ಭಾರತಕ್ಕೆ ಮಂಡಿಯೂರಿದ ಚೀನಾ

ನವದೆಹಲಿ: ಭಾರತ-ಚೀನಾ ನಡುವೆ ಆಫ್ರಿಕಾದಲ್ಲಿ ಕುತೂಹಲಕಾರಿ ಕದನವೊಂದು ನಡಿತಿದೆ.  ಆಫ್ರಿಕಾ ಖಂಡದಲ್ಲಿನ ಬೈಕ್ ಉದ್ಯಮದಲ್ಲಿ ಈಗ ಎರಡು ಭಾರತೀಯ ಕಂಪನಿಗಳು ಸೇರಿ ಚೀನಾದ ೨೦೦ ಕಂಪನಿಗಳನ್ನು ಸೋಲಿಸಿವೆ. ಬಜಾಜ್ ಆಟೊ, ಟಿವಿಎಸ್ ಆರ್ಭಟಕ್ಕೆ ಬೆಚ್ಚಿಬಿದ್ದ ಚೀನಿ ಕಂಪನಿಗಳು ಒಂದೊAದಾಗಿ ಹಿಂದೆ ಸರಿಯುತ್ತಿವೆ. ೧೦ ವರ್ಷಗಳ ಹಿಂದೆ ಇದ್ದ ೨೦೦ ಕಂಪನಿಗಳು ಈಗ ೪೦ಕ್ಕಿಳಿದಿವೆ. ಅಷ್ಟು ಮಾತ್ರವಲ್ಲ. ಈ ಎರಡು ಭಾರತೀಯ ಕಂಪನಿಗಳೇ ಮಾರುಕಟ್ಟೆಯಲ್ಲಿ ಶೇ.೫೦ರಷ್ಟು ಪಾಲು ಹೊಂದಿವೆ. ೧೦ ವರ್ಷಗಳ ಹಿಂದೆ ಚೀನೀ ಕಂಪನಿಗಳ ಪಾಲು ಶೇ.೯೦-೯೫ರಷ್ಟಿತ್ತು. ಅದರಲ್ಲೂ ಬಜಾಜ್ ಕಂಪನಿಯದ್ದು ಗರಿಷ್ಠ ಸಾಧನೆ, ಅದರ ಪಾಲೇ ಶೇ.೪೦. ೨೦೨೦ ಮಾರ್ಚ್ಗೆ ಮುಕ್ತಾಯವಾದ ವಿತ್ತೀಯವರ್ಷದಲ್ಲಿ, ಮಾರುಕಟ್ಟೆಯಲ್ಲಿ ಮಾರಾಟವಾದ ಒಟ್ಟು ೨೭ ಲಕ್ಷ ಬೈಕ್‌ಗಳ ಪೈಕಿ, ಬಜಾಜ್ ಹತ್ತಿರ ಹತ್ತಿರ ೧೦ ಲಕ್ಷ ಬೈಕ್ ಮಾರಿದೆ. ಇನ್ನೊಂದು ಕಡೆ ಟಿವಿಎಸ್ ನಿಧಾನಕ್ಕೆ ಏರಿಕೆ ಸಾಧಿಸುತ್ತಿದೆ.

Please follow and like us:

Leave a Reply

Your email address will not be published. Required fields are marked *

Next Post

ಕೊನೆಗೂ ಕಾರು ಸಮುದ್ರಕ್ಕೆ ಆಹುತಿಯಾಯಿತು

Wed Jun 3 , 2020
ನವದೆಹಲಿ: ಸಮುದ್ರದಲ್ಲಿ ಮುಳುಗುತ್ತಿರುವ ಕಾರನ್ನು ಉಳಿಸಲು ಮಾಲೀಕನೊಬ್ಬ ಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಡೈಲಿ ಮೇಲ್ ವರದಿಯ ಪ್ರಕಾರ, ಯುನೈಟೆಡ್ ಕಿಂಗ್‌ಡನ್‌ನ ಲೀ ಡಾಲ್ಬಿ ಆಫ್ ಕೆಂಟ್ ವಿಡಿಯೋವನ್ನು ಚಿತ್ರೀಕರಿಸಿದ್ದು, ವ್ಯಕ್ತಿಯೊಬ್ಬ ಸಮುದ್ರದಲ್ಲಿ ಅರ್ಧ ಮುಳುಗಿರುವ ವೋಕ್ಸ್ವ್ಯಾಗನ್ ಗಾಲ್ಫ್ ಕಾರನ್ನು ಉಳಿಸಿಕೊಳ್ಳವ ಪ್ರಯತ್ನಕ್ಕೆ ಮುಂದಾಗಿರುವುದು ಸೆರೆಯಾಗಿದೆ. ಸಮುದ್ರ ತಟದಲ್ಲಿ ನೀರಿನ ಹತ್ತಿರದಲ್ಲೇ ನಿಲ್ಲಿಸಿದ್ದ ಕಾರನ್ನು ಭಾರಿ ಗಾತ್ರದ ಅಲೆಯೊಂದು ಸಮುದ್ರದೊಳಗೆ ಎಳೆದೊಯ್ಯಿತು. ದುರಾದೃಷ್ಟಕರವೆಂದರೆ ಎಷ್ಟೇ ಪ್ರಯತ್ನ […]

Advertisement

Wordpress Social Share Plugin powered by Ultimatelysocial