ಬಾಳೆ ಹಣ್ಣಷ್ಟೇ ಅಲ್ಲ, ಬಾಳೆಕಾಯಿ ಕೂಡ ಆರೋಗ್ಯಕ್ಕೆ ಒಳ್ಳೇದು..

ನಾವು ಹೆಚ್ಚಾಗಿ ತಿನ್ನುವ ಹಣ್ಣು ಅಂದ್ರೆ ಬಾಳೆ ಹಣ್ಣು. ಎಲ್ಲಾ ಸೀಸನ್‌ನಲ್ಲೂ ಸಿಗುವ, ಕೈಗೆಟಕುವ ಬೆಲೆಗೆ ಸಿಗುವ ಹಣ್ಣು ಅಂದ್ರೆ ಬಾಳೆ ಹಣ್ಣು. ನಾವಿಗಾಗಲೇ ಬಾಳೆಹಣ್ಣನ್ನ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು ಅನ್ನೋ ಬಗ್ಗೆ ಹೇಳಿದ್ದೇವೆ. ಇಂದು ನಾವು ಬಾಳೆ ಕಾಯಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ..

ಬಾಳೆಕಾಯಿ ಎಂದಕೂಡಲೇ ಎಲ್ಲರಿಗೂ ಥಟ್ ಅಂತಾ ನೆನಪಿಗೆ ಬರೋದು ಬಾಳೆಕಾಯಿ ಚಿಪ್ಸ್. ಬಾಳೆಕಾಯಿಯಿಂದ ಪಲ್ಯ, ಸಾರು ಇತ್ಯಾದಿ ಪದಾರ್ಥವನ್ನ ಮಾಡಲಾಗತ್ತೆ. ಇದು ಆರೋಗ್ಯವೂ ಉತ್ತಮವಲ್ಲದೇ, ರುಚಿಯಾಗಿಯೂ ಇರತ್ತೆ. ಬಾಳೆಕಾಯಿಯಲ್ಲಿ ಪೊಟ್ಯಾಶಿಂ ಅಂಶ ಹೆಚ್ಚಾಗಿದ್ದು, ಹೃದಯ ಸಂಬಂಧಿ ಖಾಯಿಲೆ ಇರುವವರು ಬಾಳೆಕಾಯಿ ಸೇವನೆ ಮಾಡಬೇಕು. ಮಿತವಾಗಿ ಬಾಳೆಕಾಯಿ ಸೇವನೆ ಮಾಡಿದ್ರೆ ಹೃದಯ ಸಂಬಂಧಿ ಖಾಯಿಲೆ ಬರದಂತೆ ತಡೆಗಟ್ಟಬಹುದು.

ನಿಮಗೆ ಉದರ ಸಮಸ್ಯೆ ಅಂದ್ರೆ ಹೊಟ್ಟೆ ನೋವು ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇದ್ದಲ್ಲಿ ಬಾಳೆಕಾಯಿಯನ್ನು ಸೇವಿಸಿ. ಇದನ್ನು ಮಿತವಾಗಿ ತಿಂದರೆ ಇದು ಔಷಧಿಯಂತೆ ಕೆಲಸ ಮಾಡತ್ತೆ. ಅದೇ ಅಗತ್ಯಕ್ಕಿಂತ ಹೆಚ್ಚು ಬಾಳೆಕಾಯಿ ಸೇವನೆ ಮಾಡಿದ್ರೆ, ಶಮನವಾಗಬೇಕಿದ್ದ ಹೊಟ್ಟೆನೋವು, ಹೆಚ್ಚಾಗತ್ತೆ. ನಿಮ್ಮ ದೇಹಕ್ಕೆ ವಿಟಾಮಿನ್ ಅವಶ್ಯಕತೆ ಇದ್ದಲ್ಲಿ ಬಾಳೆಕಾಯಿ ಪದಾರ್ಥ ಮಾಡಿ ಸೇವಿಸಿ.

ಇನ್ನು ನೀವು ಯಂಗ್ ಆಗಿ ಕಾಣಬೇಕಂದ್ರೆ ಕೂಡ ಬಾಳೆಕಾಯಿ ಸೇವನೆ ಮಾಡಿ. ಇದರ ಸೇವನೆಯಿಂದ ಮುಖದ ಮೇಲಿನ ಸುಕ್ಕು ಕಡಿಮೆಯಾಗುತ್ತದೆ. ಮಿತವಾಗಿ ಬಾಳೆಕಾಯಿ ಸೇವನೆ ಮಾಡುವುದರಿಂದ ತ್ವಚೆಗೆ ಸಂಬಂಧಿಸಿದ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಇನ್ನು ಅಗತ್ಯಕ್ಕಿಂತ ಹೆಚ್ಚು ಬಾಳೇಕಾಯಿ ಸೇವನೆ ಮಾಡಬೇಡಿ. ಇದರಿಂದ ಕೀಲು ನೋವು ಬರಬಹುದು. ಹೊಟ್ಟೆ ಹಾಳಾಗಬಹುದು. ನಿಮಗೆ ಬಾಳೆ ಕಾಯಿ ಸೇವನೆ ಮಾಡಿದ್ರೆ ಅಲರ್ಜಿ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಸೇವನೆ ಮಾಡುವುದು ಉತ್ತಮ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಗಳು ನಿಶಾ ಅವರ ಕೈಯನ್ನು ಸಾರ್ವಜನಿಕವಾಗಿ ಹಿಡಿಯದಿದ್ದಕ್ಕಾಗಿ ಸನ್ನಿ ಲಿಯೋನ್ ಅವರನ್ನು ಟ್ರೋಲ್ ಮಾಡಿದ್ದಕ್ಕಾಗಿ ಡೇನಿಯಲ್ ವೆಬರ್ ಜನರನ್ನು ದೂಷಿಸಿದ್ದಾರೆ, ಇದನ್ನು 'ಅಸಂಬದ್ಧ' ಎಂದು ಕರೆದಿದ್ದಾರೆ;

Fri Jan 7 , 2022
ಸನ್ನಿ ಲಿಯೋನ್ ಅವರ ಪತಿ ಡೇನಿಯಲ್ ವೆಬರ್ ಇತ್ತೀಚೆಗೆ ತಮ್ಮ ಮಗಳು ನಿಶಾ ಅವರ ಕೈಯನ್ನು ಸಾರ್ವಜನಿಕವಾಗಿ ಹಿಡಿದಿಲ್ಲ ಎಂದು ನೆಟಿಜನ್‌ಗಳು ತಮ್ಮ ಹೆಂಡತಿಯನ್ನು ಟ್ರೋಲ್ ಮಾಡುವುದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇದನ್ನು ‘ಅಸಂಬದ್ಧ’ ಎಂದು ಕರೆದ ಡೇನಿಯಲ್ ಅವರು ಸುದ್ದಿ ಪೋರ್ಟಲ್‌ಗೆ ಜನರು ತಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂದು ನಿಜವಾಗಿಯೂ ಹೆದರುವುದಿಲ್ಲ ಎಂದು ಹೇಳಿದರು. ಅವರ ಪುತ್ರರಿಗೆ ಮೂರು ವರ್ಷ ವಯಸ್ಸಾಗಿದೆ ಮತ್ತು ಅವರು ಉದ್ಯಾನದಲ್ಲಿ ಕಾಡು ಪ್ರಾಣಿಗಳಂತೆ […]

Advertisement

Wordpress Social Share Plugin powered by Ultimatelysocial