ಭಗವಂತ ಖೂಬಾಗೆ ಕೊರೊನಾ ಸೋಂಕು ದೃಢ

ಇಲ್ಲಿನ ಪೊಲೀಸ್ ಇಲಾಖೆ ಸಿಬ್ಬಂದಿಯನ್ನು ಬೆಂಬಿಡದೇ ಕಾಡುತ್ತಿರುವ ಕೋವಿಡ್-೧೯ ಸೋಂಕು ಈಗ ಚುನಾಯಿತ ಪ್ರತಿನಿಧಿಗಳಿಗೆ ಬೆನ್ನಟ್ಟಿದೆ. ಬುಧವಾರ ಸಂಸದ ಭಗವಂತ ಖೂಬಾಗೂ ವೈರಸ್ ಒಕ್ಕರಿಸಿದೆ. ಸಂಸದರಿಗೆ ಕೋವಿಡ್-೧೯ ಸೋಂಕಿನ ಯಾವುದೇ ರೋಗ ಲಕ್ಷಣಗಳು ಕಂಡುಬAದಿಲ್ಲ. ಆದರೂ ಗಂಟಲು ದ್ರವ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದೆ. ದೆಹಲಿ ಮತ್ತು ಬೆಂಗಳೂರು ಪ್ರಯಾಣ ಜತೆಗೆ ಜಿಲ್ಲೆಯಲ್ಲಿ ವಿವಿಧೆಡೆ ಸಂಚಾರ ಹಿನ್ನಲೆಯಲ್ಲಿ ಸೋಂಕು ತಗುಲಿರುವ ಸಾಧ್ಯತೆ ಇದೆ. ಇಲ್ಲಿನ ಶಿವನಗರದಲ್ಲಿ ಇರುವ ತಮ್ಮ ಮನೆಯಲ್ಲೇ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಸದ ಖೂಬಾ ಅವರಿಗೆ ಪಾಸಿಟಿವ್ ಹಿನ್ನಲೆ ಅವರ ಕುಟುಂಬದ ಎಲ್ಲ ಸದಸ್ಯರ ಕೋವಿಡ್ ಟೆಸ್ಟ್ ಮಾಡಲು ಕ್ರಮ ವಹಿಸಲಾಗುತ್ತಿದೆ. ಜತೆಗೆ ಸಂಸದರ ಸಂಪರ್ಕಕ್ಕೆ ರಾಜಕಾರಣಿಗಳು, ಅಧಿಕಾರಿಗಳು ಸೇರಿ ಹೆಚ್ಚು ಜನರು ಬಂದಿರುವ ಕಾರಣ ಅವರ ಪತ್ತೆ ಕಾರ್ಯ ಆರಂಭ ಆಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಒಲಿಂಪಿಕ್ಸ್ ನಡೆಯುವುದು ಅಸಂಭವ ಎಂದವರಿಗೆ ಕೊಯಿಕೆ ಸ್ಪಷ್ಟನೆ

Wed Jul 15 , 2020
ಕೋವಿಡ್ ಹಾವಳಿಯನ್ನು ಮೆಟ್ಟಿನಿಂತು, ಜಾಗತಿಕ ಒಗ್ಗಟ್ಟಿನ ದ್ಯೋತಕವಾಗಿ ಮುಂದಿನ ವರ್ಷ ಒಲಿಂಪಿಕ್ಸ್ ಪಂದ್ಯಾವಳಿ ನಡೆದೇ ನಡೆಯುತ್ತದೆ ಎಂಬುದಾಗಿ ಟೋಕಿಯೊ ಗವರ್ನರ್ ಯುರಿಕೊ ಕೊಯಿಕೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಇಂಥ ಕಠಿಣ ಸನ್ನಿವೇಶದಲ್ಲಿ ಜಗತ್ತು ಒಗ್ಗಟ್ಟಾಗಿ ನಿಲ್ಲಬೇಕು, ಮನುಕುಲದ ಸಂಬAಧವನ್ನು ದೃಢಗೊಳಿಸಬೇಕು. ಒಲಿಂಪಿಕ್ಸ್ ಆಯೋಜನೆಯಿಂದ ಇದು ಸಾಧ್ಯವಾಗಲಿದೆ’ ಎಂದು ರಾಯರ್‌ಗೆ ನೀಡಿದ ಆನ್‌ಲೈನ್ ಸಂದರ್ಶನದಲ್ಲಿ ಯುರಿಕೊ ಕೊಯಿಕೆ ಹೇಳಿದರು. ಇತ್ತೀಚೆಗೆ ಜಪಾನ್‌ನಲ್ಲಿ ನಡೆದ ವಿವಿಧ ಸಮೀಕ್ಷೆಗಳಲ್ಲಿ ಮುಂದಿನ ವರ್ಷವೂ ಟೋಕಿಯೋದಲ್ಲಿ ಒಲಿಂಪಿಕ್ಸ್ ನಡೆಯುವುದು […]

Advertisement

Wordpress Social Share Plugin powered by Ultimatelysocial