ್ನಾ ಥಾಲಾ ಎಂದೂ ಕರೆಯುತ್ತಾರೆ, ಎಡಗೈ ಬ್ಯಾಟ್ಸ್‌ಮನ್ 2008 ರಲ್ಲಿ ಮೊದಲ ಸೀಸನ್‌ನಿಂದ ಯಶಸ್ವಿ ಹಳದಿ ಆರ್ಮಿಯ ಅವಿಭಾಜ್ಯ ಅಂಗವಾಗಿದ್ದಾರೆ. ಆದಾಗ್ಯೂ, ಐಪಿಎಲ್ 2022 ಮೆಗಾದಲ್ಲಿ CSK ಅವರಿಗೆ ಬಿಡ್ ಮಾಡಲಿಲ್ಲ. ಹರಾಜು ಮತ್ತು ರೈನಾ ಮಾರಾಟವಾಗದೆ ಹೋದಂತೆ, ಇದು ಯುಗದ ಅಂತ್ಯವಾಗಿತ್ತು. 205 ಐಪಿಎಲ್ ಪಂದ್ಯಗಳಲ್ಲಿ 5528 ರನ್ […]

Advertisement

Wordpress Social Share Plugin powered by Ultimatelysocial