ಬಲ್ಗೇರಿಯಾದಲ್ಲಿ ರೆಸ್ಟೋರೆಂಟ್‌ ಸೇವೆ ಆರಂಭ

ಸೋಫಿಯಾ: ಬಲ್ಗೇರಿಯಾದಲ್ಲಿ ಜೂ. 1ರಿಂದ ರೆಸ್ಟೋರೆಂಟ್‌, ಬಾರ್‌ ಹಾಗೂ ಕೆಫೆಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಲು ಅನುವು ಮಾಡಿಕೊಡಲಾಗುತ್ತಿದೆ. ಕೊರೊನಾ ಹರಡುವಿಕೆ ತಡೆಗಟ್ಟಲು ಮಾರ್ಚ್‌ ತಿಂಗಳ ಮಧ್ಯಭಾಗದಿಂದ ಸಂಪೂರ್ಣ ಲಾಕ್‌ಡೌನ್‌ ವಿಧಿಸಲಾಗಿತ್ತು. ಈಗ ನಿರ್ಬಂಧಗಳನ್ನು ಸಡಿಲಗೊಳಿಸಲಾಗುತ್ತಿದೆ ಎಂದು ಅಲ್ಲಿನ ಆರೋಗ್ಯ ಸಚಿವ ಕಿರಿಲ್‌ ಅನಾನೀವ್‌ ತಿಳಿಸಿದ್ದಾರೆ. ಅಲ್ಲದೆ, ಚಿತ್ರಮಂದಿರಗಳು, ಸಂಗೀತ ಕಚೇರಿಗಳು ಮತ್ತು ರಂಗ ಪ್ರದರ್ಶನಗಳನ್ನು ಪುನರಾರಂಭಿಸಲು ಅವರು ಅವಕಾಶ ಮಾಡಿಕೊಟ್ಟಿದ್ದಾರೆ. ಒಳಾಂಗಣ ಸಾಮರ್ಥ್ಯದ ಶೇ. 30 ಹಾಗೂ ಹೊರಾಂಗಣ ಸಾಮರ್ಥ್ಯದ ಶೇ. 50ರಷ್ಟು ಸಂಖ್ಯೆಯ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ನೃತ್ಯ ತರಗತಿಗಳನ್ನು ಆರಂಭಿಸಲೂ ಅನುಮತಿ ನೀಡಿದ್ದಾರೆ. ಉಳಿದಂತೆ, ಜೂ. 14ರ ವರೆಗೆ ಡಿಸ್ಕೋಗಳು, ಪಿಯಾನೋ ಬಾರ್‌ಗಳು ಮತ್ತು ರಾತ್ರಿ ಬಾರ್‌ಗಳನ್ನು ಮುಚ್ಚುವ ಆದೇಶ ಚಾಲ್ತಿಯಲ್ಲಿರುತ್ತದೆ.

Please follow and like us:

Leave a Reply

Your email address will not be published. Required fields are marked *

Next Post

ಲಾಕ್ಡೌನ್ ಮುಂದುವರೆಯುವ ಸಾಧ್ಯತೆ

Thu May 28 , 2020
ಬೆಂಗಳೂರು ಸಹಿತ ದೇಶದ 11 ನಗರಗಳಲ್ಲಿ ಲಾಕ್‌ಡೌನ್‌ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ದೇಶದ 11 ನಗರಗಳಲ್ಲೇ ಶೇ.70 ಸೋಂಕಿತರು ಇರುವುದರಿಂದ ಇಲ್ಲಿ ಮಾತ್ರ ಲಾಕ್‌ಡೌನ್‌ 5 ಪ್ರಕಟಿಸುವ ಸಾಧ್ಯತೆಯಿದೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಲಿರುವ ಮನ್‌ ಕಿ ಬಾತ್‌ ವೇಳೆಯಲ್ಲೇ ಈ ಬಗ್ಗೆ ಪ್ರಕಟವಾಗುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಜೂನ್​ ತಿಂಗಳಲ್ಲೂ ಲಾಕ್​ಡೌನ್​ ಮೂಂದುವರಿಯಲಿದೆ. ಆದರೆ ಲಾಕ್​ಡೌನ್  ಕೆಲವೇ […]

Advertisement

Wordpress Social Share Plugin powered by Ultimatelysocial