ಬಾಲಕನಿಗೆ ಬರ್ತ್ಡೇ ಸರ್‌ಪ್ರೈಸ್ ಕೊಟ್ಟ ಪೊಲೀಸರು

ಪುಣೆ: ಲಾಕ್‌ಡೌನ್ ನಡುವೆ ಪುಣೆ ಪೊಲೀಸರು ೧೫ ವರ್ಷದ ಹುಡುಗನ ಹುಟ್ಟುಹಬ್ಬ ಆಚರಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವತ್ಸಲ್ ಶರ್ಮಾ ಎನ್ನುವ ಬಾಲಕನ ತಂದೆ ಕೊರೊನಾ ಲಾಕ್‌ಡೌನ್‌ನಿಂದಾಗಿ ಅಮೆರಿಕಾದಲ್ಲಿದ್ದಾರೆ. ತಾಂತ್ರಿಕ ಸಮಸ್ಯೆ ಕಾರಣ ತಮ್ಮ ಮಗನನ್ನ ಸಂಪರ್ಕಿಸಲಾಗದೆ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಲೂ ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರು ಪುಣೆ ಪೊಲೀಸರಿಗೆ ಇ-ಮೇಲ್ ಮಾಡಿ, ಮಗನಿಗೆ ಶುಭಾಶಯ ತಿಳಿಸುವಂತೆ ಕೇಳಿಕೊಂಡಿದ್ದರು. ತಂದೆಯ ಕೋರಿಕೆಗೆ ಸ್ಪಂದಿಸಿದ ಪೊಲೀಸರು ಮೊಬೈಲ್ ನಂಬರ್ ಮೂಲಕ ಮನೆಯನ್ನ ಪತ್ತೆ ಹಚ್ಚಿ, ಭಾನುವಾರ ತಡರಾತ್ರಿ ಬರ್ತ್ಡೇ ಕೇಕ್‌ನೊಂದಿಗೆ ವತ್ಸಲ್‌ಗೆ ಸರ್‌ಪ್ರೈಸ್ ಕೊಟ್ಟಿದ್ದಾರೆ. ಇದಕ್ಕೆ ಧನ್ಯವಾದ ತಿಳಿಸಿರುವ ವತ್ಸಲ್ ಶರ್ಮಾ, ಪೊಲೀಸರು ಈ ವರ್ಷ ನನ್ನ ಹುಟ್ಟುಹಬ್ಬವನ್ನ ಮತ್ತಷ್ಟು ವಿಶೇಷವಾಗಿಸಿದ್ದಾರೆ ಅಂತ ಹೇಳಿದ್ದಾನೆ.

Please follow and like us:

Leave a Reply

Your email address will not be published. Required fields are marked *

Next Post

ಅಸ್ಸಾಂ ಸರ್ಕಾರದಿಂದ ಪತ್ರಕರ್ತರಿಗೆ ೫೦ ಲಕ್ಷ ಜೀವ ವಿಮಾ

Tue Apr 28 , 2020
ಗುವಾಹಟಿ: ಕೋವಿಡ್ ವಿರುದ್ಧ ಹೋರಾಡುತ್ತಿರು ಪತ್ರಕರ್ತರಿಗೆ ಅಸ್ಸಾಂ ರಾಜ್ಯ ಸರ್ಕಾರದಿಂದ ೫೦ಲಕ್ಷ ಜೀವ ವಿಮಾ ನೀಡುತ್ತದೆ ಎಂದು ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಹೇಳಿದರು. ಪತ್ರಕರ್ತರು ತಮ್ಮ ಪ್ರಾಣವನ್ನು ಒತ್ತೆಇಟ್ಟು ಎಲ್ಲರಿಗೂ ಸುದ್ದಿಗಳನ್ನು ಮುಟ್ಟಿಸುತ್ತಾರೆ. ಹಾಗೂ ಕೊರೊನಾಕ್ಕೆ ಸಂಬಂಧಿಸಿದ ವಿಷಯಗಳನ್ನು ಭಿತ್ತರಿಸುತ್ತಾರೆ. ಅವರೇ ನಿಜವಾದ ವೀರರು ಎಂದು ಹೇಳಿದರು. ಅವರಿಗೆ ನಮ್ಮ ಸರ್ಕಾರ ಪ್ರತಿಯೊಬ್ಬರಿಗೂ ೫೦ಲಕ್ಕದ ಜೀವ ವಿಮಾ ನೀಡುತ್ತದೆ ಎಂದು ತಿಳಿಸಿದ್ದಾರೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ […]

Advertisement

Wordpress Social Share Plugin powered by Ultimatelysocial