ಭದ್ರತಾ ಸಮಿತಿ ಸದಸ್ಯತ್ವಕ್ಕೆ ಚುನಾವಣೆ

ವಿಶ್ವಸಂಸ್ಥೆ: ಕೋವಿಡ್​ 19 ಕಾರಣಕ್ಕೆ ಹೊಸ ಚುನಾವಣಾ ವ್ಯವಸ್ಥೆಯೊಂದಿಗೆ ಜೂನ್ 17ರಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಆರ್ಥಿಕ ಮತ್ತು ಸಾಮಾಜಿಕ ಸಮಿತಿಗೆ ಸಂಬಂಧಿಸಿದ ಐದು ಕಾಯಂಯೇತರ ಸದಸ್ಯತ್ವಕ್ಕೆ ಚುನಾವಣೆ ನಡೆಯಲಿದೆ. ಸಾಮಾಜಿಕ ಅಂತರ ಕಾಯ್ದುಕೊಂಡೇ ಪ್ರತಿಯೊಬ್ಬ ಸದಸ್ಯರು ಮತ ಚಲಾಯಿಸಲಿದ್ದಾರೆ. ಇದೇ ವೇಳೆ, 75ನೇ ಜನರಲ್ ಅಸೆಂಬ್ಲಿಯ ಅಧ್ಯಕ್ಷರ ಆಯ್ಕೆ ಕೂಡ ನಡೆಯಲಿದೆ ಎಂದು ಯುಎನ್​ಜಿಎ ಅಧ್ಯಕ್ಷ ತಿಜ್ಜಾನಿ ಮುಹಮ್ಮದ್ ಬಂಡೆ ತಿಳಿಸಿದ್ದಾರೆ. ಜನರಲ್ ಅಸೆಂಬ್ಲಿಯ 10 ಕಾಯಂಯೇತರ ಸದಸ್ಯ ರಾಷ್ಟ್ರಗಳ ಪೈಕಿ ಐದು ಸ್ಥಾನಗಳಿಗೆ ಪ್ರತಿ ವರ್ಷ ಚುನಾವಣೆ ನಡೆಯುತ್ತದೆ. ಇದು ಎರಡು ವರ್ಷದ ಅವಧಿಯ ಸದಸ್ಯತ್ವ.ಏಷ್ಯಾ ಪೆಸಿಫಿಕ್​ ಪ್ರಾಂತ್ಯದ ಪ್ರತಿನಿಧಿಯಾಗಿ 2021-22ನೇ ಸಾಲಿಗೆ ಕಾಯಂಯೇತರ ಸದಸ್ಯತ್ವದ ಸ್ಥಾನಕ್ಕೆ ಭಾರತ ಸ್ಪರ್ಧಿಸುತ್ತಿದೆ. ಈ ಸ್ಥಾನಕ್ಕೆ ಭಾರತ ಮಾತ್ರವೇ ಅಭ್ಯರ್ಥಿಯಾಗಿರುವ ಕಾರಣ ಆಯ್ಕೆಯಾಗುವುದು ಖಚಿತವೆನಿಸಿದೆ.ಭಾರತದ ಅಭ್ಯರ್ಥಿತನವನ್ನು ಚೀನಾ, ಪಾಕಿಸ್ತಾನ ಸೇರಿ 55 ಸದಸ್ಯರ ಏಷ್ಯಾ ಪೆಸಿಫಿಕ್ ಗ್ರೂಪ್​ ಕಳೆದ ವರ್ಷವೇ ಶಿಫಾರಸು ಮಾಡಿತ್ತು.

 

Please follow and like us:

Leave a Reply

Your email address will not be published. Required fields are marked *

Next Post

ವಿದೇಶಿ ವ್ಯಾಪರಿಗಳಿಗೆ ಶರತ್ತುಬದ್ದ ಅನುಮತಿ

Wed Jun 3 , 2020
ನವದೆಹಲಿ: ಗೃಹ ಸಚಿವಾಲಯ ಇಂದು ವಿದೇಶಿ ವ್ಯಾಪಾರಿಗಳು, ಎಂಜಿನಿಯರ್ಗಳು ಮತ್ತು ಆರೋಗ್ಯ ವೃತ್ತಿಪರರು ತಮ್ಮ ವೀಸಾಗಳನ್ನು ನವೀಕರಿಸಿ ವಿಶೇಷ ವಿಮಾನಗಳಲ್ಲಿ ದೇಶಕ್ಕೆ ಆಗಮಿಸಬಹುದೆಂಬ ಷರತ್ತುಬದ್ಧ ಅನುಮತಿ ನೀಡಿದೆ. ಗೃಹ ಸಚಿವಾಲಯದ ಈ ಆದೇಶವು ವಿದೇಶಿಯರಿಗೆ ದೇಶಕ್ಕೆ ಪ್ರವೇಶಿಸಲು ಅವಕಾಶ ನೀಡುವ ಮೊದಲ, ಎಚ್ಚರಿಕೆಯ ಹೆಜ್ಜೆಯಾಗಿದ್ದು, ವಿಶೇಷವಾಗಿ ಆರ್ಥಿಕತೆಯನ್ನು ಪುನರಾರಂಭಿಸಲು ಸರ್ಕಾರದ ಪ್ರಯತ್ನಗಳ ಪ್ರಮುಖ ಅಂಶವಾಗಿ ಕಂಡುಬರುತ್ತದೆ.ಕರೋನವೈರಸ್ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಮಾರ್ಚ್ನಲ್ಲಿ ವಿದೇಶಿಯರಿಗೆ ಪ್ರವೇಶ ನಿಷೇಧಿಸಿದ್ದ ಸರ್ಕಾರ, ಈಗ ನವೀಕೃತ […]

Advertisement

Wordpress Social Share Plugin powered by Ultimatelysocial