ಬಾಳೆಗೂ ಬಂತು ಕೋವಿಡ್

ಇಡೀ ವಶ್ವವೇ ಕೋವಿಡ್-19 ವೈರಸ್ ನಿಂದ ತತ್ತರಿಸಿದೆ ಇದರ ಮಧ್ಯೆ ‘ಫ್ಯುಸಾರಿಯಮ್‌ ವಿಲ್ಟ್ ಟಿಆರ್‌4’ ಎಂಬ ನೂತನ ಶಿಲೀಂಧ್ರ ವೈರಸ್ ನ ಮೂಲಕ ವಿಶ್ವಾದ್ಯಂತ ಬಾಳೆಹಣ್ಣಿನ ತೋಟಗಳ ಮೇಲೆ ದಾಳಿ ಮಾಡಿ, ಬೆಳೆಗಳನ್ನು ನಾಶಪಡಿಸುತ್ತಿದೆ. ವಿಶ್ವದಲ್ಲಿಯೇ ಅತೀ ಹೆಚ್ಚು ಬಾಳೆಹಣ್ಣು ಬೆಳೆಯುವ ಭಾರತಕ್ಕೂ ಈ ರೋಗ ಆಗಮಿಸಿದ್ದು, ಬಾಳೆ ಬೆಳೆಯ ಉತ್ಪಾದನೆಯನ್ನು ಕುಂಠಿತಗೊಳಿಸಿದೆ. ತೈವಾನ್‌ನಲ್ಲಿ ಇದನ್ನು ಮೊದಲಿಗೆ ಗುರುತಿಸಲಾಯಿತು. ನಂತರ ಇದು ಏಷ್ಯಾದಿಂದ ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ದೇಶಗಳಿಗೆ ಹರಡಿತು. ಆನಂತರ ಲ್ಯಾಟಿನ್‌ ಅಮೆರಿಕದ ರಾಷ್ಟ್ರಗಳಲ್ಲೂ ಕಾಣಿಸಿಕೊಂಡಿದೆ. ಇದರ ಲಕ್ಷಣಗಳೇನೆಂದರೆ ಮೊದಲಿಗೆ ಬಾಳೆಯ ಎಲೆಗಳ ಮೇಲೆ ದಾಳಿ ಮಾಡಿ ಅವುಗಳು ಹಳದಿ ಬಣ್ಣಕ್ಕೆ ತಿರುಗಿದ ನಂತರ ಒಣಗಿ ಉದುರಿ ಹೋಗುತ್ತವೆ ಬಳಿಕ ಇತರ ಭಾಗಗಳಿಗೆ ಹರಡಿ ಪೂರ್ತಿ ಬಾಳೆ ಗಿಡವೇ ನಾಶವಾಗುತ್ತದೆ. ಈ ರೋಗ ನಿಯಂತ್ರಣಕ್ಕೆ ಈವರೆಗೂ ಯಾವುದೇ ಕೀಟನಾಶಕ ಕಂಡು ಹಿಡಿಯಲಾಗಿಲ್ಲ.

 

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Wed May 27 , 2020
ದೊಡ್ಡಬಳ್ಳಾಪುರ : ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ, ಕಾರ್ಮಿಕ ಕಾಯ್ದೆ ತಿದ್ದುಪಡಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಸಮಿತಿ ನೇಮಕ ಮಾಡುತ್ತಿರುವ ಸರ್ಕಾರದ ಕ್ರಮಗಳನ್ನು ವಿರೋಧಿಸಿ ಹಾಗೂ ಮಾತೃಪೂರ್ಣ ಯೋಜನೆಯನ್ನು ಪುನರಾರಂಭಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ತಾಲೂಕು ಸಮಿತಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.  ಎಪಿಎಂಸಿ ಹಾಗೂ ಟಿಎಪಿಎಂಸಿ ನಿರ್ದೇಶಕ ನಾರನಹಳ್ಳಿ ಎಂ.ಗೋವಿಂದರಾಜು ಮಾತನಾಡಿ, ರಾಜ್ಯ […]

Advertisement

Wordpress Social Share Plugin powered by Ultimatelysocial