ಬಿಡಿಎ ಕಾರ್ನರ್ ಸೈಟ್ ಗಳ ಇ-ಹರಾಜು

ಕೋವಿಡ್‌-19 ಹಿನ್ನೆಲೆಯಲ್ಲಿ ನಾನಾ ಉದ್ಯಮಗಳು ಸೊರಗಿವೆ, ಆದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೂ ಜೂನ್ 20 ರಿಂದ ಜುಲೈ 7ರವರೆಗೆ 205 ಕಾರ್ನರ್ ಸೈಟ್ ಗಳ ಇ-ಹರಾಜು ನಡೆಯಲಿದೆ ಎಂದು ಬಿಡಿಎ ಆಯುಕ್ತ ಎಚ್ ಆರ್ ಮಹಾದೇವ್ ಹೇಳಿದ್ದಾರೆ, ಈ ಸಂಬಂಧ ಕುರಿತು ಇಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಪ್ರಾಧಿಕಾರ ನಿರ್ಮಿಸಿರುವ ಬನಶಂಕರಿ ಲೇಔಟ್‌, ಸರ್‌ ಎಂ. ವಿಶ್ವೇಶ್ವರಯ್ಯ ಲೇಔಟ್‌, ಎಚ್‌ಎಸ್‌ಆರ್‌ ಲೇಔಟ್‌ ಸೇರಿದಂತೆ ನಾನಾ ಬಡಾವಣೆಗಳಲ್ಲಿರುವ ಒಟ್ಟು 205 ಮೂಲೆ ನಿವೇಶನಗಳನ್ನು ಇ-ಹರಾಜು ಪಟ್ಟಿಗೆ ಸೇರಿಸಲಾಗಿದ್ದು. ಜೂನ್.20ರಿಂದ ಬಿಡ್‌ ಆರಂಭವಾಗಲಿದ್ದು, ಜುಲೈ.7ರವರೆಗೆ ಕಾಲಾವಕಾಶವಿರುತ್ತದೆ. ಜು.7ರಂದು ಬಿಡ್‌ ಆಧರಿಸಿ ಹರಾಜು ಮಾಡಲಾಗುತ್ತದೆ. ಆಯಾ ಬಡಾವಣೆವಾರು ಕಾರ್ನರ್‌ ಸೈಟ್‌ಗಳ ವಿವರಗಳನ್ನು ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತದೆ ಎಂದು ಬಿಡಿಎ ಅಧಿಕಾರಿಗಳು ಹೇಳಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ

Thu Jun 18 , 2020
ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಘೋಷಣೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಆರ್. ಶಂಕರ್ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ. ಹಾಗೆಯೇ ರಾಜ್ಯಾಧ್ಯಕ್ಷರು, ಬಿಜೆಪಿ ವರಿಷ್ಠರು, ಹೈಕಮಾಂಡ್ ಗೆ ನಾನು ಅಭಿನಂದನೆ ಸಲ್ಲಿಸ್ತೇನೆ ಎಂದು ಮಾಜಿ ಸಚಿವ ಆರ್. ಶಂಕರ್ ಹೇಳಿದರು. ಹಾಗೆಯೇ ಎಂಟಿಬಿ ನಾಗರಾಜ್‌, ಆರ್‌. ಶಂಕರ್‌, ಸುನಿಲ್‌ […]

Advertisement

Wordpress Social Share Plugin powered by Ultimatelysocial