ಬಿಸಿಲಿಗೆ ಸದಾ ಹೊಳೆಯುವ ಸುರಂಗ ಹಾವು |snake | Speed news kannada |

ಯಳಂದೂರು: ಕರುನಾಡಿನ ಘಟ್ಟ ಪ್ರದೇಶ ಮತ್ತು ಬಯಲಿನಲ್ಲಿ ಬಿಸಲಿಗೆ ಸದಾ ಮಿನುಗುವ ಉರಗ ಪ್ರಬೇಧಸುರಂಗದ ಹಾವು. ಹಗಲಿನಲ್ಲಿ ಸದಾ ಕ್ರಿಯಾಶೀಲ. ವೃಕ್ಷವಾಸಿ. ವೇಗ ಮತ್ತು ನಿಖರವಾಗಿ ಗುರಿ ಮುಟ್ಟಿ ಬೇಟೆ ಪ್ರಾಣಿಯನ್ನು ಭಕ್ಷಿಸುವ ಇವುಗಳ ಸಂತತಿ ಈಗ ಅಳಿವಿನಂಚಿನಲ್ಲಿದೆ.ತಾಲ್ಲೂಕಿನ ಚಳಿ ಮತ್ತು ಬಿಸಿಲು ವಾತಾವರಣದಲ್ಲಿ ಸುರಂಗದ ಹಾವು ಕಂಡುಬರುತ್ತದೆ. ದಟ್ಟ ಪೊದೆಗಳಲ್ಲಿ ಹಾಗೂ ಹಗಲಿನ ಸಮಯ ಮರವೇರಿ ವಿಶ್ರಮಿಸುತ್ತವೆ. ತೆಳ್ಳನೆಯ ನೀಳವಾದ ಶರೀರ. ನಯವಾದ ಪೊರೆಯ ಹುರುಪೆ, ತುಸು ಚಪ್ಪಟೆಯಾದ, ಉದ್ದ ತಲೆ, ದೊಡ್ಡದಾದ ದುಂಡು ಕಣ್ಣು ಮತ್ತು ಪಾಪೆ. ಉದ್ದವಾದ ಬಾಲ ಮರವೇರಲು ಸಹಾಯಕವಾಗಿದೆ. ದೇಹ ಕಂದು ಇಲ್ಲವೇ ತಿಳಿ ಹಳದಿ ಬಣ್ಣಗಳಿಂದ ಕೂಡಿದ ಸುಂದರ ಹಾವು ಇದು. ಸದಾ ಮನುಷ್ಯರಿಂದ ದೂರು ಇರುವ ಈ ಹಾವಿಗೆ ಇಲಿಗಳೇ ಪ್ರಧಾನ ಆಹಾರ.ಶರೀರ ವೈವಿಧ್ಯ ಶರೀರದ ಪಾರ್ಶ್ವಗಳಲ್ಲಿ ಹಾಲಿನ ಕೆನೆ ಬಣ್ಣ ಕಂಡುಬರುತ್ತದೆ. ತಲೆಯ ಎರಡು ಕಡೆಯೂಮೂಗಿನ ನೇರಕ್ಕೆ ದಟ್ಟ ಕಪ್ಪುವರ್ಣದ ಗೆರೆ ಕಣ್ಣು ಕುತ್ತಿಗೆ ತನಕ ಲಂಬಿಸಿದೆ. ಕೆಳತುಟಿ ಮತ್ತು ಮೇಲ್ದುಟಿ ಫಲಗಳು ಕೆನೆಬಣ್ಣ ಹೊಂದಿದ್ದು, ನೆತ್ತಿಯೂ ದಟ್ಟ ಕಂಚಿನ ಬಣ್ಣ ಹೊಂದಿದೆ. ಶರೀರದ ತಳಭಾಗ ಬಿಳಿ ಇಲ್ಲವೇ ತಿಳಿಹಳದಿ ಬಣ್ಣದಿಂದ ಕೂಡಿರುತ್ತದೆ.’ಗಂಡಿಗಿಂತ ಹೆಣ್ಣು ಹಾವುಗಳು ದೊಡ್ಡವು. 150 ಸೆಂ.ಮೀ. ಉದ್ದ ಇರುತ್ತವೆ. ವಿಷಕಾರಿ ಅಲ್ಲ ಹಗಲಿನಲ್ಲಿ ಸದಾ ಸಂಚಾರಿ. ಪೊದೆ ಸಸ್ಯ ಮತ್ತು ನೀಳ ಮರಗಳಲ್ಲಿ ಕಂಡುಬರುವ ಹಲ್ಲಿ, ಓತಿಕ್ಯಾತ, ಮರಗಪ್ಪೆ, ನೆಲಗಪ್ಪೆಗಳ ಮರಿ, ಹಕ್ಕಿಮರಿಗಳನ್ನು ಭಕ್ಷಿಸುತ್ತವೆ. ಚುರುಕಾದ ಜೀವಿಗಳು. ಇಲಿಗಳನ್ನು ಹಿಡಿಯುವ ಸಂದರ್ಭದಲ್ಲಿ ನೇರವಾಗಿ ಮರದಿಂದ ಧುಮುಕುತ್ತವೆ. ಕೆಣಕಿದರೆ ನೀಳವಾದ ಕುತ್ತಿಗೆಯನ್ನು ಉಬ್ಬಿಸಿ ಬೆದರಿಸುತ್ತವೆ. ಸೌಮ್ಯ ಸ್ವಭಾವ ಹೊಂದಿದ್ದರೂ, ತಕ್ಷಣಕ್ಕೆ ಒಗ್ಗಿಸಿಕೊಳ್ಳುವುದು ಕಷ್ಟ. ಕೃಷಿಯಲ್ಲಿ ಬಳಕೆಯಾಗುವ ಅತಿಯಾದ ಕೀಟ ನಾಶಕದಿಂದ ಇವುಗಳ ಆವಾಸವೂ ಕಿರಿದಾಗಿದೆ’ ಎಂದು ಹೇಳುತ್ತಾರೆ ಸ್ನೇಕ್ ಮಹೇಶ್.

