ಬಾಲ್ಯ ವಿವಾಹ ತಡೆದ ಅಧಿಕಾರಿಗಳು

ವಾಡಿ: ಪಟ್ಟಣದಲ್ಲಿ ಶುಕ್ರವಾರ ಅಪ್ರಾಪ್ತ ಬಾಲಕಿಯ ಮದುವೆಗೆ ಸಿದ್ಧತೆ ನಡೆದ ವೇಳೆ ದಾಳಿ ಮಾಡಿದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಚೈಲ್ಡ್ ಲೈನ್ ಸಂಘಟನೆಯವರು ಮದುವೆ ನಿಲ್ಲಿಸಿ, ಬಾಲಕಿಯನ್ನು ರಕ್ಷಿಸಿದರು. 16 ವರ್ಷದ ಬಾಲಕಿಯ ಮದುವೆ ಕಲಬುರ್ಗಿಯ 26 ವರ್ಷದ ಯುವಕನೊಂದಿಗೆ ನಿಶ್ಚಯವಾಗಿತ್ತು. ಖಚಿತ ಮಾಹಿತಿ ಮೇರೆಗೆ ಸ್ಥಳೀಯ ಪೊಲೀಸರ ಸಹಾಯದಿಂದ ದಾಳಿ ನಡೆಸಿದ ಅಧಿಕಾರಿಗಳು ಮದುವೆ ನಿಲ್ಲಿಸಿದರು. ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ನಾಗಮ್ಮ ಬಳ್ಳೂರಗಿ, ಚೈಲ್ಡ್‌ಲೈನ್ ಸಂಯೋಜಕ ಸುಂದರರಾಜ ಚಂದನಕೇರಾ, ಸೇರಿದಂತೆ ಸ್ಥಳೀಯ ಪೊಲೀಸರು ಇದ್ದರು.

Please follow and like us:

Leave a Reply

Your email address will not be published. Required fields are marked *

Next Post

 ಶ್ರಮಿಕ ರೈಲುಗಳಲ್ಲಿ ಮೃತಪಟ್ಟವರ ಸಂಖ್ಯೆ ಎಷ್ಟು ಗೊತ್ತೆ..?

Sat May 30 , 2020
ನವದೆಹಲಿ: ದೇಶಾದ್ಯಂತ ವಲಸೆ ಕಾಮಿರ್ಕರ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದ್ದ ಶ್ರಮಿಕ ಎಕ್ಸ್​ಪ್ರೆಸ್​ ರೈಲುಗಳಲ್ಲಿ ಈವರೆಗೆ 80 ಜನರು ಮೃತಪಟ್ಟಿದ್ದಾರೆ ಎಂದು ರೈಲ್ವೆ ಸುರಕ್ಷತಾ ದಳ ತಿಳಿಸಿದೆ. ದೇಶದ ವಿವಿಧ ಭಾಗಗಳಿಂದ ಮೇ 1ರಿಂದ ಮೇ 27ರವರೆಗೆ ಶ್ರಮಿಕ ಎಕ್ಸ್​ಪ್ರೆಸ್​ ರೈಲುಗಳನ್ನು ಬಿಡಲಾಗಿತ್ತು. ಈ ಅವಧಿಯಲ್ಲಿ ಒಟ್ಟಾರೆ ದೇಶಾದ್ಯಂತ 3,870 ರೈಲುಗಳು ಸಂಚರಿಸಿವೆ. ಇದರಲ್ಲಿ ಅಂದಾಜು 50 ಲಕ್ಷಕ್ಕೂ ಅಧಿಕ ಜನರು ತಮ್ಮ ಊರುಗಳಿಗೆ ತೆರಳಿದ್ದಾರೆ. ಮೇ 9 ರಿಂದ ಮೇ […]

Advertisement

Wordpress Social Share Plugin powered by Ultimatelysocial