ಬಿಹಾರ Studends ಗೆ ಈಗ ಕುಡುಕರನ್ನು ಪತ್ತೆ ಹಚ್ಚುವ ಹೊಣೆ…

ಶಾಲೆಯಲ್ಲಿ ಪಾಠ ಮಾಡೋದು, ಬಿಸಿಯೂಟ ಬಡಿಸೋದು, ಚುನಾವಣೆ ಕರ್ತವ್ಯ, ಸೆನ್ಸಸ್ ಡ್ಯೂಟಿಗಳನ್ನು ಮಾಡೋದ್ರಲ್ಲಿ ಅದಾಗಲೇ ನಿರತರಾಗಿರುವ ಸರ್ಕಾರಿ ಶಾಲಾ ಶಿಕ್ಷಕರಿಗೆ ಬಿಹಾರ ಸರ್ಕಾರ ಹೊಸ ಜವಾಬ್ದಾರಿಯೊಂದನ್ನು ಹೆಗಲ ಮೇಲೆ ಇಟ್ಟಿದೆ.

ಏಪ್ರಿಲ್ 2016ರಿಂದಲೂ ರಾಜ್ಯದಲ್ಲಿ ಮದ್ಯಪಾನ ನಿಷೇಧವಾಗಿರುವ ಹಿನ್ನೆಲೆಯಲ್ಲಿ, ಹೆಂಡದ ಸೇವನೆ ಹಾಗೂ ಪೂರೈಕೆಯಲ್ಲಿ ಭಾಗಿಯಾದವರು ಯಾರಾದರೂ ಕಣ್ಣಿಗೆ ಬಿದ್ದರೆ ವರದಿ ಮಾಡುವಂತೆ ಶಿಕ್ಷಕರನ್ನು ನಿತೀಶ್ ಕುಮಾರ್‌ ಸರ್ಕಾರ ಸೂಚಿಸಿದೆ.ರಾಜ್ಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸಂಜಯ್ ಕುಮಾರ್‌ ಎಲ್ಲ ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಖುದ್ದು ಬರೆದಿರುವ ಪತ್ರದಲ್ಲಿ, ಸರ್ಕಾರದ ಪ್ರಾಥಮಿಕ, ಮಧ್ಯಮ ಹಾಗೂ ಪ್ರೌಢಶಾಲೆಗಳ ಪ್ರಾಂಶುಪಾಲರು ಹಾಗೂ ಶಿಕ್ಷಕರಿಗೆ, ಮದ್ಯಪಾನ ಹಾಗೂ ಸಾಗಾಟದಲ್ಲಿ ಭಾಗಿಯಾಗಿರುವ ಮಂದಿಯನ್ನು ಪತ್ತೆ ಮಾಡಿ, ಅಬಕಾರಿ ಇಲಾಖೆಗೆ ತಿಳಿಸುವಂತೆ ಸೂಚಿಸಲು ಹೇಳಲಾಗಿದೆ. ಈ ಸಂಬಂಧ ದೂರವಾಣಿ ಸಂಖ್ಯೆಗಳಾದ – 9473400378 ಮತ್ತು 9473400606 ಅಥವಾ ಟೋಲ್ ಫ್ರೀ ಶುಲ್ಕಗಳಾದ 18003456268 ಅಥವಾ 15545ಗೆ ಕರೆ ಮಾಡಲು ಸೂಚಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎರಡೇ ದಿನದಲ್ಲಿ ನೌಕರಿ ನೀಡಿ ಮಾನವೀಯತೆ ಮೆರೆದ ಕಲಬುರಗಿ ಡಿಸಿ ಯಶವಂತ ವಿ.ಗುರುಕರ್

Sat Jan 29 , 2022
  ಕಲಬುರಗಿ, ಜ.28: ತನ್ನ ಗಂಡ ಮೃತರಾದ ಹಿನ್ನೆಲೆಯಲ್ಲಿ ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯಲು ಅರ್ಜಿ ಸಲ್ಲಿಸಿದ್ದ ಮಹಿಳೆಗೆ ಕೇವಲ ಎರಡೇ ದಿನದಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಉದ್ಯೋಗ ನೀಡಿ, ಸಂತ್ರಸ್ತ ಕುಟುಂಬಕ್ಕೆ ನೆರವಾಗಿದ್ದಾರೆ.ಕಲಬುರಗಿ ತಾಲೂಕಿನ ಕುಸನೂರಿನ ಶಿವಲಿಂಗಮ್ಮ ನೌಕರಿ ಪಡೆದವರು.ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ಯಶವಂತ ವಿ.ಗುರುಕರ್, ಜ.25ರಂದು ತಮ್ಮ ಕಚೇರಿ ಮುಂದೆ ಇಬ್ಬರು ಮಕ್ಕಳೊಂದಿಗೆ ಮಹಿಳೆಯೊಬ್ಬರು ಕಾದು ಕುಳಿತಿರುವುದನ್ನು ಕಂಡು ಅವರ ಬಳಿ ತೆರಳಿದರು.ಏನು ನಿಮ್ಮ […]

Advertisement

Wordpress Social Share Plugin powered by Ultimatelysocial