ಭಾರತದಲ್ಲಿ ನಾಲ್ಕು ಜಾತಿ ಗುರುತು

ತಾಲ್ಲೂಕಿನಲ್ಲಿ ಈಗ ಮುಂಜಾನೆ ಮಂಜು, ಚಳಿ ಹಾಗೂ ಇಬ್ಬನಿ ವಾತಾವರಣ ಕಂಡು ಬರುತ್ತಿದೆ. ಬಿಸಿಲು ನಿಧಾನವಾಗಿ ನೆಲ ತೋಯಿಸುತ್ತದೆ. ಈ ವೇಳೆ ಈ ಹಾವು ವೃಕ್ಷಗಳಿಂದ ಜಿಗಿಯುತ್ತ ದೇಹವನ್ನು ಸೂರ್ಯನ ಶಾಖಕ್ಕೆ ಒಡ್ಡಿಕೊಳ್ಳುತ್ತವೆ.ಇವುಗಳ ವಂಶಾಭಿವೃದ್ಧಿ ಸಮಯ ಜನವರಿ-ಜುಲೈ. ಗಂಡು-ಹೆಣ್ಣು ಮಿಲನವಾದ ನಂತರ ಪಕ್ಷಿಗಳ ಗೂಡು, ಇಲ್ಲವೇ ಮರದ ಪೊಟರೆಗಳಲ್ಲಿ 5-12 ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತವೆ. ಮರಿಗಳು 20 ರಿಂದ 30 ಸೆಂ.ಮೀ. ಉದ್ದ ಇರುತ್ತದೆ. ಇವುಗಳಲ್ಲಿ 10 ಜಾತಿಯ ಹಾವುಗಳಿದ್ದು, ದೇಶದಲ್ಲಿ ನಾಲ್ಕು ಮಾತ್ರ ಕಂಡು ಬರುತ್ತವೆ. ಗ್ರಾಮೀಣ ಭಾಗಗಳಲ್ಲಿ 2 ಪ್ರಬೇಧಗಳನ್ನು ಗುರುತಿಸಲಾಗಿದೆ.’ಸ್ಥಳೀಯರು ಸುರಂಗದ ಹಾವು, ಕಂಚುಬೆನ್ನಿನ ಮರಹಾವು, ಬಿಲ್ಲುಮುರಿ ಹೆಸರಿನಿಂದ ಗುರುತಿಸುತ್ತಾರೆ. ಹಿಂದಿಯಲ್ಲಿ ‘ಗೂಬ್ರಾ, ಇಂಗ್ಲಿಷ್‌ನಲ್ಲಿ ‘ಕಾಮನ್ ಬ್ರಾಂಝ್ ಬ್ಯಾಕ್ ಟ್ರೀ ಸ್ನೇಕ್, ‘ಡೆಂಡ್ರೆಲಾಫಿಸ್ ಪಿಕ್ಟಾಸ್’ ಮತ್ತು ‘ಡೆಂಡ್ರೆಲಾಫಿಸ್ ಟ್ರಿಸ್ಟಿಸ್’ ವೈಜ್ಞಾನಿಕ ಹೆಸರಿನ ಉರಗಗಳು ನಮ್ಮ ಸುತ್ತಮುತ್ತ ಕಂಡುಬರುತ್ತವೆ’ ಎಂದು ಮಾಹಿತಿ ನೀಡುತ್ತಾರೆ ಉರುಗ ತಜ್ಞರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

4 ವರ್ಷಗಳ ನಂತರ ಸಿಕ್ಕ ಗೆಲುವು!

Sun Jan 30 , 2022
  ಹಾವೇರಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಾರ್ವತ್ರಿಕ ಚುನಾವಣೆ-2017ರಲ್ಲಿ 3-ನೆಗಳೂರ (ಸಾಮಾನ್ಯ) ಚುನಾವಣಾ ಕ್ಷೇತ್ರದಿಂದ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿ ಶಿವಕುಮಾರ ಮಾಹೂರ ಅವರು ನಾಲ್ಕೂವರೆ ವರ್ಷಗಳ ಸುದೀರ್ಘ ಕಾನೂನು ಹೋರಾಟದಿಂದ ‘ವಿಜೇತ ಅಭ್ಯರ್ಥಿ’ ಎಂಬ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.2017ರ ಜನವರಿ 14ರಂದು ನಡೆದಿದ್ದ ಎಪಿಎಂಸಿ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಿವಕುಮಾರ್‌ ಮತ್ತು ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಕೃಷ್ಣರೆಡ್ಡಿ ಮೈದೂರ ಈ ಇಬ್ಬರೂ 1149 […]

Advertisement

Wordpress Social Share Plugin powered by Ultimatelysocial