ಭಾರತ ಮತ್ತು ಚೀನಾ ನಡುವೆ ಉಂಟಾಗಿರುವ ಲಡಾಕ್ ಗಡಿಯ ಸಂಘರ್ಷದ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರ ಜತೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಲು ಸಿದ್ಧವಿರುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ನರೇಂದ್ರ ಮೋದಿ ಜೊತೆಗೆ ಮಾತನಾಡಿದ್ದು, ಚೀನಾದ ಜೊತೆ ನಡೆಯುತ್ತಿರುವ ಗಡಿ ಬಿಕ್ಕಟ್ಟಿನ ವಿಚಾರದಲ್ಲಿ ಅವರು ಒಳ್ಳೆಯ ಮೂಡ್ ನಲ್ಲಿಲ್ಲ ಎಂದು ಹೇಳಿದರೆ.ಆದರೆ ಭಾರತ ಮಾತ್ರ ಯಾವುದೇ ಮದ್ಯಸ್ಥಿಕೆ ಬೇಡ ಎಂದು ಸ್ಪಷ್ಟವಾಗಿದೆ ಹೇಳಿದೆ ಅತಿದೊಡ್ಡ ಜನಸಂಖ್ಯೆ ಇರುವ ಎರಡು ರಾಷ್ಟ್ರಗಳ ನಡುವೆ ಬಹುದೊಡ್ಡ ಸಂಘರ್ಷ ಉಂಟಾಗಿದೆ. ಎರಡು ದೇಶಗಳು ಸಹ ಬಲಿಷ್ಠವಾದ ಸೇನೆಗಳನ್ನು ಹೊಂದಿದೆ. ಈ ದೇಶದ ಮಾಧ್ಯಮಗಳು ನನ್ನನ್ನು ಇಷ್ಟಪಡುವುದಕ್ಕಿಂತ ಭಾರತದಲ್ಲಿ ನನ್ನನ್ನು ಹೆಚ್ಚು ಇಷ್ಟಪಡುತ್ತಾರೆಂದು ನಾನು ಭಾವಿಸುತ್ತೇನೆ. ನಾನು ಮೋದಿ ಅವರನ್ನು ಇಷ್ಟಪಡುತ್ತೇನೆ.ಅವರು ಜಂಟಲ್ ಮ್ಯಾನ್ ಎಂದು ವೈಟ್ಹೌಸ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮೋದಿಯವರನ್ನು ಹೊಗಳಿದರೆ.