ಬೆಂಗಳೂರು ನಗರದಲ್ಲಿ ಭಾನುವಾರದ ಕರ್ಫ್ಯೂ ಮತ್ತೆ ಜಾರಿ

ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಯಲು ಬೆಂಗಳೂರು ನಗರದಲ್ಲಿ ಘೋಷಣೆ ಮಾಡಿದ್ದ ಲಾಕ್ ಡೌನ್ ಬುಧವಾರ ಮುಂಜಾನೆ 5 ಗಂಟೆಗೆ ಅಂತ್ಯಗೊಳ್ಳಲಿದೆ. ಲಾಕ್ ಡೌನ್ ವಿಸ್ತರಣೆ ಮಾಡುವುದಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದ್ದು, ಭಾನುವಾರದ ಕರ್ಫ್ಯೂ ಮತ್ತೆ ಜಾರಿಗೆ ಬರಲಿದೆ. ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಮುಂಜಾನೆ 6 ಗಂಟೆಯ ತನಕ ಕರ್ಫ್ಯೂ ಜಾರಿಯಲ್ಲಿರುತ್ತದೆ.ಕರ್ನಾಟಕ ಸರ್ಕಾರ ಜುಲೈ 14ರಿಂದ 22ರ ಬೆಳಗ್ಗೆ 5ಗಂಟೆ ತನಕ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ ಡೌನ್ ಘೋಷಣೆ ಮಾಡಿತ್ತು. ಆಗಸ್ಟ್ ತನಕ ಭಾನುವಾರದ ಕರ್ಫ್ಯೂವನ್ನು ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಆದ್ದರಿಂದ, ಲಾಕ್ ಡೌನ್ ತೆರವುಗೊಂಡರೂ ಶನಿವಾರ ರಾತ್ರಿಯಿಂದ ಬೆಂಗಳೂರಿನಲ್ಲಿ ಕರ್ಫ್ಯೂ ಜಾರಿಗೆ ಬರಲಿದೆ.

Please follow and like us:

Leave a Reply

Your email address will not be published. Required fields are marked *

Next Post

ಟಿ-೨೦ ವಿಶ್ವಕಪ್ ಮುಂದೂಡಿಕೆ

Tue Jul 21 , 2020
ಕೊರೊನಾ ಕಾರಣದಿಂದಾಗಿ ಈ ವರ್ಷ ಆಸ್ಟೆçÃಲಿಯಾದಲ್ಲಿ ನಡೆಯಬೇಕಾಗಿದ್ದ ಟಿ-೨೦ ವಿಶ್ವಕಪ್ ಅನ್ನು ಐಸಿಸಿ ಮುಂದಿನ ವರ್ಷಕ್ಕೆ ಮುಂದೂಡಿದೆ. ಅಕ್ಟೋಬರ್ ೧೮ ರಿಂದ ಟೂರ್ನಿ ನಡೆಯಬೇಕಗಿತ್ತು ಆದರೆ ಕೊರೊನಾ ಕಾರಣದಿಂದಾಗಿ ವಿಶ್ವಕಪ್ ನಡೆಸಲು ಸಾಧ್ಯವಿಲ್ಲ ಅಂತ ಐಸಿಸಿ ಸ್ಪಷ್ಟಪಡಿಸಿದೆ ಇದರ ಜೊತೆಗೆ ೫೦ ಓವರ್‌ನ ವಿಶ್ವಕಪ್ ಅನ್ನು ಸಹ ಮುಂದೂಡಿರುವ ಬಗ್ಗೆ ಮಾಹಿತಿ ನೀಡಿದೆ. Please follow and like us:

Advertisement

Wordpress Social Share Plugin powered by Ultimatelysocial