ಮಕ್ಕಳಿಗೆ ಆನ್ ಲೈನ್ ಪಾಠ ಬೇಡ

ಕೊರೊನಾ ಲಾಕ್ಡೌನ್ ಹಂತದಲ್ಲಿ ಎಲ್ಕೆಜಿ, ಯುಕೆಜಿ ಸೇರಿದಂತೆ ಎಲ್ಲಾ ಶಾಲೆಗಳು, ವಿದ್ಯರ‍್ಥಿಗಳಿಗೆ ಆನ್ಲೈನಲ್ಲಿ ಪಾಠ ಪ್ರವಚನ ನಡೆಸುತ್ತಿರುವುದನ್ನು ನಿಮ್ಹಾನ್ಸ್ ವಿರೋಧಿಸಿದೆ.  ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಅನ್ವಯ ೬ ರ‍್ಷ ಒಳಪಟ್ಟ ಮಕ್ಕಳು ಒಂದು ಗಂಟೆಗಿಂತ ಅಧಿಕ ಸಮಯ ಡಿಜಿಟಲ್ ಸ್ಕ್ರೀನ್ಗಳನ್ನು ನೋಡಬಾರದು. ಇದರಿಂದ ಮಕ್ಕಳ ಕಣ್ಣುಗಳಿಗೆ ಪರಿಣಾಮ ಬೀರುವುದರ ಜತೆಗೆ, ಅವರನ್ನು ದೈಹಿಕ ಮತ್ತು ಮಾನಸಿಕವಾಗಿಯೂ ತೊಂದರೆಗೀಡು ಮಾಡುತ್ತದೆ. ಆದ್ದರಿಂದ ೬ ರ‍್ಷದ ಒಳಗಿನ ಮಕ್ಕಳನ್ನು ಆನ್ಲೈನ್, ಸ್ಕ್ರೀನ್ ಆಧಾರಿತ ಶಿಕ್ಷಣ ಅಥವಾ ತರಬೇತಿಯಿಂದ ಆದಷ್ಟು ದೂರ ಇಡುವುದು ತುಂಬಾ ಒಳ್ಳೆಯದೆಂದು ಪ್ರತಿಪಾದಿಸಿದೆ. ಈ ಆನ್ ಲೈನ್ ಶಿಕ್ಷಣ ನೀಡುವ ಪದ್ಧತಿ ಇತ್ತೀಚೆಗೆ ಚಾಲನೆಗೊಂಡಿದೆ. ಅದಲ್ಲದೇ ಎಲ್ಕೆಜಿ ಮತ್ತು ಯುಕೆಜಿ ಸೇರಿದಂತೆ ೬ ರ‍್ಷ ಒಳಪಟ್ಟಿರುವ ಮಕ್ಕಳಿಗೆ ಆನ್ಲೈನ್ ಮೂಲಕ ಶಿಕ್ಷಣ ಕಲಿಸುವ ತರಬೇತಿಯನ್ನು ನಮ್ಮ ಶಿಕ್ಷಕರು ಪಡೆದಿಲ್ಲ, ಹಾಗೆಯೇ ಅಂತಹ ಕಲೆ ಅವರಿಗೆ ತಿಳಿದಿಲ್ಲ. ನಮ್ಮ ಶಿಕ್ಷಕರಿಗೆ ಇಲ್ಲಿವರೆಗೆ ಆನ್ಲೈನ್ನಲ್ಲಿ ಪಾಠ ಮಾಡಿರುವ ಅನುಭವವಿಲ್ಲ. ಈ ಸಂರ‍್ಭದಲ್ಲಿ ಆನ್ಲೈನ್ ಶಿಕ್ಷಣದ ಹೆಸರಿನಲ್ಲಿ ಮಕ್ಕಳನ್ನು ಪ್ರಯೋಗಕ್ಕೆ ಒಳಪಡಿಸುವುದು ಕ್ರಿಮಿನಲ್ ಅಪರಾಧವಾಗಲಿದೆ,” ಎಂದು ನಿಮ್ಹಾನ್ಸ್ ಎಚ್ಚರಿಕೆ ನೀಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಈ ಪ್ರದೇಶದಲ್ಲಿ ಕೊರೊನಾ ಪತ್ತೇನೆ ಇಲ್ಲ…

Mon May 25 , 2020
ನವದೆಹಲಿ:  ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದ್ದು ಸುಮಾರು 1.38 ಲಕ್ಷ ಜನರಿಗೆ ಸೋಂಕು ತಗುಲಿದೆ. ಆದರೆ ಲಕ್ಷದ್ವೀಪದಲ್ಲಿ ಇಲ್ಲಿಯವರೆಗೂ ಕೊರೊನಾ ಸೋಂಕು ಪತ್ತೆಯಾಗಿಲ್ಲ.  35 ಸಣ್ಣ ಸಣ್ಣ ದ್ವೀಪಗಳಿರುವ ಲಕ್ಷದ್ವೀಪ 64 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಕೇರಳ ರಾಜ್ಯದ ಕರಾವಳಿ ತೀರಕ್ಕೆ ಲಕ್ಷದ್ವೀಪ ಹೊಂದಿಕೊಂಡಿದ್ದು ವ್ಯವಹಾರಿಕವಾಗಿ ದಕ್ಷಿಣ ರಾಜ್ಯಗಳನ್ನು ಅವಲಂಭಿಸಿದೆ. ಇಂದು  ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಲಕ್ಷದ್ವೀಪದಲ್ಲಿ ಕೊರೊನಾ ಸೋಂಕು ಪತ್ತೆಯಾಗಿಲ್ಲ ಎಂದು […]

Advertisement

Wordpress Social Share Plugin powered by Ultimatelysocial