ಬಾಲಿವುಡ್ ಪ್ರವೇಶಿಸಲು ತಯಾರಾದ ಸಚಿನ್ ಪುತ್ರಿ ಸಾರಾ!

ವಿಶ್ವ ಕಂಡ ಅಪ್ರತಿಮ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಈಗ ವಿಶ್ರಾಂತ ಜೀವನ ಕಳೆಯುತ್ತಿದ್ದಾರೆ. ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಕುಟುಂಬ, ಗೆಳೆಯರೊಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಐಪಿಎಲ್ ಸಮಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ಸಹ ಕ್ರಿಕೆಟ್‌ ಆಟಗಾರರಾಗಿದ್ದು, ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಹೆಚ್ಚುವರಿ ಆಟಗಾರರಾಗಿದ್ದಾರೆ. ಬೌಲರ್ ಆಗಿರುವ ಅರ್ಜುನ್‌ಗೆ ಈವರೆಗೆ ಯಾವುದೇ ಐಪಿಎಲ್ ಪಂದ್ಯದಲ್ಲಿ ಆಡುವ ಅವಕಾಶ ಲಭಿಸಿಲ್ಲ.

ಅರ್ಜುನ್ ತೆಂಡೂಲ್ಕರ್ ಅಪ್ಪನ ಹಾದಿ ಹಿಡಿದರೆ ಸಚಿನ್‌ ಮಗಳು ಸಾರಾ ತೆಂಡೂಲ್ಕರ್ ಅಮ್ಮನ ಹಾದಿ ಹಿಡಿದಿದ್ದರು. ಲಂಡನ್‌ನಲ್ಲಿ ಮೆಡಿಸಿನ್‌ ಪದವಿ ಪಡೆದಿರುವ ಸಾರಾ ಬುದ್ಧಿವಂತೆ. ಆದರೆ ತಮ್ಮ ಪದವಿಗೆ ಸಂಬಂಧಿಸಿದ ಉದ್ಯೋಗ ಮಾಡದೆ, ಕೆಲ ತಿಂಗಳ ಹಿಂದೆ ಬ್ರ್ಯಾಂಡ್ ಒಂದಕ್ಕೆ ಮಾಡೆಲ್ ಆಗಿ ಕಾಣಿಸಿಕೊಂಡಿದ್ದರು. ಅದರ ಹೊರತಾಗಿ ಹೆಚ್ಚಾಗಿ ಹೊರಗೆಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗ ಬಂದಿರುವ ಸುದ್ದಿಯಂತೆ ಸಾರಾ ತೆಂಡೂಲ್ಕರ್ ಸಿನಿಮಾಗಳಲ್ಲಿ ನಟಿಸಲಿದ್ದಾರಂತೆ.

ಸಾರಾ ತೆಂಡೂಲ್ಕರ್ ನಟನಾ ತರಬೇತಿ ಪಡೆಯುತ್ತಿದ್ದು, ಸಿನಿಮಾಗಳಲ್ಲಿ ಅದೃಷ್ಟ ಹುಡುಕಲು ಸಾರಾ ನಿಶ್ಚಯಿಸಿದ್ದಾರೆ. ಸಾರಾಳ ನಿರ್ಣಯಕ್ಕೆ ತಂದೆ ಸಚಿನ್, ತಾಯಿ ಅಂಜಲಿಯ ಒಪ್ಪಿಗೆ ಇದೆಯಂತೆ. ಸಾರಾಳ ತರಬೇತಿಯನ್ನು ತಾಯಿ ಅಂಜಲಿಯೇ ಸೂಪರ್‌ವೈಸ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಸಾರಾ ತೆಂಡೂಲ್ಕರ್‌ಗೆ ಈ ಹಿಂದೆ ಬಾಲಿವುಡ್‌ನಿಂದ ಸಾಕಷ್ಟು ಅವಕಾಶಗಳು ಬಂದಿದ್ದವು ಆದರೆ ತಾಯಿ ಅಂಜಲಿ ಅವನ್ನು ಬೇಡವೆಂದಿದ್ದರು. ಮಗಳು ಇನ್ನಷ್ಟು ದೊಡ್ಡವಳಾದ ಬಳಿಕ ಸಿನಿಮಾ ರಂಗ ಪ್ರವೇಶಿಸಲಿ ಎಂಬುದು ಅಂಜಲಿಯ ಆಸೆಯಾಗಿತ್ತಂತೆ.

ಇನ್‌ಸ್ಟಾಗ್ರಾಂನಲ್ಲಿ 1.9 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿರುವ ಸಾರಾ ತೆಂಡೂಲ್ಕರ್ ಈಗಾಗಲೇ ಸೆಲೆಬ್ರಿಟಿ ಆಗಿದ್ದಾರೆ. ಈಗ ಸಿನಿಮಾದಲ್ಲಿ ನಟಿಸುವ ಮೂಲಕ ಇನ್ನಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಳ್ಳಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬಾಲಿವುಡ್ ಒದ್ದಾಡುತ್ತಿದೆ, ಹಿಂದಿ ರಾಷ್ಟ್ರಭಾಷೆಯಾಗಿ ಉಳಿದಿಲ್ಲ: ಸುದೀಪ್

Tue Apr 26 , 2022
ಪ್ಯಾನ್ ಇಂಡಿಯಾ ಸಿನಿಮಾ, ಹಿಂದಿ ಪ್ರದೇಶದಲ್ಲಿ ದಕ್ಷಿಣ ಭಾರತ ಸಿನಿಮಾಗಳ ಕಮಾಲ್ ಇತರೆ ವಿಷಯಗಳು ಬಹುವಾಗಿ ಚರ್ಚೆಯಾಗುತ್ತಿವೆ. ಹಲವು ವರ್ಷಗಳಿಂದ ಏಕಮೇವತ್ವ ಮೆರೆದಿದ್ದ ಬಾಲಿವುಡ್‌ ಮೇಲೆ ದಕ್ಷಿಣ ಭಾರತ ಸಿನಿಮಾಗಳು ದಿಗ್ವಿಜಯ ಸಾಧಿಸಿರುವುದನ್ನು ಪ್ರೇಕ್ಷಕರು ಮಾತ್ರವಲ್ಲ ಸಿನಿಮಾ ಮಂದಿ ಸಹ ಸಂಭ್ರಮಿಸುತ್ತಿದ್ದಾರೆ ಕನ್ನಡದ ‘ಕೆಜಿಎಫ್ 2’ ಸಿನಿಮಾ ಮಾಡಿರುವ ಸಾಧನೆಯಂತೂ ಚಿತ್ರರಂಗಕ್ಕೆ, ಕನ್ನಡ ಪ್ರೇಕ್ಷಕರಿಗೆ ಹೆಮ್ಮೆ ತಂದಿದೆ. ಕೆಲವು ದಿನಗಳ ಹಿಂದೆ ಉಪೇಂದ್ರ ನಟನೆಯ ‘R’ ಸಿನಿಮಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ […]

Advertisement

Wordpress Social Share Plugin powered by Ultimatelysocial