ಮಕ್ಕಳಿಗೆ ಪರಿಸರ ಕಾಳಜಿ ಪಾಠ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಮಕ್ಕಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.  ಮೈಸೂರು ತಾಲೂಕಿನ ಹುಯಿಲಾಳು ಗ್ರಾಮ ಪಂಚಾಯಿತಿ ವತಿಯಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಪರಿಸರ ಉಳಿವಿಕೆ ಹಾಗೂ ಅದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.  ತಾಲೂಕು ಪಂಚಾಯಿತಿ ವತಿಯಿಂದ ನೂರಾರು ಮಕ್ಕಳಿಗೆ ಉಪಯುಕ್ತ ಕರವಾದ  ವಿವಿಧ ಮಾದರಿಯ ಗಿಡ ಹಾಗೂ ಸ್ಯಾನಿಟೈಸರ್ , ಮಾಸ್ಕ್ ಗಳನ್ನು ವಿತರಿಸಲಾಯಿತು ಎಂದು ಗ್ರಾಮ ಪಂಚಾಯತಿ ಸದಸ್ಯ ಊಯಿಲಾಳಿ ರಾಮಸ್ವಾಮಿ ತಿಳಿಸಿದ್ದಾರೆ

ದಿನದಿಂದ ದಿನಕ್ಕೆ ತಾಪಮಾನ ಬದಲಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಾಣ ಮಾಡಲೆಂದು ಬೇವಿನ ಗಿಡ ಸೀಬೆ ಗಿಡ ದಾಳಿಂಬೆ ಗಿಡ ಸೇರಿದಂತೆ ವಿವಿಧ ಮಾದರಿಯ ಗಿಡಗಳನ್ನು ನೀಡುವ ಜೊತೆಗೆ ಮುಂದಿನ ದಿನಗಳಲ್ಲಿ ಶಾಲೆ ಆರಂಭವಾಗುವುದರಿಂದ ಮಕ್ಕಳಿಗೆ ಕೊರನಾ ವೈರಸ್ ತಡೆಯಲು ಉತ್ತಮ ವಾತಾವರಣ ಕಲ್ಪಿಸಲು ಸಹಾಯವಾಗುತ್ತದೆ ಎಂದು ಹೇಳಿದರು.

ಗ್ರಾಮ ಪಂಚಾಯತಿ ಮಾಡುತ್ತಿರುವ ಕಾರ್ಯ ಮಕ್ಕಳಲ್ಲಿ ಪರಿಸದ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದೆ ಇದರಿಂದ ಮಕ್ಕಳಿಗೆ ಪರಿಸರ ಬಗ್ಗೆ ಹೆಚ್ಚಿನ ಕಾಳಜಿ ತೋರಿಸಿದಂತಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ಸುಂದರ್ ಕುಮಾರ್ ತಿಳಿಸಿದ್ದಾರೆ.

ನಮಗೆ ಗಿಡಗಳನ್ನು ನೀಡಿರುವುದು ಸಂತಸ ತಂದಿದೆ ಗಿಡ ನೆಡುವುದರಿಂದ ಉತ್ತಮವಾದ ವಾತಾವರಣದ ಜೊತೆಗೆ ಉಪಯುಕ್ತವಾದ ಹಣ್ಣುಗಳು ಸಿಗಲಿದೆ ಸ್ಯಾನಿಟೈಸರ್ ನಿಂದ ಕೊರೊನ ತಡೆಯಲು ಸಹಕಾರಿಯಾಗಿದೆ ಎಂದು ವಿದ್ಯಾರ್ಥಿಗಳಾದ ಪಲ್ಲವಿ ಹಾಗೂ ಮಹೇಶ್ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕ್ವಾರಂಟೈನಲ್ಲಿದ್ದ  ಬಾಲಕ‌ ಸಾವು

Thu Jun 4 , 2020
ದೇವದುರ್ಗ: ರಾಯಚೂರು‌ ಜಿಲ್ಲೆ ದೇವದುರ್ಗ ಪಟ್ಟಣದಲ್ಲಿ ಕ್ವಾರಂಟೈನ್ ಇದ್ದ ಬಾಲಕ‌ ಸಾವನಪ್ಪಿದ್ದಾನೆ. ಮಹಾರಾಷ್ಟ್ರದಿಂದ ಬಂದಿದ್ದ ಬಾಲಕ ಹಾಗೂ ಅವನ ಸೋದರ ಅತ್ತೆಯನ್ನು ಪಟ್ಟಣದ ಡಿಗ್ರಿ ಕಾಲೇಜು ಪಕ್ಕದ ಬಿಸಿಎಂ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಮೇ 16 ರಂದು ಮಹಾರಾಷ್ಟ್ರದಿಂದ ಬಂದಿದ್ದ ಬಾಲಕನನ್ನು ಪರೀಕ್ಷೆಗೆ ಒಳಪಡಿಸಿದಾಗ ವರದಿಯಲ್ಲಿ  ನೆಗೆಟಿವ್ ಬಂದಿತ್ತು.  ಬಾಲಕ ಮತ್ತು ಅವರ ಅತ್ತೆಯನ್ನು ಇಂದಿಗೆ ಕ್ವಾರಂಟೈನ್ ನಲ್ಲಿ ಇರಿಸಿ 20 ದಿನಗಳಾದ್ರೂ ಇವರನ್ನು ಮನೆಗೆ ಕಳುಹಿಸಿರಲಿಲ್ಲ. ಜೂನ್ […]

Advertisement

Wordpress Social Share Plugin powered by Ultimatelysocial