ಭಾರತದಂತೆ ಅಮೆರಿಕಾದಲ್ಲೂ ಟಿಕ್‌ಟಾಕ್ ಬ್ಯಾನ್

ಭಾರತದಂತೆ ಚೀನಾ ಆಯಪ್ ಟಿಕ್ ಟಾಕ್ ಬ್ಯಾನ್ ಮಾಡುವಂತೆ ಅಮೆರಿಕಾದ ೨೬ ಕಾಂಗ್ರೆಸ್ ಸದಸ್ಯರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ರಾಷ್ಟ್ರೀಯ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಟಿಕ್ ಸೇರಿದಂತೆ ಚೀನಾದ ಆಯಪ್ ಗಳನ್ನು ಬ್ಯಾನ್ ಮಾಡುವಂತಹ ಮಹತ್ವದ ನರ‍್ಧಾರವನ್ನು ಭಾರತ ಜೂನ್ ನಲ್ಲಿ ತೆಗೆದುಕೊಂಡಿದೆ.ಅಮೆರಿಕದ ಜನತೆಯ ಡಾಟಾ, ಖಾಸಗಿತನ ಅಥವಾ ಭದ್ರತೆಯನ್ನು ಟಿಕ್ ಟಾಕ್ ನಂತಹ ಚೀನಾ ಆಯಪ್ ಗಳು ಸುರಕ್ಷಿತವಾಗಿ ಇಡಲಿವೆ ಎಂಬ ನಂಬಿಕೆ ಇಲ್ಲ, ನಮ್ಮ ದೇಶದ ಸುರಕ್ಷತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಟಿಕ್ ಟಾಕ್ ಸೇರಿದಂತೆ ಚೀನಾದ ಆಯಪ್ ಗಳನ್ನು ನರ‍್ಬಂಧಿಸಲು ಶ್ವೇತಭವನ ಎದುರು ನೋಡುತ್ತಿರುವುದಾಗಿ ಅಮೆರಿಕಾ ರಾಜ್ಯ ಕರ‍್ಯರ‍್ಶಿ ಮೈಕ್ ಪೊಂಪೆಯೊ ಕಳೆದ ವಾರ ಸ್ಪಷ್ಟಪಡಿಸಿದ್ದರು. ತಿಂಗಳು ಅಲ್ಲ, ಈ ವಾರದೊಳಗೆ ಈ ಸಂಬಂಧ ನರ‍್ಧಾರ ಕೈಗೊಳ್ಳಲಾಗುವುದು ಎಂದು ಶ್ವೇತಭವನದ ಮುಖ್ಯಸ್ಥ ಮರ‍್ಕ್ ಮೆಡೋಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಬೀದರ್ ಜಿಲ್ಲೆಯಲ್ಲಿ ಸರಗಳ್ಳತನ

Thu Jul 16 , 2020
ಸರಗಳ್ಳತನ ಮಾಡುತ್ತಿದ್ದ ಇರಾನಿ ಕಾಲೋನಿಯ ಖದೀಮರನ್ನು ಬಂಧಿಸುವಲ್ಲಿ ಸಂತಪೂರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ೧.೨೦ ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ, ಎರಡು ಬೈಕ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಮಹಮ್ಮದ ಅಲಿ, ಜಾಫರ್ ಆಜಮ್, ಗುಲಾಮ್ ರಸೂಲ್, ಹಸನ್ ನಯನ್, ಫರಿದಾ(ಮಸ್ಕಾನ್, ಸಕೀನಾ) ಅಲಿ, ನೀತು, ಸೇಲ್ವಾನಿ ಬೇಗಂ ಹಾಗೂ ಸಬಿಗುಲ್ ಬಂದಿತ ಆರೋಪಿಗಳು ಎಂದು ತಿಳಿದು ಬಂದಿದೆ. ಸರ‍್ವಜನಿಕ ಸ್ಥಳಗಳಲ್ಲಿ ಸಂಚರಿಸುತ್ತಿದ್ದ ಮಹಿಳೆಯರ ಮೈಮೇಲಿನ ಚಿನ್ನಾಭರಣ ಲೂಟಿ […]

Advertisement

Wordpress Social Share Plugin powered by Ultimatelysocial