ಬಳ್ಳಾರಿಯಲ್ಲಿ ಡೆಂಗ್ಯೂ ಅಬ್ಬರ

ಬಳ್ಳಾರಿ: ಕೊರೊನಾದತ್ತಲೇ ಎಲ್ಲರ ಗಮನ ಇರುವಾಗ, ಗೊತ್ತೇ ಆಗದೆ ಡೆಂಗ್ಯೂ ಕಾಲಿಟ್ಟಿದೆ. ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ತಗ್ಗಿತು ಎಂದು ನಿಟ್ಟುಸಿರುಬಿಡುವಷ್ಟರಲ್ಲಿ ಇದೀಗ ಡೆಂಗ್ಯೂ ತಾಂಡವವಾಡುತ್ತಿದೆ. ಕೊರೊನಾ ಭೀತಿ ಜೊತೆಜೊತೆಗೆ ಡೆಂಗ್ಯೂ ಶುರುವಾಗಿದ್ದು, ಜನರು ಆತಂಕಗೊಂಡಿದ್ದಾರೆ.  ಬಳ್ಳಾರಿ ಜಿಲ್ಲೆಯಾದ್ಯಂತ ೧೧೦ಕ್ಕೂ ಹೆಚ್ಚು ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ದಾಖಲಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಒಂದು ವರ್ಷದ ಅವಧಿಗೆ ಬರುತ್ತಿದ್ದ ಪ್ರಕರಣಗಳು ಮೂರು ತಿಂಗಳಲ್ಲೇ ಪತ್ತೆಯಾಗಿವೆ. ಕೊರೊನಾದೊಂದಿಗೆ ಡೆಂಗ್ಯೂ ಕೂಡ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗುತ್ತಿದೆ. ಬಳ್ಳಾರಿ, ಸಂಡೂರು, ಕೂಡ್ಲಿಗಿ, ಹರಪನಹಳ್ಳಿ ಹೀಗೆ ಅನೇಕ ತಾಲೂಕುಗಳಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿವೆ ಎಂದು ಆರೋಗ್ಯ ಇಲಾಖೆಯಿಂದ ಮಾಹಿತಿ ಒದಗಿಸಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಪಾದರಾಯನಪುರ ಜಮೀರ್ ಅಹಮದ್ ಫಾದರ್ ಪ್ರಾಪರ್ಟಿ ಅಲ್ಲ

Wed Apr 22 , 2020
ಪಾದರಾಯನಪುರಕ್ಕೆ ಅನುಮತಿ ಪಡೆದು ಹೋಗಲು ಅದು ಜಮೀರ್ ಅಹಮದ್ ಫಾದರ್ ಪ್ರಾಪರ್ಟಿ ಅಲ್ಲ ಎಂದು ಸಚಿವ ಸಿ.ಟಿ.ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಚಿಕ್ಕಮಗಳೂರನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವಾಗ ವಿಧಾನಸಭೆಗೆ ಆಯ್ಕೆಯಾಗಿ ಬಂದಿದ್ದೇನೆಯೋ ಅವಾಗಲೇ ಜಮೀರ್ ಕೂಡ ಆಯ್ಕೆಯಾಗಿ ಬಂದಿದ್ದಾರೆ. ಹೀಗಾಗಿ ಜಮೀರ್ ಅವರಿಗೆ ಒಂದು ಕಾನೂನು ನನಗೊಂದು ಕಾನೂನು ಇಲ್ಲ. ಈ ದೇಶದ ಕಾನೂನು ಎಲ್ಲರಿಗೂ ಒಂದೇ ರೀತಿ ಅನ್ವಯವಾಗುತ್ತದೆ. ಈಗಾಗಲೇ ಮುಖ್ಯಮಂತ್ರಿಗಳು ಅವನು […]

Advertisement

Wordpress Social Share Plugin powered by Ultimatelysocial