ಭಾರತ ಕೋವಿಡ್ ಪರೀಕ್ಷಾ ಕಿಟ್ ತಿರಸ್ಕರಿಸಿದ್ದಕ್ಕೆ ಉರಿದು ಬಿದ್ದ ಚೀನಾ

ಬೀಜಿಂಗ್: ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚಲು ಬಳಸುವ ಚೀನಾ ನಿರ್ಮಿತ ರ‍್ಯಾಪಿಡ್ ಆಯಂಟಿಬಾಡಿ ಟೆಸ್ಟ್ ಕಿಟ್‌ಗಳನ್ನು ಬಳಸದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದ್ದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ಕೆಲವು ವ್ಯಕ್ತಿಗಳು ಚೀನಾ ಉತ್ಪನ್ನಗಳಿಗೆ ದೋಷಪೂರಿತ ಎಂದು ಹಣೆಪಟ್ಟಿ ಕಟ್ಟುವುದು ಮತ್ತು ಸಮಸ್ಯೆಗಳನ್ನು ಪೂರ್ವಾಗ್ರಹದಿಂದ ನೋಡುವುದು ಅನ್ಯಾಯ ಮತ್ತು ಬೇಜವಾಬ್ದಾರಿಯುತ ಎಂದು ದೆಹಲಿಯಲ್ಲಿರುವ ಚೀನಾ ರಾಯಭಾರ ಕಚೇರಿಯ ವಕ್ತಾರೆ ಜಿ ರೋಂಗ್ ಹೇಳಿದ್ದಾರೆ. ಚೀನಾದ ಗುವಾಂಗ್‌ಝೌನ ವಾಂಡ್‌ಫೊ ಬಯೋಟೆಕ್ ಲಿಮಿಟೆಡ್ ಮತ್ತು ಝುವಾಹಿ ಲಿವ್‌ಝೋನ್ ಡಯಾಗ್ನಸ್ಟಿಕ್ಸ್ ಇಂಕ್‌ನಿಂದ ತರಿಸಿಕೊಂಡಿರುವ ಟೆಸ್ಟ್ ಕಿಟ್‌ಗಳನ್ನು ಬಳಸದಂತೆ ರಾಜ್ಯಗಳಿಗೆ ಐಸಿಎಂಆರ್ ಸೂಚಿಸಿದ್ದಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಚೀನಾದಿಂದ ತರಿಸಿಕೊಡಿರುವ ಟೆಸ್ಟ್ ಕಿಟ್‌ಗಳ ನಿಖರತೆಯಲ್ಲಿ ತುಂಬಾ ವ್ಯತ್ಯಾಸವಿದೆ. ಹೀಗಾಗಿ ಅವುಗಳನ್ನು ಬಳಸದೆ ವಾಪಸ್ ಕಳುಹಿಸುವಂತೆ ಐಸಿಎಂಆರ್ ನಿರ್ದೇಶನ ನೀಡಿತ್ತು. ಸರ್ಕಾರ ನೀಡಿರುವ ಮಾರ್ಗಸೂಚಿಯನ್ನು ಟೆಸ್ಟ್ ಕಿಟ್‌ಗಳ ಸಂಗ್ರಹ, ಸಾಗಾಟದ ವೇಳೆ ಕಂಪನಿಗಳು ಉಲ್ಲಂಘಿಸಿದ್ದರಿಂದ ನಿಖರತೆಯ ಸಮಸ್ಯೆಯಾಗಿರಬಹುದು ಎಂದೂ ಚೀನಾ ರಾಯಭಾರ ಕಚೇರಿ ಹೇಳಿದೆ.

Please follow and like us:

Leave a Reply

Your email address will not be published. Required fields are marked *

Next Post

520 ಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ

Tue Apr 28 , 2020
ರಾಜ್ಯದಲ್ಲಿ ಇಂದು ಮತ್ತೆ 8 ಜನರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 520ಕ್ಕೆ ಏರಿಕೆಯಾಗಿದೆ . ಈ ಕುರಿತು  ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲಿಟಿನ್  ನಿಂದ ತಿಳಿದು ಬಂದಿದೆ. ಇಂದು 8 ಜನರಿಗೆ ಕೊರೊನಾ ವೈರಸ್ ದೃಢವಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 520 ಕ್ಕೆ ಏರಿಕೆಯಾಗಿದೆ. ಹೊಸದಾಗಿ  ಸೋಂಕಿತರ ಪೈಕಿ ಬೆಂಗಳೂರಿನಲ್ಲಿ 1, ಕಲಬುರ್ಗಿಯಲ್ಲಿ 6, […]

Advertisement

Wordpress Social Share Plugin powered by Ultimatelysocial